ಸತತ 55 ಗಂಟೆ ಕಾರ್ಯಾಚರಣೆ, ಬದುಕಲಿಲ್ಲ 300 ಅಡಿ ಕೊಳವೆ ಬಾವಿಗೆ ಬಿದ್ದ ಪುಟ್ಟ ಕಂದಮ್ಮ!

ವಯಸ್ಸು ಕೇವಲ 2.5 ವರ್ಷ. ಹೆಸರು ಸೃಷ್ಟಿ ಕುಶ್ವಾಹ, ಆಟವವಾಡುತ್ತಾ ಕೊಳವೆ ಬಾವಿಗೆ ಬಿದ್ದ ಪುಟ್ಟ ಕಂದಮ್ಮ ರಕ್ಷಿಸಲು ಸತತ 55 ಗಂಟೆ ಕಾರ್ಯಾಚರಣೆ ನಡೆಸಲಾಯಿತು. ಆದರೆ ಪ್ರಾರ್ಥನೆ ಫಲಿಸಲಿಲ್ಲ. ಪುಟ್ಟ ಕಂದಮ್ಮ ಬದುಕುಳಿಯಲಿಲ್ಲ.

Madhya Pradesh Borewell tragedy 2 and half year old girl baby dies after 55 hour rescue operation ckm

ಸೆಹೋರ್(ಜೂ.08): ಆಟವಾಡುತ್ತಾ ಕೊಳವೆ ಬಾವಿಗೆ ಬಿದ್ದ ಎರಡೂವರೆ ವರ್ಷದ ಪುಟ್ಟ ಕಂದಮ್ಮನ ಬದುಕಿಸಲು ನಡೆಸಿದ ಹೋರಾಟ ವ್ಯರ್ಥವಾಗಿದೆ. ಕೋಟ್ಯಾಂತರ ಮಂದಿಯ ಪ್ರಾರ್ಥನೆ ಫಲಿಸಲಿಲ್ಲ. ಸತತ 55 ಗಂಟೆ ಕಾರ್ಯಾಚರಣೆ ನಡೆಸಿ ಕೊಳವೆ ಬಾವಿಯಿಂದ ಹೊರತೆಗೆದರೂ ಮಧ್ಯಪ್ರದೇಶದ ಮಂಗೊಲಿ ಗ್ರಾಮದ ಪುಟ್ಟ ಕಂದನ ಹೊರತೆಗೆದರೂ ಬದುಕುಳಿಯಲಿಲ್ಲ. 300 ಅಡಿ ಕೊಳವೆ ಬಾಗಿ ಬಿದ್ದಿದ್ದ ಸೃಷ್ಟಿ ಕುಶ್ವಾಹ 25ರಿಂದ 30 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಳು. ಭಾರತೀಯ ಸೇನೆ, ಎನ್‌ಡಿಆರ್‌ಆಫ್ ಸತತ ಪ್ರಯತ್ನ ನಡೆಸಿದರೂ ಪುಟ್ಟ ಕಂದ ಬದುಕಿ ಬರಲಿಲ್ಲ.

ಜೂನ್ 6 ರಂದು ಮಂಗೌಲಿ ಗ್ರಾಮದ ರಾಹುಲ್ ಕುಶ್ವಾಹ ಅವರ ಎರಡೂವರೆ ವರ್ಷದ ಸೃಷ್ಟಿ ಕುಶ್ವಾಹ ಮನೆಯ ಹೊರಗಡೆ ಆಟವಾಡುತಿತ್ತು. ಪುಟ್ಟ ಕಂದಮ್ಮ ಆಟವಾಡುತ್ತಿದ್ದರೆ, ಮನೆಯ ಹೊರ ಜಗಲಿಯಲ್ಲಿ ಅಜ್ಜಿ ಕುಳಿತು ನೋಡುತ್ತಿದ್ದರು. ಆಟವಾಡುತ್ತಲೇ ಇದ್ದಕ್ಕಿದಂತೆ ಕೊಳವೆ ಬಾವಿಗೆ ಬಿದ್ದಿದ್ದಾಳೆ. ಬರೋಬ್ಬರಿ 300 ಅಡಿ ಆಳದ ಕೊಳವೆ ಬಾವಿಗೆ ಪುಟ್ಟ ಕಂದಮ್ಮ ಬಿದ್ದಿದ್ದಳು. 25 ರಿಂದ 30 ಅಡಿ ಆಳದಲ್ಲಿ ಸುಲಿಕಿಕೊಂಡಿದ್ದ ಕಂದನ ರಕ್ಷಿಸಲು ಎಲ್ಲಾ ಪ್ರಯತ್ನ ನಡೆಸಲಾಗಿತ್ತು. ಆದರೆ ಕೈಗೂಡಲಿಲ್ಲ.

