ತ್ರಿಪುರಾ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಎಡರಂಗ ಮೈತ್ರಿ ಮಾಡಿಕೊಂಡಿದೆ. ಕೇರಳದಲ್ಲೇ ಈ ಎರಡೂ ಪಕ್ಷಗಳು ಬದ್ಧವೈರಿಗಳಾಗಿದೆ. ಆಡಳಿತದಲ್ಲಿರುವ ಸಿಪಿಐ(ಎಂ)ವಿರುದ್ಧ ಸತತ ವಾಗ್ದಾಳಿ, ಪ್ರತಿಭಟನೆ ನಡೆಸುತ್ತಿದೆ. ಕೇರಳದಲ್ಲಿ ಕುಸ್ತಿ ಮಾಡುವ ಕಾಂಗ್ರೆಸ್ ಸಿಪಿಐ(ಎಂ) ತ್ರಿಪುರಾದಲ್ಲಿ ದೋಸ್ತಿ ಮಾಡಿಕೊಂಡಿದೆ ಎಂದು ಮೋದಿ ಹರಿಹಾಯ್ದಿದ್ದಾರೆ. ಪ್ರಧಾನಿ ಮೋದಿ ಭಾಷಣದ ವಿವರ ಇಲ್ಲಿದೆ.

ತ್ರಿಪುರ(ಫೆ.11): ದುರಾಡಳಿತ, ಭ್ರಷ್ಟಾಚಾರ, ಅಭಿವೃದ್ಧಿಯತ್ತ ತಲೆ ಎತ್ತಿ ನೋಡದ ಹಳೇ ಆಟಗಾರರು ಇದೀಗ ದೇಣಿಗೆಗಾಗಿ ಕೈಜೋಡಿಸಿದ್ದಾರೆ. ಕೇರಳದಲ್ಲಿ ಭಾರಿ ಕುಸ್ತಿ ಮಾಡುವ ಇವರು ತ್ರಿಪುರಾದಲ್ಲಿ ದೋಸ್ತಿ ಮಾಡಿಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಪಕ್ಷಗಳ ಒಳಒಪ್ಪಂದ ಕುರಿತು ವಾಗ್ದಾಳಿ ನಡೆಸಿದ್ದಾರೆ. ತ್ರಿಪುರಾ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಗೋಮತಿ ಜಿಲ್ಲೆಯಲ್ಲಿ ಆಯೋಜಿಸಿದ್ದ ರಾರ‍ಯಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಪಕ್ಷದ ಮೈತ್ರಿ ಅಸಲಿಯತ್ತನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌-ಎಡರಂಗ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಕೇರಳದಲ್ಲಿ ಕುಸ್ತಿ ಆಡುವ ಈ ಎರಡೂ ಪಕ್ಷಗಳು ತ್ರಿಪುರಾದಲ್ಲಿ ‘ದೋಸ್ತಿ’ ಮಾಡಿಕೊಂಡಿವೆ’ ಎಂದು ವ್ಯಂಗ್ಯವಾಡಿದ್ದಾರೆ.

ತ್ರಿಪುರಾ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಮೈತ್ರಿ ಮಾಡಿಕೊಂಡಿದೆ. ಇದೇ ಪಕ್ಷಗಳು ಕೇರಳದಲ್ಲಿ ಭಾರಿ ಕಿತ್ತಾಟವನ್ನೇ ನಡೆಸುತ್ತಿದೆ. ಆರೋಪ ಪ್ರತ್ಯಾರೋಪಗಳ ಸುರಿಮಳೆಯನ್ನೇ ಸುರಿಸುತ್ತಿದೆ. ಕೇರಳದಲ್ಲಿ ಆಡಳಿತ ನಡೆಸುತ್ತಿರುವ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಐ(ಎಂ) ಸರ್ಕಾರದ ವಿರುದ್ಧ ಕೇರಳ ಕಾಂಗ್ರೆಸ್ ಸತತ ವಾಗ್ದಾಳಿ ನಡೆಸುತ್ತಿದೆ. ಆದರೆ ಇದೇ ಪಕ್ಷಗಳು ತ್ರಿಪುರಾದಲ್ಲಿ ಮೈತ್ರಿ ಮಾಡಿಕೊಂಡಿದೆ. ಇದೇ ವಿಚಾರದ ಕುರಿತು ಮೋದಿ ಕೇರಳದಲ್ಲಿ ಕುಸ್ತಿ, ತ್ರಿಪುರಾದಲ್ಲಿ ದೋಸ್ತಿ ಎಂದು ವಾಗ್ದಾಳಿ ನಡೆಸಿದ್ದಾರೆ.

