Asianet Suvarna News Asianet Suvarna News

World Health Day : ಭಾರತದ ಮಹಿಳೆಯರಲ್ಲಿ ಹೆಚ್ಚಾಗ್ತಿದೆ ಈ ಸಮಸ್ಯೆ

ಇಂದು ಅಂದ್ರೆ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವನ್ನು ಆಚರಣೆ ಮಾಡಲಾಗ್ತಿದೆ. ಜನರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ನೀಡುವುದು ಇದ್ರ ಉದ್ದೇಶ. ಈ ಸಂದರ್ಭದಲ್ಲಿ ಡಬ್ಲ್ಯುಹೆಚ್ ಒ ವರದಿಯೊಂದು ಆತಂಕಮೂಡಿಸಿದೆ. 
 

Why We Celebrate World Health Day Know Its History And This Years Theme
Author
First Published Apr 7, 2023, 11:39 AM IST

ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಏಪ್ರಿಲ್ 7 ಅನ್ನು ವಿಶ್ವ ಆರೋಗ್ಯ ದಿನವನ್ನು ಆಚರಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಆರೋಗ್ಯ ಅಂದ್ರೆ ಆರೋಗ್ಯಕರ ಸೇವನೆ ಮಾತ್ರವಲ್ಲ, ಪ್ರತಿಯೊಬ್ಬರೂ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಎಲ್ಲರೂ ಒಗ್ಗೂಡಿ ಏನು ಮಾಡಬಹುದು ಎಂಬುದನ್ನು ತಿಳಿಯುವುದು ಅಗತ್ಯವಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಆದ ಹೊಸ ಆವಿಷ್ಕಾರಗಳು, ಹೊಸ ಔಷಧಗಳು ಮತ್ತು ಹೊಸ ಲಸಿಕೆಗಳ ಜೊತೆಗೆ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ವಿಶ್ವ ಆರೋಗ್ಯ ಸಂಸ್ಥೆಯ ಆದ್ಯತೆಯಾಗಿದೆ. ಇದೇ ಕಾರಣಕ್ಕೆ ವಿಶ್ವ ಆರೋಗ್ಯ ದಿನವನ್ನು ಆಚರಣೆ ಮಾಡಲಾಗ್ತಿದೆ. ವಿಶ್ವ ಆರೋಗ್ಯ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ  ನಾವಿಂದು ಮಾಹಿತಿ ನೀಡ್ತೇವೆ.

ವಿಶ್ವ (World) ಆರೋಗ್ಯ (Health) ದಿನದ ಇತಿಹಾಸ : ವಿಶ್ವ ಆರೋಗ್ಯ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಯ ಸ್ಥಾಪನೆ ದಿನವಾಗಿ ಪ್ರಾರಂಭಿಸಲಾಯಿತು. 1948 ರಲ್ಲಿ, ಆರೋಗ್ಯವನ್ನು ಉತ್ತೇಜಿಸಲು, ಜಗತ್ತನ್ನು ಸುರಕ್ಷಿತವಾಗಿರಿಸಲು ಮತ್ತು ದುರ್ಬಲರಿಗೆ ಸೇವೆ ಸಲ್ಲಿಸಲು WHO ಸ್ಥಾಪಿಸಲು ಪ್ರಪಂಚದ ರಾಷ್ಟ್ರಗಳು ಒಗ್ಗೂಡಿದವು. ಎರಡು ವರ್ಷಗಳ ನಂತರ ಅಂದ್ರೆ 1950 ರಲ್ಲಿ ಮೊದಲ ವಿಶ್ವ ಆರೋಗ್ಯ ದಿನವನ್ನು ಏಪ್ರಿಲ್ 7 ರಂದು ಆಚರಿಸಲಾಯಿತು. ಅಂದಿನಿಂದ ಇದನ್ನು ಪ್ರತಿ ವರ್ಷ ಏಪ್ರಿಲ್ 7ರಂದು ಆಚರಿಸಿಕೊಂಡು ಬರಲಾಗ್ತಿದೆ. ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆ  75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕಳೆದ ಏಳು ದಶಕಗಳಲ್ಲಿ ಆದ ಆರೋಗ್ಯದ ಪ್ರಗತಿಯನ್ನು ಸಹ ಗಮನಿಸಲಿದೆ.

