Asianet Suvarna News Asianet Suvarna News

ಡಾಕ್ಟರ್ ಮನೆಯಲ್ಲಿ ಬೆಂಕಿ: ಇಬ್ಬರು ಪುಟ್ಟ ಮಕ್ಕಳು ಅಪ್ಪ ದಾರುಣ ಸಾವು

ಮನೆಗೆ ಬೆಂಕಿ ಬಿದ್ದು ಅಪ್ಪ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ. ತಿರುಪತಿ ಸಮೀಪದ ರೆನಿಗುಂಟದ ನಿವಾಸದಲ್ಲಿ ಇಂದು ಮುಂಜಾನೆ ಈ ಅನಾಹುತ ನಡೆದಿದೆ.

two children and father died after fire broke out in doctors house at tirupati akb
Author
First Published Sep 25, 2022, 2:57 PM IST

ತಿರುಪತಿ: ಮನೆಗೆ ಬೆಂಕಿ ಬಿದ್ದು ಅಪ್ಪ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ. ತಿರುಪತಿ ಸಮೀಪದ ರೆನಿಗುಂಟದ ನಿವಾಸದಲ್ಲಿ ಇಂದು ಮುಂಜಾನೆ ಈ ಅನಾಹುತ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಅನಾಹುತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. 

49 ವರ್ಷದ ರೆಡಿಯೋಲಾಜಿಸ್ಟ್ (Rediologist) ಹಾಗೂ ಅವರ ಇಬ್ಬರು ಮಕ್ಕಳು ದುರಂತದಲ್ಲಿ ಸಾವನ್ನಪ್ಪಿದವರು. ಆದರೆ ವೃತ್ತಿಯಲ್ಲಿ ವೈದ್ಯರಾಗಿರುವ ರೆಡಿಯೋಲಾಜಿಸ್ಟ್ ಅವರ ಪತ್ನಿ ಹಾಗೂ ಅತ್ತೆ ಈ ದುರಂತದಲ್ಲಿ ಯಾವುದೇ ತೊಂದರೆಗಳಿಲ್ಲದೇ ಪಾರಾಗಿದ್ದಾರೆ. ಘಟನೆ ಬಗ್ಗೆ ಸುದ್ದಿ ತಿಳಿದ ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿಗೆ ಮನೆಯ ಎರಡನೇ ಮಹಡಿಯಲ್ಲಿ ರೆಡಿಯೋಲಾಜಿಸ್ಟ್ ರವಿಶಂಕರ್ ರೆಡ್ಡಿ (Ravishankar reddy)  ಅವರ ಸುಟ್ಟು ಕರಕಲಾದ ದೇಹ ಸಿಕ್ಕಿದೆ. 

ಚೀನಾದಲ್ಲಿ ಅಗ್ನಿ ದುರಂತ: 42 ಅಂತಸ್ತಿನ ಬಹುಮಹಡಿ ಕಟ್ಟಡ ಧಗಧಗ

ಅಲ್ಲದೇ ಈ ಅವಘಡದಲ್ಲಿ ಸಾವಿಗೀಡಾದ ವೈದ್ಯನ 11 ವರ್ಷದ ಪುತ್ರಿ ಹಾಗೂ 7 ವರ್ಷದ ಪುತ್ರ ಮನೆಯ ಮೊದಲ ಮಹಡಿಯಲ್ಲಿ ಬೆಂಕಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಭಯಗೊಂಡು ಮನೆಯ ಬಾತ್‌ರೂಮ್‌ನೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಪರಿಣಾಮ ಪುಟಾಣಿಗಳಿಬ್ಬರು ಉಸಿರುಕಟ್ಟಿ(suffocation) ಸಾವನ್ನಪ್ಪಿದ್ದಾರೆ. ಈ ಬೆಂಕಿ ಅವಘಡದ ವೇಳೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ (Gas cylinder) ಕೂಡ ಸೋರಿಕೆ ಆಗಿದ್ದು, ಇದು ಬೆಂಕಿಯ ತೀವ್ರತೆಯನ್ನು ಇನ್ನಷ್ಟು ಜಾಸ್ತಿ ಮಾಡಿತು ಎಂದು ತಿಳಿದು ಬಂದಿದೆ. 

ಬೆಂಕಿ ಸ್ಟಂಟ್‌ ಮಾಡಲು ಹೋಗಿ ಮುಖ ಸುಟ್ಟುಕೊಂಡ ಭೂಪ! 

