ಅತ್ತ ಸೂದ್ ಟೀಕಿಸಿದ ರಾವತ್, ಹೂಗುಚ್ಛ ನೀಡಿ ಗೌರವಿಸಿದ ಠಾಕ್ರೆ!
ಕಾರ್ಮಿಕರನ್ನು ಮನೆಗೆ ತಲುಪಿಸುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ನಟ ಸೋನು ಸೂದ್| ಸೋನು ಸೂದ್ ಶ್ರಮವನ್ನು ಟೀಕಿಸಿದ್ದ ಶಿವಸೇನೆ ನಾಯಕ ಸಂಜಯ್ ರಾವತ್| ಸಂಜಯ್ ರಾವತ್ ಟೀಕೆ ಬೆನ್ನಲ್ಲೇ ಸೂದ್ ಕರೆಸಿ ಹೂಗುಚ್ಛ ನೀಡಿದ ಠಾಕ್ರೆ
ಮುಂಬೈ(ಜೂ.08) ಲಾಕ್‌ಡೌನ್ ವೇಳೆಯಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ್ದಕ್ಕಾಗಿ ನಟ ಸೋನು ಸೂದ್ ವಿರುದ್ಧ ಶಿವಸೇನೆ ನಾಯಕ ಸಂಜಯ್ ರಾವತ್ ತೀವ್ರ ವಾಗ್ದಾಳಿ ನಡೆಸಿದ್ದರು. ಕೊರೊನಾ ಸೋಂಕನ್ನು ನಿಯಂತ್ರಿಸುವಲ್ಲಿ ಹಾಗೂ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ನೆರವಾಗುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ ಎಂದು ದೇಶಾದ್ಯಂತ ಪ್ರಚಾರ ಮಾಡುವ ಉದ್ದೇಶದಿಂದ ಬಿಜೆಪಿಯು ಸೋನ್ ಸೂದ್ ಅವರನ್ನು ಮುಂದೆಬಿಟ್ಟಿರುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದರು. ಆದರೀಗ ಸಂಜಯ್ ರಾವತ್ ಮಾತಿನ ಬೆನ್ನಲ್ಲೇ ಸೂದ್ ಸಿಎಂ ಠಾಕ್ರೆ ಭೇಟಿಯಾಗಿದ್ದಾರೆ. ಈ ವೇಳೆ ಉದ್ಧವ್ ಠಾಕ್ರೆ ಅವರಿಗೆ ಹೂಗುಚ್ಛ ನೀಡಿ ಗೌರವಿಸಿದ್ದಾರೆ.
ಹೌದು ಸೋನು ಸೂದ್ ವಿರುದ್ಧ ವಾಗ್ದಾಳಿ ನಡೆಸಿದ್ದ ಸಂಜಯ್ ರಾವತ್ ಕೊರೊನಾ ಸೋಂಕನ್ನು ನಿಯಂತ್ರಿಸುವಲ್ಲಿ ಹಾಗೂ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ನೆರವಾಗುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ ಎಂದು ದೇಶಾದ್ಯಂತ ಪ್ರಚಾರ ಮಾಡುವ ಉದ್ದೇಶದಿಂದ ಬಿಜೆಪಿಯು ಸೋನ್ ಸೂದ್ ಅವರನ್ನು ಮುಂದೆಬಿಟ್ಟಿರುವ ಸಾಧ್ಯತೆಯಿದೆ. ಬೆಜೆಪಿಯ ಸೂಚನೆ ಮೇರೆಗೆ ಸೋನುಸೂದ್ ವಲಸೆ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ. ಇದು ಬಿಜೆಪಿಯವರು ಹಣ ಕೊಟ್ಟು ನಡೆಸುತ್ತಿರುವ ಕುತಂತ್ರ ಎಂದಿದ್ದರು. ಅಲ್ಲದೇ ಶಿವಸೇನೆ ಮುಖವಾಣಿ ಸಾಮ್ನಾದಲ್ಲೂ ಸೋನು ಸೂದ್ ಟೀಕಿಸಲಾಗಿತ್ತು.
ಆದರೆ ಈ ಬೆಳವಣಿಗೆ ಬೆನ್ನಲ್ಲೇ ಸೋನು ಸೂದ್ ಹಾಗೂ ಮಹಾರಾಷ್ಟ್ರ ಸಿಎಂ ಭೇಟಿಯಾದ ಸುದ್ದಿ ಸದ್ದು ಮಾಡಿದ್ದು, ಫೋಟೋಗಳು ಕೂಡಾ ಭಾರೀ ವೈರಲ್ ಆಗಿವೆ. ಅಲ್ಲದೇ ಈ ಕುರಿತಾಗಿ ಟಟ್ವೀಟ್ ಮಾಡಿರುವ ಆದಿತ್ಯ ಠಾಕ್ರೆ ಸಚಿವ ಅಸ್ಲಮ್ ಶೇಖ್ ಮತ್ತು ನನ್ನ ಜೊತೆ ಸೋನು ಸೂದ್ ಅವರು ಸಿಎಂ ಉದ್ಧವ್ ಠಾಕ್ರೆಯವರನ್ನು ಭೇಟಿ ಮಾಡಿದ್ದಾರೆ. ಈ ಸಮಯದಲ್ಲಿ ಒಟ್ಟು ಸೇರಿ ಕೆಲಸ ಮಾಡಿದರೆ ಅನೇಕ ಮಂದಿಗೆ ಸಹಾಯ ಮಾಡಬಹುದು. ಮಹಾರಾಷ್ಟ್ರ ಜನತೆಗೆ ಸಹಾಯ ಮಾಡಲು ಇಂತಹ ಉತ್ತಮ ಹೃದಯವುಳ್ಳ ವ್ಯಕ್ತಿಯನ್ನು ಭೇಟಿ ಮಾಡಿರುವುದು ಒಳ್ಳೆಯದಾಯಿತು ಎಂದಿದ್ದಾರೆ.
ಅಲ್ಲದೇ ಸಂಜಯ್ ರಾವತ್ ಟೀಕೆ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಸೋನು ಸೂದ್ ನನ್ನ ವಲಸೆ ಸೋದರ, ಸೋದರಿಯರೊಂದಿಗಿನ ನನ್ನ ಪ್ರಯಾಣವು ವಿಶೇಷವಾಗಿದೆ. ಇದು ಹೃದಯದಿಂದ ಹೊಮ್ಮಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ನನ್ನ ಸಹಾಯವು ಯಾರಾದರು ಬಯಸಿದರೆ, ನನ್ನ ಸಹಾಯಕ್ಕಾಗಿ ಯತ್ನಿಸಿದರೆ, ಅವರ ಕುಟುಂಬಗಳಿಗೆ ಸಹಾಯ ಮಾಡಲು ನಾನು ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತೇನೆ. ಇದನ್ನು ಮುಂದುವರೆಸುತ್ತೇನೆ ಎಂದು ಬರೆದಿದ್ದಾರೆಂಬುವುದು ಉಲ್ಲೇಖನೀಯ.
ಸದ್ಯ ಸೋನು ಸೂದ್ ಸಾಮಾಜಿಕ ಕಾರ್ಯ ರಾಜಕೀಯ ರಂಗು ಪಡೆಯುತ್ತಿದ್ದು, ಮುಂದೆ ಇದು ಎಲ್ಲಿ ಹೋಗಿ ನಿಲ್ಲುತ್ತದೆ ಎಂದು ಸಮಯವೇ ಹೇಳಲಿದೆ.