20 ಅಡಿ ಕೊಳವೆ ಬಾವಿಗೆ ಬಿದ್ದ ಎರಡೂ ವರ್ಷದ ಪುಟ್ಟ ಕಂದನನ್ನು  SDRF ತಂಡ ರಕ್ಷಣೆ ಮಾಡಿದೆ. ತೀವ್ರಗಾಯಗೊಂಡಿರುವ ಮಗುವನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.SDRF ತಂಡದ ಸತತ ಕಾರ್ಯಾಚರಣೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಭೋಪಾಲ್(ಜು.18) ಮನೆಯ ಹಿಂಭಾಗದಲ್ಲಿ ಆಡವಾಡುತ್ತಿದ್ದ ವೇಳೆ ಕೊಳವೆ ಬಾವಿಗೆ ಬಿದ್ದ ಪುಟ್ಟ ಕಂದನನ್ನು SDRF ತಂಡ ಸತತ ಕಾರ್ಯಾಚರಣೆ ಮೂಲಕ ರಕ್ಷಿಸಿದೆ. ಮಧ್ಯಪ್ರದೇಶದ ಕಜಾರಿ ಬರ್ಖೇಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. 20 ಅಡಿ ಕೆಳಕ್ಕೆ ಬಿದ್ದ ಕಾರಣ ಮಗುವ ತೀವ್ರವಾಗಿ ಗಾಯಗೊಂಡಿದೆ. ಹೀಗಾಗಿ ಕಂದನನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಇಂದರ್ ಸಿಂಗ್ ಅವರ ಎರಡೂವರೆ ವರ್ಷದ ಮಗಳು ಸ್ಮಿತಾ ಮನೆಯ ಹಿಂಭಾಗದಲ್ಲಿ ಆಟವಾಡುತ್ತಿತ್ತು. ಈ ವೇಳೆ ಪಕ್ಕದಲ್ಲೇ ಇದ್ದ ಕೊಳವೆ ಬಾವಿಗೆ ಬಿದ್ದಿದೆ. ತಕ್ಷಣವೇ ಪೊಲೀಸ್ ಠಾಣೆಗೆ ಕರೆ ಮಾಹಿತಿ ನೀಡಲಾಗಿದೆ. ಕಾರ್ಯಪ್ರವೃತ್ತರಾದ ಪೊಲೀಸರು ರಾಜ್ಯ ವಿಪತ್ತು ನಿರ್ವಹಣಾ ತಂಡಕ್ಕೆ ಸೂಚನೆ ನೀಡಿದೆ. ಕಂದನ ರಕ್ಷಣೆಗೆ ನಿಂತ SDRF ಕೆಲವೇ ಹೊತ್ತಲ್ಲಿ ಸ್ಥಳಕ್ಕೆ ಧಾವಿಸಿದೆ. 

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದನ ರಕ್ಷಣೆ ಮಾಡಿದ ಯುವತಿ,ರೋಚಕ ಕಾರ್ಯಾಚರಣೆ ವಿಡಿಯೋ!

ಸತತ ಕಾರ್ಯಾಚರಣೆ ಆರಂಭಿಸಿದ SDRF ತಂಡ 20 ಅಡಿ ಆಳದಲ್ಲಿ ಸಿಲುಕಿದ್ದ ಮಗುವನ್ನು ರಕ್ಷಿಸಲಾಗಿದೆ. ಮಗುವನ್ನು ಮೇಲಕ್ಕೆ ತಂದ ಬೆನ್ನಲ್ಲೇ ಆ್ಯಂಬುಲೆನ್ಸ್ ಮೂಲಕ ಮಗುವನ್ನು ಆಸ್ಪತ್ರೆ ದಾಖಲಿಸಲಾಗಿದೆ. ಮಗು ಚಿಕಿತ್ಸೆಗೆ ಸ್ಪಂದಿಸುತ್ತಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.ಇತ್ತ SDRF ತಂಡದ ಯಶಸ್ವಿ ಕಾರ್ಯಾಚರಣೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Scroll to load tweet…

