Asianet Suvarna News Asianet Suvarna News

ದೆಹಲಿ ವಿಶ್ವದಲ್ಲೇ ನಂ.1 ಮಲಿನ ನಗರ, ತೀರಾ ವಿಷಮ ಸ್ಥಿತಿ, ಟ್ರಕ್‌ಗಳು ಬ್ಯಾನ್!

ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ತೀರಾ ವಿಷಮ ಸ್ಥಿತಿಗೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಡೀಸೆಲ್‌ ಟ್ರಕ್‌ಗಳು ದೆಹಲಿ ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ವಿಶ್ವದ ಟಾಪ್‌ 10 ಮಲಿನ ನಗರಗಳ ಪಟ್ಟಿ ಬಿಡುಗಡೆ ಮಾಡಿದ ‘ಐಕ್ಯೂ ಏರ್‌’. ದೇಶದ 3 ನಗರಳು ಪಟ್ಟಿಯಲ್ಲಿ.

New Delhi  again  world's most polluted cities compiled by Swiss group IQAir gow
Author
First Published Nov 6, 2023, 9:04 AM IST

ನವದೆಹಲಿ (ನ.6): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟ ಮೀರುತ್ತಿರುವ ನಡುವೆಯೇ ಅದು ಮತ್ತೆ ವಿಶ್ವದಲ್ಲೇ ಅತ್ಯಂತ ಹೆಚ್ಚು ಕಲುಷಿತ ವಾಯು ಮಾಲಿನ್ಯ ಹೊಂದಿರುವ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಸ್ವಿಸ್‌ ಗ್ರೂಪ್‌ನ ಐಕ್ಯೂ ಏರ್‌ ಬಿಡುಗಡೆ ಮಾಡಿರುವ ಭಾನುವಾರದ ವಿಶ್ವದ ಟಾಪ್‌ 10 ಮಲಿನ ನಗರಗಳ ಪಟ್ಟಿಯಲ್ಲಿ ದೇಶದ ಮೂರು ನಗರಗಳು ಕ್ರಮವಾಗಿ ದೆಹಲಿ 1, ಕೋಲ್ಕತಾ 3, ಮತ್ತು ಮುಂಬೈ 6ನೇ ಸ್ಥಾನದಲ್ಲಿವೆ.

ಭಾರತದ ಅತ್ಯಂತ ಕಿರಿಯ ಬಿಲಿಯನೇರ್, ಐಐಟಿಯಲ್ಲಿ ಓದದ ಶ್ರೀಮಂತ ಕನ್ನಡಿಗ 9152 ಕೋಟಿ ರೂ ಆಸ್ತಿಗೆ ಒಡೆಯ

ಭಾನುವಾರ ಮುಂಜಾನೆ 7.30ಕ್ಕೆ ದಾಖಲಾದ ನೈಜ ಸಮಯದ ವಾಯುಗುಣಮಟ್ಟ ಸೂಚ್ಯಂಕ (ಎಕ್ಯೂಐ) ಮಟ್ಟವು ದೆಹಲಿಯಲ್ಲಿ 483, ಕೋಲ್ಕತಾದಲ್ಲಿ 206 ಮತ್ತು ಮುಂಬೈನಲ್ಲಿ 162ರಷ್ಟು ದಾಖಲಾಗಿದೆ.

ಉಳಿದಂತೆ ಪಟ್ಟಿಯಲ್ಲಿ ಪಾಕಿಸ್ತಾನದ ಲಾಹೋರ್‌ 2, ಬಾಂಗ್ಲಾದೇಶದ ಢಾಕಾ 3, ಪಾಕಿಸ್ತಾನದ ಕರಾಚಿ 5, ಚೀನಾದ ಶೆನ್ಯಾಂಗ್‌ 6, ಹಾಂಗ್‌ಝೌ 7, ಕುವೈತ್‌ 9 ಮತ್ತು ಚೀನಾದ ವುಹಾನ್‌ 10ನೇ ಸ್ಥಾನದಲ್ಲಿವೆ. ಇನ್ನು ದೆಹಲಿಯ ಕೆಲವು ಪ್ರದೇಶಗಳಲ್ಲಿ ಎಕ್ಯೂಐ ಮಟ್ಟವು ಬೆಳ್ಳಂಬೆಳಗ್ಗೆ 550ರಷ್ಟು ಏರಿಕೆಯಾಗಿದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ.