3 ಈಶಾನ್ಯ ರಾಜ್ಯಗಳಿಗೆ ಚುನಾವಣಾ ದಿನಾಂಕ ಘೋಷಣೆ: ಫೆಬ್ರವರಿಯಲ್ಲಿ ಒಂದೇ ಹಂತದಲ್ಲಿ ಚುನಾವಣೆ

ತ್ರಿಪುರಾದ ರಾಧಾಕಿಶೋರ್‌ಪುರ ಹಾಗೂ ಅಂಬಾಸಾದಲ್ಲಿ ಶನಿವಾರ ಬೃಹತ್‌ ಬಿಜೆಪಿ ಚುನಾವಣಾ ರಾರ‍ಯಲಿಗಳಲ್ಲಿ ಮಾತನಾಡಿದ ಮೋದಿ, ವಿಪಕ್ಷಗಳು ಮತ ವಿಭಜನೆ ಎಲ್ಲಾ ಕಸರತ್ತು ನಡೆಸುತ್ತಿದೆ. ಸಣ್ಣ ಸಣ್ಣ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡು ಮತ ವಿಭಿಜಿಸಲು ಮುಂದಾಗಿದೆ. ಬಳಿಕ ಫಲಿತಾಂಶ ಬಂದ ಬೆನ್ನಲ್ಲೇ ಕುದುರೆ ವ್ಯಾಪಾರಕ್ಕೆ ನಿಲ್ಲುತ್ತದೆ ಎಂದು ಮೋದಿ ಹೇಳಿದ್ದಾರೆ. ‘ಕೇವಲ ಅಧಿಕಾರ ಕಬಳಿಸಲು ಮಾಡಿಕೊಂಡಿರುವ ಈ ಮೈತ್ರಿಯಿಂದ ರಾಜ್ಯವು ಹಲವಾರು ವರ್ಷ ಕಾಲ ಹಿಂದಕ್ಕೆ ಹೋಗಲಿದೆ. ಬಿಜೆಪಿ ಮಾಡಿದಂತೆ ಅಭಿವೃದ್ಧಿ ಸಾಧ್ಯವಿಲ್ಲ. ಈ ಹಿಂದೆ ಸಿಪಿಎಂ ಅನ್ನು ‘ಚಂದಾ ವಾಲಿ ಕಂಪನಿ’ (ವಸೂಲಿ ಮಾಡುವ ಕಂಪನಿ) ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಜನರ ಪಡಿತರವನ್ನೇ ಅವರು ಲೂಟಿ ಮಾಡಿದರು. ದುರಾಡಳಿತ ನಡೆಸಿದ ಇಂಥವರು ಪುನಃ ಅಧಿಕಾರಕ್ಕೆ ಬರದಂತೆ ರಾಜ್ಯದ ಜನತೆ ನೋಡಿಕೊಳ್ಳಬೇಕು’ ಎಂದು ಕರೆ ನೀಡಿದರು.

