Asianet Suvarna News Asianet Suvarna News

ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ಬಳಕೆ; ತ್ರಿಪುರಾದಲ್ಲಿ 47 ವಿದ್ಯಾರ್ಥಿಗಳು ಎಚ್‌ಐವಿಗೆ ಬಲಿ, 828 ಮಕ್ಕಳಿಗೆ ಪಾಸಿಟಿವ್!

ತ್ರಿಪುರಾದ ಎಚ್‌ಐವಿ ಪ್ರಕರಣಗಳ ಸಂಖ್ಯೆ ಆಘಾತಕಾರಿಯಾಗಿದೆ. ಇಲ್ಲಿ ಎಚ್‌ಐವಿ ಕಾರಣದಿಂದಾಗಿ 47 ವಿದ್ಯಾರ್ಥಿಗಳು ಸಾವಿಗೀಡಾಗಿದ್ದರೆ, ಬರೋಬ್ಬರಿ 828 ವಿದ್ಯಾರ್ಥಿಗಳು ಎಚ್‌ಐವಿಗೆ ಪಾಸಿಟಿವ್ ಎಂದು ಗುರುತಿಸಿಕೊಂಡಿದ್ದಾರೆ.

Tripura On Alert As HIV Infection On Rise In State 47 Students Dead 828 Found Positive skr
Author
First Published Jul 9, 2024, 4:18 PM IST

ತ್ರಿಪುರಾದ ಎಚ್‌ಐವಿ ಪ್ರಕರಣಗಳ ಸಂಖ್ಯೆ ಆಘಾತಕಾರಿಯಾಗಿದೆ. ಇಲ್ಲಿ ಎಚ್‌ಐವಿ ಕಾರಣದಿಂದಾಗಿ 47 ವಿದ್ಯಾರ್ಥಿಗಳು ಸಾವಿಗೀಡಾಗಿದ್ದರೆ, ಬರೋಬ್ಬರಿ 828 ವಿದ್ಯಾರ್ಥಿಗಳು ಎಚ್‌ಐವಿಗೆ ಪಾಸಿಟಿವ್ ಎಂದು ಗುರುತಿಸಿಕೊಂಡಿದ್ದಾರೆ.

ತ್ರಿಪುರಾ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ (ಟಿಎಸ್ಎಸಿಎಸ್) ಹಿರಿಯ ಅಧಿಕಾರಿಯ ಪ್ರಕಾರ, ಪ್ರತಿದಿನ 5-7 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ತ್ರಿಪುರಾದಲ್ಲಿ ಈ ಮಟ್ಟಿನ ಏಡ್ಸ್ ಪ್ರಕರಣಗಳು ವಿದ್ಯಾರ್ಥಿ ವರ್ಗದಲ್ಲಿ ಕಂಡುಬಂದಿರುವುದಕ್ಕೆ ಚುಚ್ಚುಮದ್ದಿನ ಡ್ರಗ್ಸ್ ಬಳಕೆಯೇ ಕಾರಣ ಎನ್ನಲಾಗಿದೆ. 

ತಮ್ಮ ಮೊದಲ ಮದುವೆಗೆ 10 ರೂ. ಕೂಡಾ ಖರ್ಚು ಮಾಡಿಲ್ಲ ಎಂದಿದ್ದ ಆಮೀರ್ ಖಾ ...

ತ್ರಿಪುರಾ ಸ್ಟೇಟ್ ಏಡ್ಸ್ ಕಂಟ್ರೋಲ್ ಸೊಸೈಟಿಯು, 220 ಶಾಲೆಗಳು ಮತ್ತು 24 ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳನ್ನು ಡ್ರಗ್ಸ್ ಇಂಜೆಕ್ಷನ್ ಬಳಕೆದಾರರೆಂದು ಗುರುತಿಸಲಾಗಿದೆ.

Tripura On Alert As HIV Infection On Rise In State 47 Students Dead 828 Found Positive skr
ತ್ರಿಪುರಾ ಜರ್ನಲಿಸ್ಟ್ಸ್ ಯೂನಿಯನ್, ವೆಬ್ ಮೀಡಿಯಾ ಫೋರಮ್ ಮತ್ತು TSACS ನ ಒಗ್ಗಟ್ಟಿನ ಪ್ರಯತ್ನದಿಂದ ಇತ್ತೀಚೆಗೆ ನಡೆದ ಮಾಧ್ಯಮ ಕಾರ್ಯಾಗಾರದಲ್ಲಿ, TSACS ನ ಜಂಟಿ ನಿರ್ದೇಶಕರು ಬೆಳೆಯುತ್ತಿರುವ ಬಿಕ್ಕಟ್ಟಿನ ಹಿಂದಿನ ತೊಂದರೆಯ ಸಂಗತಿಗಳನ್ನು ಮುಂದಕ್ಕೆ ತಂದರು. ಅವರು ಪ್ರಸ್ತುತಪಡಿಸಿದ ಸಂಖ್ಯೆಗಳು ಆತಂಕಕಾರಿಯಾಗಿದ್ದವು. ತ್ರಿಪುರಾದಲ್ಲಿನ ಎಚ್‌ಐವಿ ಸ್ಥಿತಿಯು ದುಃಖಕರವಾಗಿದೆ, ಆಂಟಿರೆಟ್ರೋವೈರಲ್ ಥೆರಪಿ (ಎಆರ್‌ಟಿ) ಕೇಂದ್ರಗಳಲ್ಲಿ ನೋಂದಾಯಿಸಲ್ಪಟ್ಟ ಜನರ ಸಂಖ್ಯೆಯು ಮೇ 2024ರ ಹೊತ್ತಿಗೆ 8,729 ಕ್ಕೆ ತಲುಪಿದೆ. ಈ ಪೈಕಿ 4,570 ಪುರುಷರು, 1,103 ಮಹಿಳೆಯರು ಮತ್ತು ಒಬ್ಬ ಟ್ರಾನ್ಸ್‌ಜೆಂಡರ್ ವ್ಯಕ್ತಿ ಸೇರಿದಂತೆ 5,674 ಜನರು ಪ್ರಸ್ತುತ ಎಚ್ಐವಿ ಹೊಂದಿದ್ದಾರೆ. 

ಫೇರ್‌ನೆಸ್ ಕ್ರೀಂ ಜಾಹಿರಾತಿನ ಯಾಮಿ ಗೌತಮ್‌ಗಿದೆ ಈ ಚರ್ಮ ರೋಗ; ಇದರ ಲಕ ...

Latest Videos
Follow Us:
Download App:
  • android
  • ios