60 ಫೀಟ್‌ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಬಾಲಕ ಸಾವು!

ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ, ಡಿಐಜಿ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿತ್ತು. ಬಳಿಕ ಭಾರತೀಯ ಸೇನೆ ಹಾಗೂ ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿತ್ತು. ಕಾರ್ಯಾಚರಣೆ ಆರಂಭಿಸಿತ್ತು. ಸತತ ಕಾರ್ಯಾಚರಣೆ ನಡೆಸಿತ್ತು. ಆದರೆ ಕಲ್ಲು ಬಂಡೆಗಳು ಸಿಕ್ಕ ಕಾರಣ ರಕ್ಷಣಾ ಕಾರ್ಯದಲ್ಲೂ ಕೊಂಚ ವಿಳಂಬವಾಗಿತ್ತು. 

20 ಅಡಿಯಿಂದ ಸಂಪೂರ್ಣ ಬಂಡೆ ಕಾರಣ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿತ್ತು. ಬಂಡೆ ಕೊರೆಯ ಮಿಷನ್, ಜೆಸಿಬಿ ಸಹಾಯಗಳಿಂದ ರಕ್ಷಣಾ ಕಾರ್ಯ ಮುಂದುವರಿದಿತ್ತು. ಇತ್ತ ಕೊಳವೆ ಬಾವಿ ಮೂಲಕ ಆಮ್ಲಜನಕ ವ್ಯವಸ್ಥೆ ಮಾಡಲಾಗಿತ್ತು. ಇತ್ತ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಎರಡೂವರೆ ದಿನಗಳ ಸತತ ಕಾರ್ಯಾಚರಣೆ ಬಳಿಕ ಕಂದನನ್ನು ಕೊಳವೆ ಬಾವಿಯಿಂದ ಹೊರತೆಗೆಯಲಾಗಿತ್ತು. ಅಷ್ಟರಲ್ಲೇ ಪುಟ್ಟ ಕಂದಮ್ಮ ಮೃತಪಟ್ಟಿತ್ತು.

ಪುಟ್ಟ ಕಂದನ ಬದುಕಿಸಲು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಎಲ್ಲಾ ನೆರವು ನೀಡಿದ್ದರು. ಸ್ಥಳೀಯ ಜಿಲ್ಲಾಡಳಿತ ಜೊತೆ ಮಾತನಾಡಿದ್ದ ಶಿವಾರಾಜ್ ಸಿಂಗ್ ಚವ್ಹಾಣ್ ಅಗತ್ಯ ನೆರವು ನೀಡುವಂತೆ ಸೂಚಿಸಿದ್ದರು. ಇತ್ತ ಕೋಟ್ಯಾಂತರ ಜನರು ಸೃಷ್ಟಿ ಬದುಕಿ ಬರಲಿ ಎಂದು ಪ್ರಾರ್ಥಿಸಿದ್ದರು. ಆದರೆ ಪ್ರಾರ್ಥನೆ ಫಲಿಸಲಿಲ್ಲ. 

ಬೋರ್‌ವೆಲ್‌ಗೆ ಬಿದ್ದು 104 ಗಂಟೆ ಬಳಿಕವೂ ಸಾವು ಗೆದ್ದ ಬಾಲಕ!

ಈ ರೀತಿಯ ಘಟನೆ ಪದೇ ಪದೇ ನಡೆಯುತ್ತಿದೆ. ಆದರೂ ಬೋರ್‌ವೆಲ್ ಕೊರೆಯು ಎಜೆನ್ಸಿಗಳು, ಕೊರೆಸುವ ಮಾಲೀಕರು ಎಚ್ಚೆತ್ತುಕೊಂಡಿಲ್ಲ. ಕೊಳವೆ ಬಾವಿ ಕೊರೆದ ಬಳಿಕ ಮಾಡಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅಸಡ್ಡೆ ಮಾಡಲಾಗುತ್ತಿದೆ. ಹೀಗಾಗಿ ಪ್ರಕರಣಗಳು ಮರುಕಳಿಸುತ್ತಿದೆ. ಇತ್ತ ಜನರ ನಿರ್ಲಕ್ಷ್ಯ, ಅತ್ತ ಅಧಿಕಾರಿಗಳ ಅಸಡ್ಡೆಯಿಂದ ಅಮಾಯಕ ಜೀವಗಳು ಬಲಿಯಾಗುತ್ತಿದೆ. 

Latest Videos
Follow Us:
Download App:
  • android
  • ios