ಇತ್ತೀಚೆಗೆ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ಇದೇ ರೀತಿ ಘಟನೆ ನಡೆದಿತ್ತು. ಬರೋಬ್ಬರಿ 300 ಅಡಿ ಕೊಳವೆ ಬಾವಿಗೆ ಬಿದ್ದ ಎರಡೂವರೆ ವರ್ಷದ ಬಾಲಕಿಯನ್ನು ರಕ್ಷಿಸಿದರೂ ಬದುಕುಳಿಯಲಿಲ್ಲ. ಎರಡೂವರೆ ವರ್ಷದ ಬಾಲಕಿಯನ್ನು 52 ಗಂಟೆಗಳ ಬಳಿಕ ರಕ್ಷಿಸಲಾಯಿತಾದರೂ ದುರದೃಷ್ಟವಶಾತ್‌ ಸಾವನ್ನಪ್ಪಿದ್ದಳು. ಈ ಬಾಲಕಿ ಮಧ್ಯಾಹ್ನ ಕೊಳವೆ ಬಾವಿ ಒಳಗೆ ಬಿದ್ದಿದ್ದಳು. ಆಗ ಕೇವಲ 40 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕಿ, ರಕ್ಷಣಾ ಕಾ​ರ್ಯಾಚರಣೆಗಳ ಕಂಪನದಿಂದ 100 ಅಡಿಗೆ ಕುಸಿದಿದ್ದಳು. ಬಳಿಕ ಗುರುವಾರ ಮುಂಜಾನೆ ಬಾಲಕಿ ದೇಹವನ್ನು ಹೊರತೆಗೆದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಬಾಲಕಿ ಆಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ತವರು ಜಿಲ್ಲೆಯಲ್ಲಿ ನಡೆದಿದೆ. 

ಸತತ 55 ಗಂಟೆ ಕಾರ್ಯಾಚರಣೆ, ಬದುಕಲಿಲ್ಲ 300 ಅಡಿ ಕೊಳವೆ ಬಾವಿಗೆ ಬಿದ್ದ ಪುಟ್ಟ ಕಂದಮ್ಮ!

ಮಧ್ಯ ಪ್ರದೇಶದಲ್ಲಿ ಕೊಳವೆ ಬಾವಿಗೆ ಮಗು ಬೀಳುತ್ತಿರುವ ಪ್ರಕರಣ ಹೆಚ್ಚಾಗುತ್ತಲೇ ಇದೆ. ಮಾರ್ಚ್ ತಿಂಗಳಲ್ಲಿ ವಿದಿಶಾ ಜಿಲ್ಲೆಯಲ್ಲಿ 7 ವರ್ಷದ ಬಾಲಕನೊಬ್ಬ ಆಟವಾಡುತ್ತಿರುವಾಗ 60 ಅಡಿ ಆಳದ ಕೊಳವೆ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದ. ಆತನನ್ನು ಬದುಕಿಸಲು 24 ತಾಸು ನಡೆದ ಕಾರಾರ‍ಯಚರಣೆ ವಿಫಲಗೊಂಡಿತ್ತು. ಬೆಳಗ್ಗೆ 11 ಗಂಟೆ ಸುಮಾರಿಗೆ ಆಟವಾಡುತ್ತಿರುವಾಗ ಲೋಕೇಶ್‌ ಎಂಬ ಬಾಲಕ ಆಯತಪ್ಪಿ ಬಾವಿಯೊಳಗೆ ಬಿದ್ದು 43 ಅಡಿಯಲ್ಲಿ ಸಿಲುಕಿದ್ದ. ನಂತರ ಗ್ರಾಮಸ್ಥರು ರಕ್ಷಣಾ ಪಡೆಗಳಿಗೆ ತಿಳಿಸಿ ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ತಂಡಗಳು ಆಗಮಿಸಿ ಸತತ 24 ಗಂಟೆಗಳ ಕಾರ್ಯಾಚರಣೆ ನಂತರ ಬಾಲಕನನ್ನು ಮೇಲೆತ್ತಿದ್ದರು. ಕೂಡಲೇ 14 ಕಿ.ಮೀ. ದೂರದ ಆಸ್ಪತ್ರೆಗೆ ದಾಖಲಿಸಿದಾಗ, ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದರು.