ಕೇವಲ ಮೂರು ಅಡಿ ಜಾಗದಲ್ಲಿ ವ್ಯಕ್ತಿಯೊಬ್ಬರು ಎರಡು ಮಹಡಿಯ ಮನೆ ನಿರ್ಮಿಸಿದ್ದಾರೆ. ಕೆಳಗೆ ಅಂಗಡಿಗಳಿದ್ದು, ಮೇಲೆ ವಾಸದ ಮನೆಯಿರುವ ಈ ಕಟ್ಟಡದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿದೆ ಎನ್ನಲಾಗುತ್ತಿದೆ.

ಕೆಲವರಿಗೆ ಎಷ್ಟಿದ್ದರೂ ಸಾಲುವುದಿಲ್ಲ. ಇನ್ನೂ ಕೆಲವರು ಇರುವುದರಲ್ಲೇ ಸುಖ ಕಾಣುವಂತಹ ಜನರು ಯಾಕೆ ಈ ಮಾತು ಅಂತಿರಾ? ಅನೇಕರು 30*40 ಸೈಟ್ ನಲ್ಲಿ ಮನೆ ಕಟ್ಟಿದ್ದವರೇ ಜಾಗ ಸಾಕಾಗಲ್ಲ, ಮನೆ ಸಣ್ಣದಾಯ್ತು ಎಂದು ಗೋಳಾಡುತ್ತಾರೆ. ಹೀಗಿರುವಾಗ ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಬರೀ ಮೂರು ಅಡಿ ಜಾಗದಲ್ಲಿ ಎರಡು ಮಹಡಿಯ ಮನೆ ಕಟ್ಟಿದ್ದು, ಈ ಮನೆಯ ವೀಡಿಯೋ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಆದರೆ ಈ ಮನೆ ಎಲ್ಲಿ ನಿರ್ಮಿಸಲಾಗಿದೆ ಎಂಬ ಮಾಹಿತಿ ವೀಡಿಯೋದಲ್ಲಿ ಇಲ್ಲ. ಆದರೆ ಮೂರು ಅಡಿಗೂ ಕಡಿಮೆ ಜಾಗದಲ್ಲಿ ನಿರ್ಮಿಸಿದ ಮನೆ ಎಂದು ಈ ವಿಡಿಯೋ ವೈರಲ್ ಆಗ್ತಿದ್ರೆ ಕೆಲವರು ಇದನ್ನು ಎಐ ವೀಡಿಯೋ ಎಂದು ಹೇಳುತ್ತಿದ್ದಾರೆ.

ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಈ ಮನೆಯೂ ಎರಡು ಅಂತಸ್ಥಿನ ಮನೆಯಾಗಿದ್ದು, ಮನೆಯ ಕೆಳಭಾಗದಲ್ಲಿ ಅಂಗಡಿಗಳನ್ನು ನಿರ್ಮಿಸುವುದಕ್ಕೆ 5 ಶಟರ್‌ಗಳಿರುವ ಪ್ರತ್ಯೇಕ ಪ್ರತ್ಯೇಕವಾಗ ಶಾಪ್‌ಗಾಗಿ ಬಳಸುವಂತಹ ಜಾಗ ಮಾಡಲಾಗಿದೆ. ಹಾಗೆಯೆ ಮೊದಲ ಮಹಡಿಗೆ ನೆಲದಿಂದ ಮೆಟ್ಟಿಲನ್ನು ನಿರ್ಮಿಸಲಾಗಿದ್ದು, ಮೆಟ್ಟಿಲು ಹತ್ತುತ್ತಿದ್ದಂತೆ ಬಾಗಿಲು ಸಿಗುತ್ತದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ ಜನ ಹಲವು ಕಾಮೆಂಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಕತ್ರಾದಲ್ಲಿ ಈ ಮನೆ ಇದೆ ಎನ್ನಲಾಗುತ್ತಿದ್ದು, @renuy305 ಎಂಬುವವರು ಈ ಮನೆಯ ಫೋಟೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಮೂರು ಅಡಿಗಿಂತ ಕಡಿಮೆ ಜಾಗದಲ್ಲಿ ನಿರ್ಮಾಣವಾಗಿರುವ ಈ ಸಂಪೂರ್ಣ ಮನೆ ಈಗ ವಿಶಿಷ್ಟ ಮನೆ ಎಂದು ಎಲ್ಲರ ಗಮನ ಸೆಳೆಯುತ್ತಿದೆ. ಸರಿಸುಮಾರು 3 ಅಡಿ ಅಗಲದ ಜಾಗದಲ್ಲಿ ನಿರ್ಮಿಸಲಾದ ಈ ಮನೆ ಚಿಕ್ಕದಾಗಿ ಕಾಣಿಸಬಹುದು, ಆದರೆ ಅದನ್ನು ನಿರ್ಮಿಸಿದವರ ದೃಷ್ಟಿಕೋನ, ಕಠಿಣ ಪರಿಶ್ರಮ ಮತ್ತು ಧೈರ್ಯದಲ್ಲಿ ಇದು ವಿಶಾಲವಾಗಿದೆ. ಐದು ಅಂಗಡಿಗಳಿರುವ ಕತ್ರಾದ ಈ ಸ್ಥಳದಲ್ಲಿ ಮೆಟ್ಟಿಲುಗಳ ಬಳಿ ಉಳಿದಿರುವ ಸಣ್ಣ ಜಾಗದಲ್ಲಿ ಈ ಮನೆಯನ್ನು ನಿರ್ಮಿಸಲಾಗಿದೆ. ಸಾಮಾನ್ಯ ಜನರು ಮನೆ ನಿರ್ಮಿಸುವುದನ್ನು ಊಹಿಸಲೂ ಸಾಧ್ಯವಾಗದಿರುವಾಗ ವ್ಯಕ್ತಿಯೊಬ್ಬರು ಬಲವಾದ ದೃಢಸಂಕಲ್ಪದಿಂದ ಸಣ್ಣ ಜಾಗದಲ್ಲಿಯೂ ಕನಸಿನ ಮನೆ ನಿರ್ಮಿಸಬಹುದು ಎಂದು ಸಾಬೀತುಪಡಿಸಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮದುವೆ ದಿನ ತಾಳಿ ಮರೆತಂತೆ ಸಿಂದೂರವನ್ನೇ ಮರೆತೋದ ಕುಟುಂಬ: ಅನಾಹುತ ತಪ್ಪಿಸಿದ ಬ್ಲಿಂಕಿಟ್‌

ಆದರೆ ಈ ಪೋಸ್ಟ್‌ಗೆ ಸಖತ್ ಕಾಮೆಂಟ್‌ ಮಾಡಿದ್ದಾರೆ. ಈ ಕಟ್ಟಡದಲ್ಲಿರುವ ಅಂಗಡಿಯ ಬೆಲೆ ಎಷ್ಟು ಎಂದು ಒಬ್ಬರು ಕೇಳಿದ್ದಾರೆ. ಕೆಳಗೆ ಪಾನ್ ಅಂಗಡಿ ಮೇಲೆ ಮನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯವನ್ನು ಒಂದು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಇದನ್ನೂ ಓದಿ: ಟೆಲಿಗ್ರಾಫ್ ಸಂಸ್ಥಾಪಕನ ಬಿಗ್ ಆಫರ್: ತನ್ನ ವೀರ್ಯ ಬಳಸಿ ತಾಯಿಯಾಗಲು ಬಯಸುವರಿಗೆ IVF ವೆಚ್ಚ, ಎಲ್ಲಾ ಮಕ್ಕಳಿಗೆ ಆಸ್ತಿಯಲ್ಲಿ ಪಾಲು

View post on Instagram