Scroll to load tweet…

‘ಕೇವಲ ಮತ ಕತ್ತರಿಸುವ ಸಣ್ಣಸಣ್ಣ ಪಕ್ಷಗಳೂ ಈ ವಿಪಕ್ಷಗಳ ಮೈತ್ರಿಯಲ್ಲಿ ಸೇರಿಕೊಂಡಿವೆ. ನಾಳೆ ಅಧಿಕಾರ ಸಿಕ್ಕಿತೆಂದರೆ ಅದರಲ್ಲೂ ಪಾಲು ಕೇಳುವ ದುರಾಸೆ ಆ ಪಕ್ಷಗಳಿಗಿದೆ. ಕುದುರೆ ವ್ಯಾಪಾರ ನಡೆಸುವ ಇಂಥವರನ್ನು ಶಾಶ್ವತವಾಗಿ ಮನೆಗಳಲ್ಲಿ ಕೂಡಿ ಹಾಕಿ ಬೀಗ ಹಾಕಬೇಕು’ ಎಂದು ಮನವಿ ಮಾಡಿದರು.

ಮಾರ್ಚ್‌ನಲ್ಲಿ ರಾಜ್ಯಕ್ಕೆ 3 ಬಾರಿ ಪ್ರಧಾನಿ ಮೋದಿ ಆಗಮನ: ಮಾ.10ರೊಳಗೆ ಮೈಸೂರು - ಬೆಂಗಳೂರು ಹೆದ್ದಾರಿ ಉದ್ಘಾಟನೆ

‘ಎಡರಂಗ ಸರ್ಕಾರ ಇದ್ದಾಗ ರಾಜ್ಯದಲ್ಲಿ ಕೇವಲ ಬಡವರ ಹೆಸರು ಹೇಳಿಕೊಂಡು ಲೂಟಿ ನಡೆಯಿತು. ಬಡವರು ಉದ್ಧಾರ ಆಗುವುದು ಕಾಂಗ್ರೆಸ್‌ ಹಾಗೂ ಎಡರಂಗಕ್ಕೆ ಬೇಕಿಲ್ಲ. ಬಡವರಿಗೆ ಆಸೆ ಹುಟ್ಟಿಸಿ ಅಧಿಕಾರ ಪಡೆಯುವ ಆಸೆಯಷ್ಟೇ ಆ ಪಕ್ಷಗಳಿಗಿದೆ. ಆದರೆ ಬಿಜೆಪಿ ಹಾಗಲ್ಲ. ಕಳೆದ ಸಲ ಡಬಲ್‌ ಎಂಜಿನ್‌ ಸರ್ಕಾರ (ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ) ಅಧಿಕಾರಕ್ಕೆ ಬಂದ ನಂತರ ರಾಜ್ಯದ ಆದಿವಾಸಿಗಳ ಅಭಿವೃದ್ಧಿಗೆ ಸಾಕಷ್ಟುಕ್ರಮ ಕೈಗೊಂಡುತು. ಮಿಜೋರಂಗೆ ವಲಸೆ ಹೋಗಿದ್ದ 37 ಸಾವಿರ ಬ್ರೂ ಆದಿವಾಸಿಗಳನ್ನು ಪುನಃ ರಾಜ್ಯಕ್ಕೆ ಕರೆತಂದು ಅಭಿವೃದ್ಧಿ ಶಕೆಗೆ ನಾಂದಿ ಹಾಡಿತು. ಕೇಂದ್ರದ ಆಯುಷ್ಮಾನ್‌ ಭಾರತ, ಪ್ರಧಾನ ಮಂತ್ರಿ ಆವಾಸ್‌ ಯೋಜನೆಗಳ ಸವಲತ್ತು ಗುಡ್ಡಗಾಡು ಜನರನ್ನೂ ತಲುಪುವಂತೆ ಮಾಡಿತು’ ಎಂದರು. ‘ಕಳೆದ ಬಜೆಟ್‌ನಲ್ಲಿ ಹಿಂದಿಗಿಂತಲೂ ಹಲವು ಪಟ್ಟು ಹೆಚ್ಚು ಹಣವನ್ನು ನಾವು ಈಶಾನ್ಯಕ್ಕೆ ನೀಡಿದ್ದೇವೆ’ ಎಂದು ಮೋದಿ ಹೇಳಿಕೊಂಡರು.