ತ್ರಿಪುರಾ ವಿಧಾನಸಭಾ ಚುನಾವಣೆ: ಭರದಿಂದ ಸಾಗಿದ ಮತದಾನ: ಮಾ.2ಕ್ಕೆ ಫಲಿತಾಂಶ

ಪುರಾದ 60 ಸ್ಥಾನಗಳ ವಿಧಾನಸಭೆಗೆ ಇಂದು ಬಿರುಸಿನ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಮತದಾರರು ಮತಗಟ್ಟೆಗಳತ್ತ ಧಾವಿಸಿ ಬಂದು ಮತ ಚಲಾಯಿಸುತ್ತಿದ್ದಾರೆ.

Tripura Assembly Election Voting going on peacefully through the state akb

ಅಗರ್ತಲಾ: ತ್ರಿಪುರಾದ 60 ಸ್ಥಾನಗಳ ವಿಧಾನಸಭೆಗೆ ಇಂದು ಬಿರುಸಿನ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಮತದಾರರು ಮತಗಟ್ಟೆಗಳತ್ತ ಧಾವಿಸಿ ಬಂದು ಮತ ಚಲಾಯಿಸುತ್ತಿದ್ದಾರೆ. ಇಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಎಡರಂಗ ಮೈತ್ರಿ ಮತ್ತು ತಿಪ್ರಾ ಮೋಥಾ ಪಕ್ಷಗಳ ನಡುವೆ ನೇರಾ ನೇರ ಸ್ಪರ್ಧೆ ಏರ್ಪಟ್ಟಿದೆ. 

ಆಡಳಿತಾರೂಢ ಬಿಜೆಪಿ ಮಣಿಸಲು ಎಡರಂಗ-ಕಾಂಗ್ರೆಸ್‌ ಕೂಟ (Left Front-Congress alliance) ಹಾಗೂ ತ್ರಿಪುರಾ ಮೋಥಾ (Tripura Motha) ಯತ್ನಿಸುತ್ತಿವೆ. ಮಾ.2ರಂದು ಮತ ಎಣಿಕೆ ನಡೆಯಲಿದ್ದು, ಆ ದಿನವೇ ಫಲಿತಾಂಶ ಪ್ರಕಟವಾಗಲಿದೆ. ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ರಾಜ್ಯದಲ್ಲಿ ಒಟ್ಟು 3,337 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. ಇವುಗಲ್ಲಿ 1,100 ಮತಗಟ್ಟೆಗಳನ್ನು ಸೂಕ್ಷ್ಮ ಹಾಗೂ 28 ಮತಗಟ್ಟೆಗಳನ್ನು ಗಂಭೀರ ಎಂದು ಪರಿಗಣಿಸಲಾಗಿದೆ. ಸುರಕ್ಷಿತ ಮತದಾನಕ್ಕಾಗಿ 25 ಸಾವಿರ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. 

ಕೇರಳದಲ್ಲಿ ಕುಸ್ತಿ ತ್ರಿಪುರಾದಲ್ಲಿ ದೋಸ್ತಿ; ಕಾಂಗ್ರೆಸ್- ಸಿಪಿಐ(ಎಂ) ಮೈತ್ರಿ ವಿರುದ್ಧ ಮೋದಿ ವಾಗ್ದಾಳಿ!

ಬಿಜೆಪಿ ಇಲ್ಲಿ 12 ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 2018ಕ್ಕೂ ಮೊದಲು ಬಿಜೆಪಿ ಇಲ್ಲಿ ಒಂದೇ ಒಂದು ಸೀಟು ಕೂಡ ಗೆದ್ದಿರಲಿಲ್ಲ. ಆದರೆ 2018ರಲ್ಲಿ ಬಿರುಗಾಳಿಯಂತೆ ಬಂದು ಇಲ್ಲಿ ಬಿಜೆಪಿ ಅಧಿಕಾರಕ್ಕೇರಿತ್ತು. ಮನೆಯಿಂದ ಹೊರ ಬಂದು ಎಲ್ಲರೂ ಮತ ಚಲಾಯಿಸುವಂತೆ ಪ್ರಧಾನಿ ಮೋದಿ (Prime Minister Modi)ಹಾಗೂ ಅಮಿತ್ ಷಾ ತ್ರಿಪುರಾ ಜನರಿಗೆ ಮನವಿ ಮಾಡಿದ್ದಾರೆ.

ಇತ್ತ ಮತದಾನ ಪ್ರಕ್ರಿಯೆಯಲ್ಲಿ ತೊಂದರೆ ಉಂಟುಮಾಡುವವರನ್ನು ದೂರವಿಡಲು ಅಂತರಾಷ್ಟ್ರೀಯ ಮತ್ತು ಅಂತಾರಾಜ್ಯ ಗಡಿಗಳನ್ನು ಮುಚ್ಚಲಾಗಿದೆ ಎಂದು ತ್ರಿಪುರಾ ಮುಖ್ಯ ಚುನಾವಣಾಧಿಕಾರಿ ಗಿಟ್ಟೆ ಕಿರಣ್‌ಕುಮಾರ್ ದಿನಕರ ರಾವ್ ಹೇಳಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ನಾಳೆ ಬೆಳಗ್ಗೆ 6 ಗಂಟೆಯವರೆಗೆ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಸಿಇಒ ತಿಳಿಸಿದ್ದಾರೆ.

ಮುಖ್ಯಮಂತ್ರಿಯಾದರೂ ವೃತ್ತಿಪರತೆ ಮೆರೆದೆ ಮಾಣಿಕ್ ಸಾಹ, 10 ವರ್ಷ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ!

ಚುನಾವಣಾ ಆಯೋಗದ  ದಾಖಲೆಗಳ ಪ್ರಕಾರ, ಈ ಬಾರಿಯ ಚುನಾವಣೆಯಲ್ಲಿ 28.14 ಲಕ್ಷ ಅರ್ಹ ಮತದಾರರಿದ್ದು, ಅದರಲ್ಲಿ 14,15,233 ಪುರುಷರು, 13,99,289 ಮಹಿಳೆಯರು ಮತ್ತು 62 ತೃತೀಯಲಿಂಗಿಗಳಾಗಿದ್ದಾರೆ. ಈಶಾನ್ಯ ರಾಜ್ಯದಾದ್ಯಂತ ಒಟ್ಟು 3,337 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಸಿಎಂ ಮಣಿಕ್ ಶಾ  8 ರಿಂದ 8.30ರ ಸಮಯದಲ್ಲಿ ಅಗರ್ತಲಾದಲ್ಲಿ ಬಂದು ಮತ ಚಲಾಯಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಗೆಲ್ಲುವ ವಿಶ್ವಾಸವಿದೆ. ಎಲ್ಲರೂ ಮತ ಚಲಾಯಿಸಿ ಎಂದು ಮನವಿ ಮಾಡಿದರು.

 

Latest Videos
Follow Us:
Download App:
  • android
  • ios