ನವರಾತ್ರಿಗೆ ಸಿದ್ದರಾಗಿ ಬಂದಿರುವ ತುಳಸಿ ಭಾಯ್, WHO ನಿರ್ದೇಶಕರಿಗೆ ವಿಶೇಷ ಸ್ವಾಗತ ಕೋರಿದ ಮೋದಿ!
ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶ ತೆದ್ರೋಸ್ ಅಧಾನೋಮ್ ಗೆಬ್ರಿಯೆಸಿಸ್ ಭಾರತಕ್ಕೆ ಆಗಮಿಸಿದ್ದಾರೆ. ಗುಜರಾತ್‌ಗೆ ಆಗಮಿಸಿದ ತೆದ್ರೋಸ್‌ಗೆ ಸಂಪ್ರದಾಯಿಕ ಕೋಲಾಟದ ಮೂಲಕ ಸ್ವಾಗತ ನೀಡಲಾಗಿದೆ. ಈ ವೇಳೆ ತೆದ್ರೋಸ್ ಕೂಡ ಕೋಲಾಟವಾಡಿ ಗಮನಸೆಳೆದಿದ್ದಾರೆ. ಇದೇ ವಿಡಿಯೋಗೆ ಕಮೆಂಟ್ ಮಾಡಿರುವ ಮೋದಿ ನವರಾತ್ರಿಗೆ ಸಿದ್ದವಾಗಿ ಬಂದಿರುವ ತುಳಸಿ ಬಾಯ್‌ಗೆ ಸ್ವಾಗತ ಎಂದಿದ್ದಾರೆ.
ನವದೆಹಲಿ(ಆ.16) ವಿಶ್ವ ಅರೋಗ್ಯ ಸಂಸ್ಥೆಯ ಜಾಗತಿಕ ಶೃಂಗಸಭೆಗಾಗಿ ಗುಜರಾತ್‌ಗೆ ಆಗಮಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ತೆದ್ರೋಸ್ ಅಧಾನೋಮ್ ಗೆಬ್ರಿಯೆಸಿಸ್ ಕೋಲಾಟದ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಗುಜರಾತ್‌ಗೆ ಆಗಮಿಸಿದ ತೆದ್ರೋಸ್‌ಗೆ ಗುಜರಾತಿ ಸಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತ ಕೋರಲಾಗಿದೆ. ಇತ್ತ ತೆದ್ರೋಸ್ ಕೂಡ ಕೋಲಾಟ ಆಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನು ಆಯುಷ್ ಸಚಿವಾಲಯ ಹಂಚಿಕೊಂಡಿದೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರೀತಿಯ ಸ್ವಾಗತ ಕೋರಿದ್ದಾರೆ. ಇದೇ ವೇಳೆ, ನವರಾತ್ರಿಗೆ ಉತ್ತಮವಾಗಿ ಸಿದ್ದರಾಗಿ ಬಂದಿರುವ ನನ್ನ ಸ್ನೇಹಿತ ತುಳಸಿ ಭಾಯ್‌ಗೆ ಆತ್ಮೀಯ ಸ್ವಾಗತ ಎಂದು ಟ್ವೀಟ್ ಮಾಡಿದ್ದಾರೆ.
ಗುಜರಾತ್ ನ ಗಾಂಧಿನಗರದಲ್ಲಿ ನಡೆಯಲಿರುವ ಸಾಂಪ್ರದಾಯಿಕ ಔಷಧಗಳ ಕುರಿತಾದ ವಿಶ್ವ ಅರೋಗ್ಯ ಸಂಸ್ಥೆಯ ಜಾಗತಿಕ ಶೃಂಗಸಭೆಯಲ್ಲಿ ಡಾ. ತೆದ್ರೋಸ್ ಭಾಗಿಯಾಗಲಿದ್ದಾರೆ. ಆಗಸ್ಟ್ 17 ಹಾಗೂ 18 ರಂದು ಶೃಂಗಸಭೆ ನಡೆಯಲಿದೆ. ವಿವಿಧ ದೇಶಗಳ ವೈದ್ಯಕೀಯ ಕ್ಷೇತ್ರದ ಗಣ್ಯರು ಆಗಮಿಸಿದ್ದಾರೆ. ಆಗಮಿಸಿದ ಗಣ್ಯರಿಗೆ ಅದ್ಧೂರಿ ಸ್ವಾಗತ ಕೋರಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗುಜರಾತಿ ಸಾಂಪ್ರದಾಯಿಕ ಕೋಲಾಟ ಮೇಳೈಸಿತ್ತು. ಇದೇ ವೇದಿಕೆಯಲ್ಲಿ ಗುಜರಾತಿ ಕೋಲಾಟಗಾರರ ಜೊತೆ ತೆದ್ರೋಸ್ ಅಧಾನೋಮ್ ಗೆಬ್ರಿಯೆಸಿಸ್ ಕೂಡ ಕೋಲಾಡ ಆಡಿದ್ದಾರೆ.