Health Tips : ಎದೆಯುರಿ, ಅಜೀರ್ಣ ಪದೆ ಪದೇ ಕಾಡುತ್ತಿದ್ದರೆ, ಜೋಪಾನ್. ದೊಡ್ಡ ರೋಗವಿರಬಹುದು!

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವಿಶ್ವದ ಆರೋಗ್ಯ ಸ್ಥಿತಿ ಹೀಗಿದೆ : ಅಚ್ಚರಿಯಾದ್ರೂ ಇದು ಸತ್ಯ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವಿಶ್ವದ ಶೇಕಡಾ 30ರಷ್ಟು ಜನರು ಈವರೆಗೆ ಅಗತ್ಯ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗಿಲ್ಲ. ಇನ್ನು 2 ಬಿಲಿಯನ್ ಜನರ ಬಳಿ ಆರೋಗ್ಯ ಸೇವಗೆ ಖರ್ಚು ಮಾಡಲು ಹಣವಿಲ್ಲದ ಕಾರಣ ಅವರು ಆರೋಗ್ಯ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇಷ್ಟೇ ಅಲ್ಲ ಪ್ರಪಂಚದ ಸುಮಾರು 930 ಬಿಲಿಯನ್ ಜನರು ಆರೋಗ್ಯಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡ್ತಿದ್ದಾರೆ. ತಮ್ಮ ಆದಾಯದ ಶೇಕಡಾ 10ರಷ್ಟನ್ನು ಅವರು ಆರೋಗ್ಯಕ್ಕೆ ವ್ಯಯಿಸ್ತಿದ್ದಾರೆ. ಇದ್ರಿಂದಾಗಿ ಅವರು ಆರ್ಥಿಕ ಸ್ಥಿತಿ ಹದಗೆಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 

ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಡೇಟಾದಲ್ಲಿ ಭಾರತೀಯರು ಆತಂಕಪಡುವ ಅಂಶವಿದೆ. ಭಾರತದಲ್ಲಿ ಬೊಜ್ಜು ಮತ್ತು ರಕ್ತಹೀನತೆ ಹೆಚ್ಚು ಎಂದು ವರದಿಯಲ್ಲಿ ಹೇಳಲಾಗಿದೆ. ವರದಿಯ ಪ್ರಕಾರ, ಸದ್ಯ ಪುರುಷರಿಗಿಂತ ಎರಡು ಪಟ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಬೊಜ್ಜಿನ ಸಮಸ್ಯೆ ಕೂಡ ವಿಪರೀತವಾಗಿ ಏರಿಕೆಯಾಗ್ತಿದೆ. ಮಹಿಳೆಯರಲ್ಲಿ ಬೊಜ್ಜು 2015-16 ರಲ್ಲಿ ಶೇಕಡಾ 21ರಷ್ಟಿತ್ತು. 2019-20 ರಲ್ಲಿ ಅದು ಶೇಕಡಾ 24 ಕ್ಕೆ ಏರಿದೆ. ಇವುಗಳಲ್ಲದೆ ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಭಾರತದ ಪ್ರಮುಖ ರಾಜ್ಯಗಳಲ್ಲಿ ಮಕ್ಕಳಲ್ಲಿ ಬೊಜ್ಜು ಹೆಚ್ಚುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ. 

Walking Tips: ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುತ್ತೆ ನಡಿಗೆ

ವಿಶ್ವ ಆರೋಗ್ಯ ದಿನದ ಥೀಮ್ : ಪ್ರತಿ ವರ್ಷ ವಿಶ್ವ ಆರೋಗ್ಯ ಸಂಸ್ಥೆ ಈ ದಿನವನ್ನು ಒಂದು ಥೀಮ್ ನೊಂದಿಗೆ ಆಚರಣೆ ಮಾಡುತ್ತದೆ. ಈ ಬಾರಿ ಎಲ್ಲರಿಗೂ ಆರೋಗ್ಯ ಥೀಮ್ ನೊಂದಿಗೆ ವಿಶ್ವ ಆರೋಗ್ಯ ದಿನವನ್ನು ಆಚರಿಸುತ್ತಿದೆ. ಆರೋಗ್ಯ ಎನ್ನುವುದು ಎಲ್ಲರಿಗೂ ಸಿಗಬೇಕಾದ ಹಕ್ಕು ಎಂಬ ಚಿಂತನೆಯನ್ನು ಇದು ಬಿಂಬಿಸುತ್ತದೆ.
 

Follow Us:
Download App:
  • android
  • ios