ವೈಕುಂಠ ಏಕಾದಶಿಗೆ ತಿಮ್ಮಪ್ಪನ ದರ್ಶನ ಪಡೆಯಲು ನ.10ರಿಂದ ಟಿಕೆಟ್ ಲಭ್ಯ
ಡಿ.23ರಿಂದ ಜ.1ರವರೆಗೆ ಜರುಗುವ ವೈಕುಂಠ ದ್ವಾರ ದರ್ಶನ ಮಹೋತ್ಸವಕ್ಕೆ ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಲು ನ.10ರಿಂದ ಅವಕಾಶ ಕಲ್ಪಿಸಲಾಗಿದೆ.

ತಿರುಮಲ (ನ.6): ಡಿ.23ರಿಂದ ಜ.1ರವರೆಗೆ ಜರುಗುವ ವೈಕುಂಠ ದ್ವಾರ ದರ್ಶನ ಮಹೋತ್ಸವಕ್ಕೆ ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಲು ನ.10ರಿಂದ ಅವಕಾಶ ಕಲ್ಪಿಸಲಾಗಿದೆ ಎಂದು ಟಿಟಿಡಿ (ತಿರುಮಲ ತಿರುಪತಿ ದೇಗುಲ) ಕಾರ್ಯನಿರ್ವಹಣಾಧಿಕಾರಿ ಧರ್ಮರೆಡ್ಡಿ ತಿಳಿಸಿದ್ದಾರೆ. ‘ಈ ಬಾರಿ 10 ದಿನಗಳ ಅವಧಿಯಲ್ಲಿ 4.25ಲಕ್ಷ ಜನರಿಗೆ ವೈಕುಂಠ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆ ಸಮಯದಲ್ಲಿ 300 ರು. ವಿಶೇಷ ದರ್ಶನ ಹಾಗೂ ಶ್ರೀವಾಣಿ ದರ್ಶನ ಹೊರತುಪಡಿಸಿ ಉಳಿದ ಎಲ್ಲ ರೀತಿಯ ದರ್ಶನಗಳನ್ನು ರದ್ದುಪಡಿಸಲಾಗಿದೆ’ ಎಂದು ತಿಳಿಸಿದ್ದಾರೆ.
ವೈಕುಂಠ ಏಕಾದಶಿಯಂದು ವೈಕುಂಠ ದ್ವಾರ ದರ್ಶನವು ಡಿಸೆಂಬರ್ 23 ರಂದು ಪ್ರಾರಂಭವಾಗಲಿದ್ದು, ಜನವರಿ 1 ರವರೆಗೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಸುಗಮ ದರ್ಶನಕ್ಕೆ ಅನುಕೂಲವಾಗುವಂತೆ, ಟಿಟಿಡಿ ಈ 10 ದಿನಗಳಲ್ಲಿ 4.25 ಲಕ್ಷ ಎಸ್‌ಎಸ್‌ಡಿ ಟೋಕನ್‌ಗಳನ್ನು ವಿತರಿಸಲಿದೆ.
ತಿರುಪತಿಗೆ ಭಕ್ತರು ಆಗಮಿಸುವ ಕಾಲ್ನಡಿಗೆ ಮಾರ್ಗದಲ್ಲಿ ಚಿರತೆ, ಕರಡಿ ಮತ್ತೊಮ್ಮೆ ಎಚ್ಚರಿಸಿದ ಟಿಟಿಡಿ
ಈ 10 ದಿನಗಳಲ್ಲಿ ವಿಐಪಿ ದರ್ಶನಗಳು, ಆರ್ಜಿತ ಸೇವಾ ದರ್ಶನಗಳು ಮತ್ತು ಶಿಶುಗಳನ್ನು ಹೊಂದಿರುವ ಪೋಷಕರು, ದೈಹಿಕ ವಿಕಲಚೇತನರು, ಹಿರಿಯ ನಾಗರಿಕರು ಮತ್ತು ಅನಿವಾಸಿ ಭಾರತೀಯರು ಸೇರಿದಂತೆ ಇತರ ವಿಶೇಷ ದರ್ಶನಗಳನ್ನು ರದ್ದುಗೊಳಿಸಲು ಟಿಟಿಡಿ ನಿರ್ಧರಿಸಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
SSD ಟೋಕನ್‌ಗಳ ಜೊತೆಗೆ, TTD ನವೆಂಬರ್ 10 ರಿಂದ ಆನ್‌ಲೈನ್‌ನಲ್ಲಿ ಒಂದು ಟಿಕೆಟ್‌ಗೆ 300 ರೂ. ನಂತೆ 2.25 ಲಕ್ಷ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಿದೆ. ಹೆಚ್ಚುವರಿಯಾಗಿ, 20,000 ಶ್ರೀವಾಣಿ-ಟ್ರಸ್ಟ್ ಲಿಂಕ್ಡ್ ದರ್ಶನ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಹಿಂದಿನ ವರ್ಷಗಳಂತೆಯೇ ವೈಕುಂಠ ದ್ವಾರದ ಅವಧಿಯಲ್ಲಿ ಶ್ರೀವಾಣಿ ಟಿಕೆಟ್ ಹೊಂದಿರುವವರಿಗೆ 300 ರೂ.ಗಳ ದರ್ಶನವನ್ನು ನೀಡಲಾಗುವುದು ಎಂದು ಧರ್ಮರೆಡ್ಡಿ ಮಾಹಿತಿ ಮಾಡಿದರು.
ದೆಹಲಿ ವಿಶ್ವದಲ್ಲೇ ನಂ.1 ಮಲಿನ ನಗರ, ತೀರಾ ವಿಷಮ ಸ್ಥಿತಿ, ಟ್ರಕ್‌ಗಳು ಬ್ಯಾನ್!
2023 ರ ಅಕ್ಟೋಬರ್ ತಿಂಗಳಿಗೆ ತಿರುಮಲ ದೇವಸ್ಥಾನವು 108.65 ಕೋಟಿ ರೂಪಾಯಿಗಳ ಹುಂಡಿ ಸಂಗ್ರಹವನ್ನು ಕಂಡಿತ್ತು ಎಂದು ಧರ್ಮಾ ರೆಡ್ಡಿ ಮಾಹಿತಿ ನೀಡಿದ್ದಾರೆ. ಈ ಅವಧಿಯಲ್ಲಿ, ಸುಮಾರು 21.75 ಲಕ್ಷ ಭಕ್ತರು ತಿರುಮಲಬೆಟ್ಟದ ದೇವಸ್ಥಾನಕ್ಕೆ ಭೇಟಿ ನೀಡಿದರು. ಗಮನಾರ್ಹ ಸಂಗತಿಯೆಂದರೆ, ಸುಮಾರು 8.30 ಲಕ್ಷ ಭಕ್ತರು ಕಲ್ಯಾಣಕಟ್ಟೆಯಲ್ಲಿ ತಮ್ಮ ಮುಡಿಯನ್ನು ಅರ್ಪಿಸುವ ಮೂಲಕ ಹರಕೆಯನ್ನು ತೀರಿಸಿದ್ದಾರೆ.