ಕಣ್ಣಿಗೆ ಕುಕ್ಕುವಂತಿದೆ ಅಂಬಾನಿಯ ಐಷಾರಾಮಿ ಜಿಯೋ ವರ್ಲ್ಡ್ ಮಾಲ್, ವಿನ್ಯಾಸ ಮಾಡಿದ್ದು ಇವರೇ ನೋಡಿ

6ನೇ ದಿನವೂ ದಿಲ್ಲಿ ವಾಯುಗುಣಮಟ್ಟ ತೀರಾ ವಿಷಮ
ದೆಹಲಿ ಮಾಲಿನ್ಯ ಪ್ರಮಾಣವು ಸತತ 6ನೇ ದಿನವೂ ಏರಿದ್ದು, ಭಾನುವಾರ ಮುಂಜಾನೆಯ ಹೊತ್ತಿಗೆ ವಾಯುಗುಣಮಟ್ಚ ಸೂಚ್ಯಂಕ 450 ಅಂಕಕ್ಕೆ ಕುಸಿಯುವುದಿದೆ. ಇದರೊಂದಿಗೆ ತೀರಾ ವಿಷಮಕ್ಕೆ ಸೂಚ್ಯಂಕ ಕಾಲಿಟ್ಟಿದ್ದು, ಮಾಲಿನ್ಯ ನಿಯಂತ್ರಣ ಯೋಜನೆಯ ಪ್ರಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಕ್ಷಣಗಣನೆ ಆರಂಭವಾಗಿದೆ.

ಮಾಲಿನ್ಯ ಮಟ್ಟ 450 ಮೀರಿದರೆ ನಗರದಲ್ಲಿ ಹಲವು ಕಟ್ಟುಪಾಡು ಜಾರಿಗೆ ಬರಲಿದ್ದು, ಪ್ರಮುಖವಾಗಿ, ವಾಣಿಜ್ಯ ನಾಲ್ಕು ಚಕ್ರ ಹಾಗೂ ಟ್ರಕ್‌ಗಳಿಗೆ ನಿರ್ಬಂಧ ಮತ್ತು ಇಂಗಾಲ ಹೊರಸುಸುವಿಕೆಗೆ, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧ ಹೇರುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ದೆಹಲಿ ಸರ್ಕಾರ ಜನರಿಗೆ ಮುಂಜಾನೆ ಮನೆಯ ಹೊರಗೆ ವ್ಯಾಯಾಮ, ವಾಯುವಿಹಾರ, ಕೆಲವು ಕ್ರೀಡಾ ಚಟುವಟಿಕೆ ಮಾಡದಂತೆ ಮನವಿ ಮಾಡಿದೆ.

ಅಲ್ಲದೆ 5ನೇ ತರಗತಿವರೆಗಿನ ಶಾಲೆಗಳ ಮುಚ್ಚುವಿಕೆಯನ್ನು ನ.10ರವರೆಗೂ ವಿಸ್ತರಿಸಲಾಗಿದ್ದು, 6-12ನೇ ತರಗತಿವರೆಗಿನ ಶಾಲೆಗಳು ಆನ್‌ಲೈನ್‌ ವಿಧಾನದ ಮೂಲಕ ತರಗತಿ ನಡೆಸುವಂತೆ ಆದೇಶಿಸಿದೆ.ಜೀವಿತಾವಧಿ 12 ವರ್ಷ ಕುಸಿತ!

12 ವರ್ಷದಷ್ಟು ಇಳಿಕೆ:
ಈ ನಡುವೆ ಚಿಕಾಗೋ ವಿಶ್ವವಿದ್ಯಾನಿಲಯದ ವರದಿಯೊಂದು ಮಾಲಿನ್ಯದಿಂದಾಗಿ ದೆಹಲಿಗರ ಸರಾಸರಿ ಜೀವಿತಾವಧಿ ಪ್ರಮಾಣ 12 ವರ್ಷಗಳಷ್ಟು ಇಳಿಕೆಯಾಗಿದೆ ಎಂದು ವರದಿ ಮಾಡಿದೆ. ಈ ನಡುವೆ ದೆಹಲಿಯ ಬಹಳಷ್ಟು ಮಕ್ಕಳು ಉಸಿರಾಟ ತೊಂದರೆಯಿಂದ ಬಳಲುತ್ತಿರುವುದು ವರದಿಯಾಗಿದೆ.

Follow Us:
Download App:
  • android
  • ios