ಶ್ರೀನಗರ(ಡಿ.26):  ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನ ಮಾನ ರದ್ದು ಮಾಡಿದ ಬಳಿಕ ಶಾಂತಿ ಸ್ಥಾಪನೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಉಗ್ರರ ಕಾರ್ಯಚರಣೆಗೆ ಸಂಪೂರ್ಣ ಬ್ರೇಕ್ ಹಾಕಲು ಭಾರತೀಯ ಸೇನೆ ಪ್ರಯತ್ನ ನಡೆಸುತ್ತಿದೆ. ಇದರ ಫಲವಾಗಿ ಹಲವೆಡೆ ಕೂಬಿಂಗ್ ಹಾಗೂ ಸರ್ಚ್ ಆಪರೇಶನ್ ನಡೆಸುತ್ತಿದೆ. ಹೀಗೆ ನಡೆಸಿದ ಕಾರ್ಯಚರಣೆಯಲ್ಲಿ ಇಬ್ಬರು ಉಗ್ರರರನ್ನು ಭಾರತೀಯ ಸೇನೆ ಹಾಗೂ ಜಮ್ಮ ಮತ್ತು ಕಾಶ್ಮೀರ ಪೊಲೀಸ್ ಹೊಡೆದುರುಳಿಸಿದೆ.

ಭಾರತೀಯ ಸೇನೆ, ವಾಯು, ನೌಕಾಪಡೆ; 3ರಲ್ಲೂ ಸೇವೆ ಸಲ್ಲಿಸಿದ ಏಕೈಕ ಯೋಧನಿಗೆ ಹುಟ್ಟು ಹಬ್ಬದ ಸಂಭ್ರಮ!.

ಶೋಪಿಯಾನ್ ಜಿಲ್ಲೆಯ ಕನಿಗಾಮ್ ವಲಯದಲ್ಲಿ ಉಗ್ರರು ಅಡಿಗಿರುವ ಮಾಹಿತಿ ಪಡೆದ ಭಾರತೀಯ ಸೇನೆ ಹಾಗೂ ಕಾಶ್ಮೀರ ಪೊಲೀಸ್ ಜಂಟಿ ಕಾರ್ಯಚರಣೆ ನಡೆಸಿತು. ಸರ್ಚ್ ಆಪರೇಶನ್ ಆರಂಭಿಸಿದ ಕೆಲ ಗಂಟೆಗಳಲ್ಲಿ ಅಡಿಗಿದ್ದ ಉಗ್ರರು ಸೇನೆ ಹಾಗೂ ಪೊಲೀಸರ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ.

ಪಾಕ್ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ; ಭಾರತದ ತಿರುಗೇಟಿಗೆ ಐವರ ಸಾವು !

ತಕ್ಷಣ ಕಾರ್ಯಪ್ರವೃತ್ತರಾದ ಸೇನೆ ಹಾಗೂ ಪೊಲೀಸ್, ಪ್ರತ್ಯುತ್ತರ ನೀಡಿದೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಸೇನೆ ಹೊಡೆದುರುಳಿಸಿತು. ಇನ್ನು ಕೆಲ ಉಗ್ರರು ಅಡಗಿರುವ ಶಂಕೆ ಇದೆ. ಕಾಳಗದಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ವಾರ ಉಗ್ರರು CRPF ಯೋಧರ ಮೇಲೆ ದಿಢೀರ್ ದಾಳಿ ಮಾಡಿದ್ದರು. ಈ ವೇಳೆ ಒರ್ವ ಯೋಧ ಗಾಯಗೊಂಡಿದ್ದ. ಸಂಜೆ 6.40ಕ್ಕೆ  CRPF ಮೇಲೆ ಉಗ್ರರು ಗ್ರೇನೇಡ್ ದಾಳಿ ಆರಂಭಿಸಿದ್ದರು. ಬಳಿಕ ಗುಂಡಿನ ದಾಳಿ ನಡೆಸಿದ್ದರು. ಚಿಕಿತ್ಸೆ ಪಡೆಯುತ್ತಿದ್ದ  CRPF ಯೋಧ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.