ಮಹಾರಾಷ್ಟ್ರದ ಥಾಣೆ ಬಳಿ ಭೀಕರ ಅಪಘಾತವೊಂದು ಸಂಭವಿಸಿದ್ದು, 6 ಜನ ಮೃತಪಟ್ಟಿದ್ದಾರೆ. ವೇಗವಾಗಿ ಬರುತ್ತಿದ್ದ ಕಂಟೈನರ್ ಟ್ರಕ್ ಜೀಪ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ಥಾಣೆ: ಮಹಾರಾಷ್ಟ್ರದ ಥಾಣೆ ಬಳಿ ಭೀಕರ ಅಪಘಾತವೊಂದು ಸಂಭವಿಸಿದ್ದು, 6 ಜನ ಮೃತಪಟ್ಟಿದ್ದಾರೆ. ವೇಗವಾಗಿ ಬರುತ್ತಿದ್ದ ಕಂಟೈನರ್ ಟ್ರಕ್ ಜೀಪ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಮುಂಬೈ-ನಾಸಿಕ್ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದ್ದು, 8 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದು, ಅಪಘಾತದ ರಭಸಕ್ಕೆ ಜೀಪನ್ನು ಟ್ರಕ್ 100 ಮೀಟರ್ ದೂರ ಎಳೆದೊಯ್ದಿದೆ. ನಂತರ ಮಗುಚಿದೆ. ಪರಿಣಾಮ ಆರು ಜನ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಸ್ಥಳೀಯರು ದೌಡಾಯಿಸಿದ್ದು, ಗಾಯಾಳುಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. ನಾಳ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಉಳಿದ ಇಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಪ್ರಾಣ ಬಿಟ್ಟಿದ್ದಾರೆ. ಅಪಘಾತ ನಡೆದ ಸ್ಥಳದಲ್ಲೇ ಈ ಹಿಂದೆಯೂ ಅನೇಕ ಅಪಘಾತಗಳು ಸಂಭವಿಸಿವೆ ಎಂದು ಸ್ಥಳೀಯರು ದೂರಿದ್ದಾರೆ.
ರೀಲ್ಸ್ ಮಾಡ್ತಿದ್ದವರ ಹುಚ್ಚಾಟಕ್ಕೆ ಬಲಿಯಾಯ್ತು ಅಮಾಯಕ ಜೀವ: ಫ್ಲೈಒವರ್ ಮೇಲೆ ಆಗಿದ್ದೇನು?
ಅಪಘಾತದ ದೃಶ್ಯಾವಳಿಗಳು ಅಲ್ಲೇ ಇದ್ದ ಸಿಸಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ. ಗಾಯಾಳುಗಳ್ಲಿ ಕೆಲವರ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಮೃತರನ್ನು 15 ವರ್ಷದ ಚಿನ್ಮಯ್ ವಿಕಾಸ್ ಶಿಂಧೆ, ರಿಯಾ ಕಿಶೋರ್ ಪರ್ದೇಶಿ, 27 ವರ್ಷದ ಚೈತಾಲಿ ಸುಹಾಸ್ ಪಿಂಪಲ್, 50 ವರ್ಷದ ಸಂತೋಷ್ ಅನಂತ್ ಜಾಧವ್, 50 ವರ್ಷದ ವಸಂತ್ ಅನಂತ್ ಜಾಧವ್ ಹಾಗೂ ಪ್ರಜ್ವಲ್ ಶಂಕರ್ ಫಿಕ್ರೆ ಎಂದು ಗುರುತಿಸಲಾಗಿದೆ.
ಅಮ್ಮನ ಪ್ರಾಣಕ್ಕಿಂತಲೂ ದುಬಾರಿಯಾಯ್ತು ಶಿಕ್ಷಣ: ಮಗನ ಶಿಕ್ಷಣ ವೆಚ್ಚ ಭರಿಸಲಾಗದೇ ಜೀವತೆತ್ತ ಅಮ್ಮ