ಮುಂಬೈ(ಮೇ.25): ಸೋನು ಸೂದ್ ಇತ್ತೀಚೆಗೆ ವಿಭಿನ್ನ ರಾಜ್ಯಗಳ ವಲಸೆ ಕಾರ್ಮಿಕರನ್ನು ಅವರ ತವರೂರಿಗೆ ತಲುಪಿಸುವ ಕಾಯಕದಲ್ಲಿ ಮಗ್ನರಾಗಿದ್ದಾರೆ. ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದವರ ಪಾಲಿಗೆ ಸೋನು ಸೂದ್ ಬಂಧುವಾಗಿದ್ದಾರೆ. ಅವರ ಈ ನಡೆಗಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಿರುವಾಗ ಸೋನು ಸೂದ್ ಸೋಶಿಯಲ್ ಮಿಡಿಯಾ ಮೂಲಕವೂ ಜನರೊಂದಿಗೆ ಸಂಪರ್ಕವಿಟ್ಟುಕೊಂಡಿದ್ದು, ಈ ಮೂಲಕವೂ ಕಷ್ಟದಲ್ಲಿರುವವರ ನೆರವಿಗೆ ಧಾವಿಸುತ್ತಿದ್ದಾರೆ. ಟ್ವಿಟರ್‌ನಲ್ಲಿ ಅವರಿಗೆ ಯಾರೆಲ್ಲಾ ಮನವಿ ಮಾಡಿಕೊಳ್ಳುತ್ತಿದ್ದಾರೋ ಅವರಿಗೆ ಉತ್ತರವನ್ನೂ ನೀಡುತ್ತಿದ್ದಾರೆ. ಹೀಗಿರುವಾಗ ವ್ಯಕ್ತಿಯೊಬ್ಬ ಮಾಡಿದ ಟ್ವಿಟ್ ಹಾಗೂ ಸೂದ್ ಆತನಿಗೆ ಕೊಟ್ಟ ಉತ್ತರ ಸದ್ಯ ಭಾರೀ ವೈರಲ್ ಆಗಿದೆ.

ಸೂದ್ ಟೀಕಿಸಿದ ರಾವತ್, ಹೂ ಗುಚ್ಛ ನೀಡಿ ಸನ್ಮಾಸಿದ ಠಾಕ್ರೆ

ಹೌದು ಟ್ವಿಟರ್ ಮೂಲಕ ಸೋನು ಸಹಾಯ ಕೇಳುತ್ತಿರುವವರ ಸಂಖ್ಯೆ ಭಾರೀ ಹೆಚ್ಚಿದೆ. ಇತ್ತ ನಟ ಸೋನು ಕೂಡಾ ಸೂಪರ್ ಹೀರೋನಂತೆ ಅವರ ಸಹಾಯಕ್ಕೆ ಧಾವಿಸುತ್ತಿದ್ದಾರೆ. ಹೀಗಿರುವಾಗಲೇ ವ್ಯಕ್ತಿಯೊಬ್ಬ 'ಸೋನು ಅಣ್ಣಾ ನಾನು ಮನೆಯಲ್ಲಿ ಸಿಕ್ಕಾಕೊಂಡಿದ್ದೇನೆ. ದಯವಿಟ್ಟು ನನ್ನನ್ನು ವೈನ್‌ ಶಾಪ್‌ಗೆ ತಲುಪಿಸ್ತೀರಾ?' ಎಂದು ಪ್ರಶ್ನಿಸಿದ್ದಾನೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಟ ಸೋನು ಸೂದ್ 'ಸಹೋದರಾ ಬೇಕಾದ್ರೆ ನಿನ್ನನ್ನು ವೈನ್‌ ಶಾಪ್‌ನಿಂದ ಮನೆಗೆ ತಲುಪಿಸಬಲ್ಲೆ, ಅಗತ್ಯ ಬಿದ್ದರೆ ಹೇಳು' ಎಂದು ನಗುವ ಚಿಹ್ನೆ ಹಾಕಿದ್ದಾರೆ.

ಆರತಿ ಬೆಳಗಿ ಸೂದ್‌ಗೆ ಇಡ್ಲಿ ಮಾರಾಟಗಾರರ ಧನ್ಯವಾದ

ಸೋನು ಸೂದ್ ಈ ಉತ್ತರ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ ಹಾಗೂ ಅವರ ಈ ಹ್ಯೂಮರ್‌ಗೆ ಜನರು ತಲೆ ಬಾಗಿದ್ದಾರೆ. ಸಾವಿರಾರು ಮಂದಿ ದನ್ನು ರೀ ಟ್ವೀಟ್ ಮಾಡಿದ್ದಾರೆ.

ಇನ್ನು ಖುದ್ದು ಕಾರ್ಮಿಕರ ಜವಾಬ್ದಾರಿ ವಹಿಸಿ, ಅವರನ್ನು ಅವರ ಮನೆಗೆ ತಲುಪಿಸಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡಿ ಎಲ್ಲವನ್ನೂ ತಾವೇ ಪರಿಶೀಲಿಸುತ್ತಿರುವ ಸಿನಿ ಕ್ಷೇತ್ರದ ಪ್ರಥಮ ನಟ ಸೋನು ಸೂದ್ ಆಗಿದ್ದಾರೆ. ಅನೇಕ ಮಂದಿ ಸಿನಿ ತಾರೆಯರು ಕೊರೋನಾ ನಿಯಂತ್ರಿಸಲು ಹೇರಲಾದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ವಿವಿಧ ಫಂಡ್‌ಗೆ ದಾನ ಮಾಡಿ ಸಹಾಯ ಮಾಡಿದ್ದಾರೆ. ಆದರೆ ಸೋನು ಖುದ್ದು ತಾವೇ ಕಾರ್ಮಿಕರನ್ನು ತಲುಪಿಸುವ ಜವಾಬ್ದಾರಿ ಹೊತ್ತುಕೊಂಡು ಶ್ರಮಿಸುತ್ತಿದ್ದಾರೆ.