Asianet Suvarna News Asianet Suvarna News

ಭಾರತೀಯ ಸೇನೆ, ವಾಯು, ನೌಕಾಪಡೆ; 3ರಲ್ಲೂ ಸೇವೆ ಸಲ್ಲಿಸಿದ ಏಕೈಕ ಯೋಧನಿಗೆ ಹುಟ್ಟು ಹಬ್ಬದ ಸಂಭ್ರಮ!

ಒರ್ವ ಮೂರು ಸೇನಾ ವಿಭಾಗದಲ್ಲಿ ಸೇವೆ ಸಲ್ಲಿಸಲು ಸಾಧ್ಯವೇ? ವಿಶ್ವದ ಯಾವುದೇ ಸೇನೆಯಲ್ಲೂ ಇದು ಅಸಾಧ್ಯ. ಆದರೆ ಭೂ ಸೇನೆ, ವಾಯು ಸೇನೆ ಹಾಗೂ ನೌಕಾಪಡೆಗಳಲ್ಲಿ ಸೇವೆ ಸಲ್ಲಿಸಿದ ಏಕೈಕ ಯೋಧ ಇದೀಗ 100ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ.

Prithipal Singh Gill who served Indian Army Navy Air Force celebrated his 100th birthday ckm
Author
Bengaluru, First Published Dec 11, 2020, 6:14 PM IST

ನವದೆಹಲಿ(ಡಿ.11): ವಿಶ್ವದ ಯಾವುದೇ ಸೇನೆಯಲ್ಲಿ ಸಾಧ್ಯವಾಗದ ಸಾಧನೆಯೊಂದನ್ನು ಭಾರತೀಯ ಯೋಧ ಮಾಡಿದ್ದಾರೆ. ಹೌದು, ಭಾರತೀಯ ಸೇನೆ, ವಾಯುಸೇನೆ ಹಾಗೂ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ಕರ್ನಲ್ ಪ್ರೀತಿಪಾಲ್ ಸಿಂಗ್ ಗಿಲ್ ಇಂದು(ಡಿ.11) 100ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

ಪಾಕ್ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ; ಭಾರತದ ತಿರುಗೇಟಿಗೆ ಐವರ ಸಾವು !.

ಕರ್ನಲ್ ಪ್ರೀತಿಪಾಲ್ ಸಿಂಗ್ ಗಿಲ್ ಮೂರು ಸೇನಾ ವಿಭಾಗದಲ್ಲಿ ಸೇವೆ ಸಲ್ಲಿಸಿದ ಏಕೈದ ಸೇನಾಧಿಕಾರಿಯಾಗಿದ್ದಾರೆ. ಇದೀಗ ಪ್ರೀತಿಪಾಲ್ ಸಿಂಗ್ ಗಿಲ್ 100ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆರೋಗ್ಯವಾಗಿರುವ ಪ್ರೀತಿಪಾಲ್ ಸಿಂಗ್, ತಮ್ಮ ಸೇನಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

 

ಪ್ರೀತಿಪಾಲ್ ಸಿಂಗ್ ಗಿಲ್ ವಿಶ್ವ ಎರಡನೇ ಮಹಾಯುದ್ದಕ್ಕೂ ಮೊದಲು ಭಾರತೀಯ ವಾಯು ಸೇನೆ ಸೇರಿಕೊಂಡಿದ್ದರು. ಯುವ ಪೈಲೆಟ್ ಆಗಿ ನೇಮಕಗೊಂಡ ಕರ್ನಲ್ ಗಿಲ್, ಬಳಿಕ ನೌಕಾಪಡೆ ಮೂಲಕ ಸಮುದ್ರದಲ್ಲಿ ಶತ್ರುಗಳ ಮೇಲೆ ಹದ್ದಿನ ಕಣ್ಣಿಟ್ಟು ಸೇವೆ ಸಲ್ಲಿಸಿದ್ದರು. ಇದಾದ ಬಳಿಕ ವಿಶ್ವ ಎರಡನೇ ಮಹಾಯುದ್ದ ಹಾಗೂ ಭಾರತ-ಪಾಕಿಸ್ತಾನ 1965ರ ಯುದ್ದದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

 

ಸೇನಾ ನಿವೃತ್ತಿಗೂ ಮೊದಲು ಕರ್ನಲ್ ಗಿಲ್ ಅಸ್ಸಾಂ ರೈಫಲ್ಸ್ ಸೆಕ್ಟರ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು.  ಸೇನಾಧಿಕಾರಿಗಳು, ಸಹೋದ್ಯೋಗಿಗಳು ಕರ್ನಲ್ ಗಿಲ್‌ಗೆ ಹುಟ್ಟು ಹಬ್ಬದ ಶುಭಕೋರಿದ್ದಾರೆ. ಈ ಕುರಿತು ಲೆಫ್ಟೆನೆಂಟ್ ಜನರಲ್ ಕೆಜಿ ಸಿಂಗ್ ಟ್ವಿಟರ್ ಮೂಲಕ ಈ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಮೂರು ಸೇನಾ ವಿಭಾಗದಲ್ಲಿ ಸೇವೆ ಸಲ್ಲಿಸಿದ ಸೇನಾಧಿಕಾರಿಗೆ ಸಲಾಂ ಎಂದಿದ್ದಾರೆ. 

 

ಕರ್ನಲ್ ಗಿಲ್ ದೇವ್ಲಾಲಿಯ ಸ್ಕೂಲ್ ಆಫ್ ಆರ್ಟಿಲರಿಯಲ್ಲಿ ತರಬೇತಿ ಪಡೆದಿದ್ದರು  ಗ್ವಾಲಿಯರ್ ಮೌಂಟೇನ್ ಬ್ಯಾಟರಿಯಲ್ಲಿ ನೇಮಕಗೊಂಡಿದ್ದರು.  ನಿವೃತ್ತಿ ಬಳಿಕ ಕರ್ನಲ್ ಪ್ರೀತಿಪಾಲ್ ಸಿಂಗ್ ಗಿಲ್ ತಮ್ಮ ಹುಟ್ಟೂರಾದ ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

Follow Us:
Download App:
  • android
  • ios