ಕೋಗಿಲು ಕ್ರಾಸ್‌ನಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಬಯ್ಯಪ್ಪನಹಳ್ಳಿಯಲ್ಲಿ ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡಲು ಸಿದ್ದರಾಮಯ್ಯ ಸರ್ಕಾರ ನಿರ್ಧರಿಸಿದೆ. ಬಿಜೆಪಿ ವಿರೋಧದ ನಡುವೆಯೂ, ಈ ನಿರ್ಧಾರವನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರು (ಡಿ.30): ಕೋಗಿಲು ಕ್ರಾಸ್‌ನಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರ ಅದ್ಯಾವ ಕಾರಣಕ್ಕೆ ತರಾತುರಿಯಲ್ಲಿ ಮನೆ ಹಂಚಿಕೆಗೆ ಮುಂದಾಗುತ್ತಿದೆ ಅನ್ನೋದನ್ನು ದೇವರೆ ಬಲ್ಲ. ಆದರೆ, ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯದ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತದೆ. ಹಾಗಿದ್ದರೂ ಸಿಎಂ ಸಿದ್ದರಾಮಯ್ಯ 'ಇದೊಂದೇ ಪ್ರಕರಣಕ್ಕೆ' ಈ ವಿನಾಯಿತಿ ನೀಡುತ್ತಿದ್ದಾರೆ. ಮನೆ ಕಳೆದುಕೊಂಡವರಿಗೆ ಬಯ್ಯಪ್ಪನಹಳ್ಳಿಯಲ್ಲಿ ಫ್ಲ್ಯಾಟ್ ನೀಡೋದಾಗಿ ಹೇಳಿದ್ದಾರೆ.
ಮನೆ ಹಂಚಿಕೆಗೆ ಬಿಜೆಪಿ ವಿರೋಧ ವಿಚಾರದ ಬಗ್ಗೆ ಮಾತನಾಡಿರುವ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, 'ಯಾಕೆ ವಿರೋಧ ವ್ಯಕ್ತಪಡಿಸ್ತಿದ್ದಾರೆ. ಹೈಕಮಾಂಡ್ ಹಸ್ತಕ್ಷೇಪ ಯಾವುದೂ ಇಲ್ಲ. ಸಿಎಂಗೆ ಬಡವರ ಬಗ್ಗೆ knowledge ಇದ್ದ ಕಾರಣಕ್ಕೆ ಮನೆಗಳನ್ನ ಕೊಡಲು ತೀರ್ಮಾನ ಮಾಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಯಾರ್ಯಾರು ಇದ್ದಾರೆ ಅವರಿಗೆ ಸರಿಯಾಗಿ ನ್ಯಾಯ ಒದಗಿಸಬೇಕು. ಡಾಕ್ಯುಮೆಂಟ್ ವೆರಿಫಿಕೇಶನ್ ಮಾಡೋಕೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಡಾಕ್ಯುಮೆಂಟ್ ವೆರಿಫಿಕೇಶನ್ ಮಾಡುತ್ತಿದ್ದಾರೆ. ಸ್ಥಳಕ್ಕೆ ಹೋಗಿ ಅಲ್ಲೇ ಕೂತು ಪರಿಶೀಲನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯದವರು ಯಾರಿದ್ದಾರೆ ಅವರಿಗೆ ಮಾತ್ರ ಮನೆ ನೀಡಲಾಗುತ್ತದೆ. ಒಟ್ಟು 187 ಮನೆಗಳು ತೆರವಾಗಿವೆ. ಅದರಲ್ಲಿ ಕೇವಲ 20 ಜನ ಹೊರಗಿನವರಿದ್ದಾರೆ. ಉಳಿದವರೆಲ್ಲ ಬೆಂಗಳೂರು ನಗರದವರೇ. ನಮ್ಮ ರಾಜ್ಯದವರೇ ಆಗಿದ್ದಾರೆ. ಅವರು ಯಾದಗಿರಿ, ಗುಲ್ಬರ್ಗ, ಬೀದರ್ ಕಡೆಯವರು. ಹೊರಗಡೆಯವರು 20 ಮಂದಿ ಇದ್ದಾರೆ ಎಂದು ತಿಳಿಸಿದ್ದಾರೆ.