ಕೆಲದಿನಗಳ ಹಿಂದಷ್ಟೇ ತೆಲಂಗಾಣದ ರಾಜಧಾನಿ ಸಿಕಂದರಾಬಾದ್‌ನಲ್ಲಿ ಎಲೆಕ್ಟ್ರಿಕ್‌ ಬೈಕ್‌ ಶೋರೂಂ ಹಾಗೂ ಹೋಟೆಲ್‌ ಇದ್ದ ಬಹುಮಹಡಿ ಕಟ್ಟಡವೊಂದಕ್ಕೆ ಬೆಂಕಿ ಬಿದ್ದ ಪರಿಣಾಂ 8 ಜನರು ಸಾವನ್ನಪ್ಪಿದ್ದರು. ಬಹುಮಹಡಿ ಕಟ್ಟಡವೊಂದರ ನೆಲಮಾಳಿಗೆ ಮತ್ತು ನೆಲಮಹಡಿಯಲ್ಲಿ ಜಿಮೊಪೈ ಎಂಬ ಬ್ರ್ಯಾಂಡ್‌ನ ಎಲೆಕ್ಟ್ರಿಕ್‌ ಬೈಕ್‌ ಶೋರೂಂ ಇತ್ತು. ಶೋ ರೂಂನಲ್ಲಿ 35-40 ಬೈಕ್‌ಗಳನ್ನು ನಿಲ್ಲಿಸಲಾಗಿತ್ತು. ನಂತರದ 4 ಮಹಡಿಗಳಲ್ಲಿ ರೂಬಿ ಪ್ರೈಡ್‌ ಎಂಬ ಹೋಟೆಲ್‌ ಇತ್ತು. ಸೋಮವಾರ ರಾತ್ರಿ ಕಟ್ಟಡದ ನೆಲ ಮಾಳಿಗೆ ಮತ್ತು ನೆಲಮಹಡಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಮೊದಲ ಮತ್ತು 2ನೇ ಮಹಡಿಗೂ ಹಬ್ಬಿದೆ. ಘಟನೆ ನಡೆದಾಗ ಹೋಟೆಲ್‌ನಲ್ಲಿ 24 ಜನ ತಂಗಿದ್ದರು. ಈ ಪೈಕಿ ಮೊದಲ ಮತ್ತು ಎರಡನೇ ಮಹಡಿಯಲ್ಲಿದ್ದವರು ಬೆಂಕಿಯ ಅವಘಡದಿಂದ ತಪ್ಪಿಸಿಕೊಳ್ಳಲು ಕಾರಿಡಾರ್‌ ಮೂಲಕ ಹೊರಬರಲು ಯತ್ನಿಸಿದ ವೇಳೆ ಹೊಗೆಯಿಂದಾಗಿ ಉಸಿರುಕಟ್ಟಿ ಸಾವನ್ನಪ್ಪಿದ್ದರು. ಸಾವನ್ನಪ್ಪಿದ 8 ಜನರಲ್ಲಿ ಓರ್ವ ಮಹಿಳೆ ಕೂಡಾ ಸೇರಿದ್ದಾರೆ. ಕೆಲವರು ಕಟ್ಟಡದ ಕಿಟಕಿಯಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.

ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿರುವ ಹೊತ್ತಿನಲ್ಲೇ ಈ ದುರ್ಘಟನೆ ನಡೆದಿದೆ. ಇದು ಎಲೆಕ್ಟ್ರಿಕ್‌ ವಾಹನಗಳ ಕುರಿತು ಸುರಕ್ಷತೆ ಕುರಿತು ಮತ್ತೊಮ್ಮೆ ಸಂದೇಹ ಹುಟ್ಟು ಹಾಕಿದೆ. ಅಗ್ನಿ ಅವಘಡದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌ ಸೇರಿ ಗಣ್ಯರು ಕಂಬನಿ ಮಿಡಿದಿದ್ದರು. ಈ ಅಗ್ನಿ ಅವಘಡಕ್ಕೆ ಕಟ್ಟಡದ ನೆಲ ಮಾಳಿಗೆ ಮತ್ತು ನೆಲಮಹಡಿಯಲ್ಲಿರುವ ಎಲೆಕ್ಟ್ರಿಕ್‌ ಬೈಕ್‌ ಶೋರೂನಲ್ಲಿ, ಚಾರ್ಜಿಂಗ್‌ಗೆ ಹಾಕಿದ್ದ ಬೈಕ್‌ ಸ್ಫೋಟಗೊಂಡಿದ್ದೇ ಕಾರಣ ಎಂದು ಶಂಕಿಸಲಾಗಿತ್ತು. 

Follow Us:
Download App:
  • android
  • ios