ಅಪರೂಪದ ಹಾಗೂ ಹಲವು ದಶಕಗಳಿಂದ ವಿಶ್ವದಿಂದಲೇ ಅಳಿಸಿ ಹೋಗಿರುವ ಎರಡು ತಲೆ, ನಾಲ್ಕು ಕಣ್ಣಿನ ತೋಳ ಹಾವು ಭಾರತದಲ್ಲಿ ಪ್ರತ್ಯಕ್ಷವಾಗಿದೆ. ಇದಕ್ಕೆ ತೋಳ ಹಾವು ಹೆಸರೇಕೆ? ಇದು ಅದೃಷ್ಠದ ಸಂಕೇತವೇ?
ಧಾನ್‌ಪುರ್ (ಅ.08) ಹಾವುಗಳಲ್ಲಿ ಹಲವು ಪ್ರಭೇದಗಳು ನಶಿಸಿ ಹೋಗಿದೆ. ಹಲವು ದಶಗಳಿಂದ ಸಂಪೂರ್ಣವಾಗಿ ನಶಿಸಿದ್ದ ಎರಡು ತಲೆ ಹಾವು ಭಾರತದಲ್ಲಿ ಪತ್ತೆಯಾಗಿದೆ. ಇದು ಅತ್ಯಂತ ಅಪರೂಪದ ಹಾವಾಗಿದೆ. ವಿಶೇಷ ಅಂದರೆ ಈ ಹಾವಿಗೆ ಒಂದೇ ಭಾಗದಲ್ಲಿ ಎರಡು ತಲೆ ಇದೆ. ನಾಲ್ಕು ಕಣ್ಣುಗಳಿವೆ. ಈ ವಿಶೇಷ ಹಾಗೂ ಅಪರೂಪದ ಹಾವಿಗೆ ತೋಳ ಹಾವು (Wolf snakes) ಎಂದು ಕರೆಯುತ್ತಾರೆ. ಗುಜರಾತ್‌ನ ದಾಹೋದಾ ಜಿಲ್ಲೆಯ ಧಾನ್‌ಪುರದಲ್ಲಿ ಈ ಹಾವು ಪ್ರತ್ಯಕ್ಷವಾಗಿದೆ. ಹಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ತೋಳ ಹಾವು ಅಪಾಯಕಾರಿನಾ?
ಅಪರೂಪದ ತೋಳ ಹಾವು ಅಪಾಯಕಾರಿಯಲ್ಲ, ವಿಷಕಾರಿಯಲ್ಲ. ಹಾವಿಗೆ ಪ್ರತ್ಯೇಕ ಎರಡು ತಲೆ ಇದೆ. ಒಟ್ಟು ನಾಲ್ಕು ಕಣ್ಣುಗಳಿವೆ. ಈ ಹಾವು ದಾನ್‌ಪುರ್ ಗ್ರಾಮಸ್ಥರ ಹೊಲದಲ್ಲಿ ಕಾಣಿಸಿಕೊಂಡಿದೆ. ತಕ್ಷಣವೇ ವಿಶೇಷ ಹಾವು ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಎರಡು ತಲೆ ಹಾವಿನಿಂದ ಆತಂಕ ಹೆಚ್ಚಾಗಿದೆ. ಇದು ಅಪಾಯದ , ಗಂಡಾಂತರದ ಸಂಕೇತ ಎಂದು ಭಯಗೊಂಡಿದ್ದಾರೆ. ತಕ್ಷಣವೇ ಗ್ರಾಮದ ಮಂಡಲ್ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.
ತೋಳ ಹಾವು ಹೆಸರೇಕೆ?
ತೋಳ ಹಾವು ಎರಡು ತಲೆಯ ಹಾವುಗಳಲ್ಲ. ಕೆಲ ಅಪರೂಪದ ಸಂದರ್ಭಗಳಲ್ಲಿ ಎರಡು ತಲೆ ಕಾಣಿಸಿಕೊಳ್ಳುತ್ತದೆ. ಹಲವು ಬಾರಿ ಎರಡು ತಲೆ, ಹೆಚ್ಚುವರಿ ಕಾಲುಗಳ ಪ್ರಾಣಿಗಳು ಜನಿಸಿವೆ. ಭ್ರೂಣದ ಅಪೂರ್ಣ ಬೇರ್ಪಡುವಿಕೆಯಿಂದ ಸಂಭವಿಸುತ್ತದೆ ಎಂದು ವರದಿಗಳು ಹೇಳುತ್ತದೆ. ಎರಡು ಪ್ರತ್ಯೇಕ ತಲೆ ಹೊಂದಿದ್ದರೂ ಒಂದೇ ದೇಹವಿರುತ್ತದೆ. ಈ ಹಾವಿನ ಹಲ್ಲುಗಳು ತೋಳದ ರೀತಿ ಇದೆ. ಹಲ್ಲುಗಳ ರಚನೆ ತೋಳದ ರೀತಿ ಇರುವ ಕಾರಣ ತೋಳ ಅಥವಾ ವೂಲ್ಫ್ ಅನ್ನೋ ಹೆಸರು ಬಂದಿದೆ.
ತೋಳ ಹಾವು ಅಪರೂಪದ ಹಾವು. ಇದೀಗ ಮತ್ತೆ ಕಾಣಿಸಿಕೊಂಡಿದೆ. ಆದರೆ ಉರಗ ತಜ್ಞರ ಪ್ರಕಾರ, ಎರಡು ತಲೆ, ಹೆಚ್ಚುವರಿ ಕಾಲು, ಎರಡು ದೆಹಗಳ ಪ್ರಾಣಿಗಳು ಹೆಚ್ಚು ಕಾಲ ಜೀವಿಸುವುದಿಲ್ಲ. ಹೀಗಾಗಿ ತೋಳ ಹಾವಿನ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ.
ಅದೃಷ್ಠದ ಸಂಕೇತ ಎಂದ ಜನರು
ಗ್ರಾಮಸ್ಥರು ಆರಂಭದಲ್ಲೇ ಈ ಹಾವು ನೋಡಿ ಆತಂಕ ಪಟ್ಟಿದ್ದಾರೆ. ಎರಡು ತಲೆ ಹಾವು ಪ್ರತ್ಯಕ್ಷವಾಗಿದೆ. ಹೀಗಾಗಿ ಇದು ಗ್ರಾಮಕ್ಕೆ ಕೇಡುಗಾಲ ಎಂದು ಮಾತನಾಡಿದ್ದಾರೆ. ಆದರೆ ಉರಗ ತಜ್ಞರು ಈ ಹಾವಿನ ಕುರಿತು ತಿಳಿ ಹೇಳಿದ್ದಾರೆ. ತೋಳ ಹಾವಿನ ಅಪರೂಪದ ಸಂತತಿ ಕುರಿತು ಮಾಹಿತಿ ನೀಡಿದ್ದಾರೆ. ಅಪರೂಪದ ಹಾವುಗಳು ಕಾಣಿಸಿಕೊಂಡಿದೆ ಎಂದರೆ ಪರಿಸರ ಉತ್ತಮವಾಗಿದೆ ಎಂದರ್ಥ ಎಂದಿದ್ದಾರೆ. ಹೀಗಾಗಿ ಗ್ರಾಮಸ್ಥರು ಇದೀಗ ತೋಳ ಹಾವು ಗ್ರಾಮಕ್ಕೆ ವರ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

