ಕೋವಿಡ್‌ಗಿಂತ ಮಾರಣಾಂತಿಕ ಪಿಡುಗು ಎದುರಿಸಲು ಸಜ್ಜಾಗಿ, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ!
ಭಾರತದ ಸೇರಿದಂತೆ ಬಹುತೇಕ ದೇಶದಲ್ಲಿ ಕೋವಿಡ್ ಆತಂಕ ಅಂತ್ಯಗೊಂಡಿದೆ. ಇದೀಗ ಜನ ನಿರಾಳರಾಗುವಂತಿಲ್ಲ. ಕಾರಣ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ಎಚ್ಚರಿಕೆ ನೀಡಿದೆ. ವಿಶ್ವ ಇದೀಗ ಮತ್ತೊಂದು ಮಾರಣಾಂತಿಕ ಪಿಡುಗು ಎದುರಿಸಲು ಸಿದ್ಧರಾಗಿರಿ. ಇದು ಕೋವಿಡ್‌ಗಿಂತ ಭೀಕರ ಎಂದು WHO ಎಚ್ಚರಿಕೆ ನೀಡಿದೆ.
ಜಿನೆವಾ(ಮೇ.24): ಕೋವಿಡ್ ಆತಂಕ ಅಂತ್ಯಗೊಂಡಿದೆ. ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಮಾರಣಾಂತಿಕ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಯಶಸ್ಸು ಸಾಧಿಸಿದೆ. ಕೋವಿಡ್ ಆತಂಕ ದೂರವಾಗಿ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ. ಇದರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದೆ. ವಿಶ್ವ ಇದೀಗ ಮತ್ತೊಂದು ಪಿಡುಗು ಎದಿರಿಸಲು ಸಿದ್ದರಾಗಲು ಸೂಚನೆ ನೀಡಿದೆ. ಈ ಬಾರಿ ಕೋವಿಡ್‌ಗಿಂತ ಮಾರಣಾಂತಿಕ ಹಾಗೂ ಅತ್ಯಂತ ಅಪಾಯಕಾರಿ ವೈರಸ್ ಆತಂಕವನ್ನು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನೊಮ್ ಗೆಬ್ರಿಯಾಸಿಸ್ ಎಚ್ಚರಿಸಿದ್ದಾರೆ.
76ನೇ ಆರೋಗ್ಯ ಸಭೆಯಲ್ಲಿ ಮಾತನಾಡಿದ ಗ್ರೆಬಿಯಾಸಿಸ್ ಹಲುವ ಅಂಕಿ ಅಂಶಗಳನ್ನು, ತಜ್ಞರ ವರದಿಯನ್ನು ತೆರೆದಿಟ್ಟು ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಕೋವಿಡ್ ಬಹುತೇಕ ದೇಶದಲ್ಲಿ ಅಂತ್ಯಗೊಂಡಿದೆ. ಕೆಲ ದೇಶಗಳಲ್ಲಿ ಕೋವಿಡ್ ವೈರಸ್ ಹಲವು ರೂಪಾಂತರಗೊಂಡು ಕಾರ್ಯನಿರ್ವಹಿಸುತ್ತಿದೆ. ಆದರೆ ತೀವ್ರತೆ ಕಡಿಮೆಯಾಗಿದೆ. ಇಡೀ ವಿಶ್ವಕ್ಕೆ ಮತ್ತೊಂದು ಪಿಡುಗಿನ ಸೂಚನೆ ಸಿಕ್ಕಿದೆ. ಈ ಪಿಡುಗು ಕೋವಿಡ್ ವೈರಸ್‌ಗಿಂತ್ ಮಾರಣಾಂತಿಕವಾಗಿದ್ದು, ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ಗೆಬ್ರಿಯಾಸಿಸ್ ಹೇಳಿದ್ದಾರೆ.