ಕೋವಿಡ್‌ಗಿಂತ ಮಾರಣಾಂತಿಕ ಪಿಡುಗು ಎದುರಿಸಲು ಸಜ್ಜಾಗಿ, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ!
ಗುಜರಾತಿ ಟರ್ಬನ್ ಧರಿಸಿ ಅತೀವ ಸಂತಸದಿಂದ ಕೋಲಾಟ ಆಡಿದ್ದಾರೆ. ಈ ವಿಡಿಯೋವನ್ನು ಆಯುಷ್ ಇಲಾಖೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿತ್ತು.ತೆದ್ರೋಸ್ ಅಧಾನೋಮ್ ಗೆಬ್ರಿಯೆಸಿಸ್‌ಗೆ ಸ್ವಾಗತ ಕೋರುವ ವೇಳೆ ಸ್ನೇಹಿತ ತುಳಸಿ ಬಾಯ್ ಎಂದು ಉಲ್ಲೇಖಿಸಿದ್ದಾರೆ. ಕಳೆದ ಭಾರಿ ವಿಶ್ ಆರೋಗ್ಯ ಸಂಸ್ಥೆ ಮಹಾನಿರ್ದೇಶಕರ ತೆದ್ರೋಸ್ ಅಧಾನೋಮ್ ಗೆಬ್ರಿಯೆಸಿಸ್ ಭೇಟಿ ಮಾಡಿದ್ದ ವೇಳೆ ಈ ಹೆಸರು ನೀಡಿದ್ದರು. ಹೀಗಾಗಿ ಮೋದಿ ಇದೇ ಹೆಸರನ್ನು ಉಲ್ಲೇಖಿಸಿದ್ದಾರೆ.
ಆಗಸ್ಟ್ 17 ಮತ್ತು 18ರಂದು ನಡೆಯಲಿರುವ ಸಾಂಪ್ರದಾಯಿಕ ಔಷಧಗಳ ಕುರಿತಾದ ವಿಶ್ವ ಅರೋಗ್ಯ ಸಂಸ್ಥೆಯ ಜಾಗತಿಕ ಶೃಂಗಸಭೆ ನಡೆಯಲಿದೆ. ಇದೇ ವೇಳೆ ಜಿ20 ಆರೋಗ್ಯ ಸಚಿವರ ಸಭೆ ನಡೆಯಲಿದೆ. ವೈಜ್ಞಾನಿಕ ಪುರಾವೆಗಳು,ಡೇಟಾ, ನಿಯಂತ್ರಣ, ಕಲಿಕೆ ಡಿಜಿಟಲ್ ಆರೋಗ್ಯ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. ವಿಶೇಷವಾಗಿ ಸಾಂಪ್ರದಾಯಿಕ ಔಷಧಿಗಳ ಕುರಿತು ಈ ಶೃಂಗಸಭೆಯಲ್ಲಿ ಮಂತ್ರಿಗಳ ಜೊತೆ ಚರ್ಚೆ ಹಾಗೂ ಸಂವಾದ ನಡೆಯಲಿದೆ. ವಿಶ್ವ ಅರೋಗ್ಯ ಸಂಸ್ಥೆಯ ಜಾಗತಿಕ ಶೃಂಗಸಭೆಯನ್ನು ಭಾರತ ಸರ್ಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಜಂಟಿಯಾಗಿ ಆಯೋಜಿಸುತ್ತಿದೆ.
World Health Day : ಭಾರತದ ಮಹಿಳೆಯರಲ್ಲಿ ಹೆಚ್ಚಾಗ್ತಿದೆ ಈ ಸಮಸ್ಯೆ
ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಧಾರವಾಡದ ಡಿಮಾನ್ಸ್‌ನ ಮಾನಸಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಿದ್ದರು. ವಿಶ್ವ ಸಂಸ್ಥೆಯ ಜಿನಿವಾದ ಮೆಂಟಲ್ ಹೆಲ್ತ್ ಏಮರ್ಜೆನ್ಸಿ ಘಟಕದ ಕ್ಲಿನಿಕಲ್ ಸೈಕಲಾಜಿಸ್ಟಡಾ. ಜೇಮ್ಸ್ ಅಂಡರಹಿಲ್, ಸೈಕಿಯಾಟ್ರಿಸ್ಟಡಾ. ಸುದಿಪ್ತೂ ಚಟರ್ಜಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕಾರ್ಯಚಟುವಟಿಕೆಗಳನ್ನು ಹಾಗೂ ಟೆಲಿಮನಸ್ ಉಚಿತ ಸಹಾಯವಾಣಿಯ ಉಪಯುಕ್ತತೆಯ ಕುರಿತಾಗಿ ಮಾಹಿತಿಯನ್ನು ಪಡೆದರು.