ಒಂದು ಲಕ್ಷ ಮನೆ ಯೋಜನೆ ಅಡಿಯಲ್ಲಿ ನಿವೇಶನ
ಬ್ಯಾಟರಾಯನಪುರ ಕ್ಷೇತ್ರದವರೆ 71 ಜನ ಇದ್ದಾರೆ. ಒಂದು 5-6 ಜನ ಸರ್ವಜ್ಞನಗರ ಪುಲಕೇಶಿನಗರ, ಹೆಬ್ಬಾಳದವರಿದ್ದಾರೆ. ಯಾರಿಗೆ ಮನೆ ಕೊಡುತ್ತಿದ್ದೇವೆ ಅವರೆಲ್ಲ ನಮ್ಮ ರಾಜ್ಯದವರೇ. ಮನೆ ಕೊಡುವಾಗ ಹಾಗೇ ಕೊಡೋಕೆ ಯಾರಿಂದಲೂ ಸಾಧ್ಯವಿಲ್ಲ. ಬೀದೀಲಿ ಹೋಗೀ ಯಾರಿಗೂ ಇದನ್ನು ನೀಡಲು ಸಾಧ್ಯವಿಲ್ಲ. ಒಂದು ಲಕ್ಷ ಮನೆ ಯೋಜನೆ ಅಡಿಯಲ್ಲಿ ಕೊಡುತ್ತಿದ್ದೇವೆ. ಸರಿಯಾದ ದಾಖಲೆ ಇರುತ್ತದೆ. ಆಧಾರ್ ಕಾರ್ಡ್, ಬಿಪಿಎಲ್, ರೇಷನ್ ಕಾರ್ಡ್ ಸೇರಿದಂತೆ ಸರಿಯಾದ ಡಾಕ್ಯುಮೆಂಟ್ಸ್ ಇರುತ್ತೆ. ಯಾರ ಮನೆ ತೆರವಾಗಿದೆ ಅಂತಹವರಿಗೆ ಮುಖ್ಯಮಂತ್ರಿಗಳು ಒನ್ ಲ್ಯಾಕ್ ಸ್ಕೀಂನಲ್ಲಿ ಮನೆ ಕೊಡಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.
ನಕಲಿ ದಾಖಲೆ ಸೃಷ್ಟಿ ವಿಚಾರದ ಬಗ್ಗೆ ಮಾತನಾಡಿದ ಜಮೀರ್, ಅದೇ ವೆರಿಫಿಕೇಶನ್. ನಕಲಿ ಮಾಡಿದ್ದಾರಾ ಮತ್ತೊಂದೋ ಅನ್ನೋದು ಗೊತ್ತಾಗುತ್ತೆ. ಅದಕ್ಕೆ ಬಿಬಿಎಂಪಿ ಹಾಗೂ ರಾಜೀವ್ ಗಾಂಧಿ ನಿಗಮ ಅಧಿಕಾರಿಗಳಿಗೆ ಎರಡು ದಿನದೊಳಗೆ ದಾಖಲಾತಿ ಪರಿಶೀಲಿಸಲು ಹೇಳಿದ್ದಾರೆ ಎಂದು ತಿಳಿಸಿದರು.
ಕೇರಳ ಮುಖ್ಯಮಂತ್ರಿ ಗಳು ಬಂದು ಇಲ್ಲಿ ರಾಜಕೀಯ ಮಾಡಿದ್ದಾರೆ, ಇಲ್ಲಿ ರಾಜಕೀಯ ಮಾಡಿರುವ ಹಿನ್ನೆಲೆಯಲ್ಲಿ, ಮೊನ್ನೆ CWC ಮೀಟಿಂಗ್ ನಲ್ಲಿ ಸಿಎಂ ಹೋದಾಗ ವೇಣುಗೋಪಾಲ್ ಅವರು ಹೇಳಿದ್ದಾರೆ. ನ್ಯಾಷನಲ್ ನ್ಯೂಸ್ ಆಗಿದೆ ಏನಾಗಿದೆ ಅದನ್ನು ಸರಿಪಡಿಸಿ ಅಂತ ಹೇಳಿದ್ದಾರೆ,ತಪ್ಪಾ ಅದು. ನಮ್ಮದು ನ್ಯಾಷನಲ್ ಪಾರ್ಟಿ, ವೇಣುಗೋಪಾಲ್ ನಮ್ಮ ನಾಯಕರು. ಮಾಧ್ಯಮದಲ್ಲಿ ಬರ್ತಿದೆ ಅಂತ ಹೇಳಿದ್ದಾರೆ ಎಂದರು. ಕೊಡುಗು, ಚಿಕ್ಕಮಗಳೂರು ನೆರೆ ಸಂತ್ರಸ್ತರಿಗೆ ಮನೆ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾರೆ ಎಂದಿದ್ದಾರೆ.