ಮೂರೂವರೆ ವರ್ಷಗಳ ಕಾಲ ಜಗತ್ತನ್ನು ಬಾಧಿಸಿದ್ದ ಕೊರೋನಾ ‘ಎಮರ್ಜೆನ್ಸಿ’ಗೆ ಗುಡ್‌ಬೈ: ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ
ಯಾವುದೇ ಸಂದರ್ಭದಲ್ಲೂ ವಿಶ್ವದಲ್ಲಿ ಮತ್ತೊಂದು ವೈರಸ್ ದಾಳಿ ಮಾಡಿ ಇಡೀ ಆರೋಗ್ಯ ವ್ಯವಸ್ಥೆಯನ್ನೇ ಹಾಳು ಮಾಡಬಹುದು. ಈಗಾಗಲೇ ಕೋವಿಡ್ ಪ್ರಕರಣ ನಮ್ಮ ಮುಂದಿದೆ. ಹೀಗಾಗಿ ಕೋವಿಡ್‌ಗಿಂತ ಭೀಕರ ವೈರಸ್ ದಾಳಿ ಮೊದಲೇ ನಾವು ಎಚ್ಚೆತ್ತುಕೊಳ್ಳಬೇಕು. ವೈರಸ್ ಇಡೀ ವಿಶ್ವ ವ್ಯಾಪಿಸಿ ಬದುಕನ್ನು ಸರ್ವನಾಶ ಮಾಡುವ ಪರಿಸ್ಥಿತಿಗೆ ತಲುಪದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಗೆಬ್ರಿಯಾಸಿಸ್ ಹೇಳಿದ್ದಾರೆ.
ಕೋವಿಡ್‌ಗಿಂತ ಅಪಾಯಕಾರಿ ವೈರಸ್ ಯಾವುದೇ ಹಂತದಲ್ಲಿ ವಿಶ್ವದಲ್ಲಿ ವ್ಯಾಪಿಸಬಹುದು. ಕಾರಣ ಕೋವಿಡ್ ಈ ರೀತಿ ವ್ಯಾಪಿಸಿ ವಿಶ್ವವನ್ನೇ ಸ್ಥಬ್ಧಗೊಳಿಸಲಿದೆ ಅನ್ನೋ ಕಲ್ಪೆನೆ ಯಾರಿಗೂ ಇರಲಿಲ್ಲ. ಹೀಗಾಗಿ ಮತ್ತೊಂದು ವೈರಸ್ ಹರಡಿದರೆ ಅದು ಕೋವಿಡ್‌ಗಿಂತ ಭೀಕರವಾಗಿರಲಿದೆ. ಹೀಗಾಗಿ ಇಂತಹ ಪಿಡುಗು ಎದುರಿಸಲು ನಾವು ಸಿದ್ಧರಾಗಿರಬೇಕು. ಇದಕ್ಕೆ ಬೇಕಾದ ತಯಾರಿ ಮಾಡಿಕೊಂಡಿರಬೇಕು. ತುರ್ತು ಆರೋಗ್ಯ ಪರಿಸ್ಥಿತಿ ಎದುರಿಸಲು ಸಿದ್ಧಸೂತ್ರ ಸಜ್ಜುಗೊಳಿಸಬೇಕು ಎಂದಿದ್ದಾರೆ.
ನೊಣ, ಸೊಳ್ಳೆ ರೂಪದ ಡ್ರೋನ್, ಕಚ್ಚಿದ್ರೆ ವೈರಸ್ ಹರಡೋದು ಫಿಕ್ಸ್!
ಇತ್ತೀಚೆಗೆ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ದಿಢೀರ್ ಏರಿಕೆಯಾಗಿತ್ತು. ಮೇ.23ರ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ 405 ಹೊಸ ಕೋವಿಡ್ ಪ್ರಕರಣಗಳು ಭಾರತದಲ್ಲಿ ದಾಖಲಾಗಿತ್ತು. 4 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಗುಣಮುಖರ ಸಂಖ್ಯೆ ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳು 7104ಕ್ಕೆ ಇಳಿಕೆಯಾಗಿದೆ. ಭಾರತದ ಸಕ್ರಿಯ ಪ್ರಕರಣ ಪ್ರಮಾಣವು ಶೇ.0.02 ಗುಣಮುಖರ ಪ್ರಮಾಣವು ಶೇ.98.80 ಹಾಗೂ ಮರಣ ದರವು ಶೇ.1.18ರಷ್ಟುದಾಖಲಾಗಿದೆ. ಭಾರತದಲ್ಲಿ ಈವರೆಗೂ 4.49 ಕೋಟಿ ಮಂದಿಗೆ ಸೋಂಕು ತಗುಲಿದ್ದು, ಅದರಲ್ಲಿ 4.44 ಕೋಟಿ ಮಂದಿ ಗುಣಮುಖರಾಗಿದ್ದಾರೆ ಹಾಗೂ 5.30 ಲಕ್ಷ ಜನ ಸಾವನ್ನಪ್ಪಿದ್ದಾರೆ. ದೇಶದ ಲಸಿಕಾಕರಣವು ಈವರೆಗೆ 220.66 ಕೋಟಿ ಡೋಸ್ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.