ಮುಖ್ಯಮಂತ್ರಿಯಾದರೂ ವೃತ್ತಿಪರತೆ ಮೆರೆದೆ ಮಾಣಿಕ್ ಸಾಹ, 10 ವರ್ಷ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ!
ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಶಾ ಇಂದು 10 ವರ್ಷದ ಬಾಲಕನಿಗೆ ಯಶಸ್ವಿ ಶಸ್ತಚಿಕಿತ್ಸೆ ಮಾಡಿದ್ದಾದ್ದಾರೆ. 7 ತಿಂಗಳ ಹಿಂದೆ ಸಿಎಂ ಆಗಿ ಆಧಿಕಾರವಹಿಸಿಕೊಂಡ ಮಾಣಿಕ್ ಶಾ, ತಮ್ಮ ವೃತ್ತಿಯನ್ನು ಬಿಟ್ಟಿಲ್ಲ. ಈ ಮೂಲಕ ಮಾದರಿ ಹೆಜ್ಜೆ ಇಟ್ಟಿದ್ದಾರೆ.
ಹಪಾನಿಯ(ಜ.11): ತ್ರಿಪುರಾ ಮುಖ್ಯಮಂತ್ರಿ ಡಾ. ಮಾಣಿಕ್ ಸಾಹ ನಡೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಮಾಣಿಕ್ ಸಾಹ ವೃತ್ತಿಯಲ್ಲಿ ವೈದ್ಯ. ಆದರೆ 7 ತಿಂಗಳ ಹಿಂದೆ ತ್ರಿಪುರಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ನಡೆಸುತ್ತಿದ್ದಾರೆ. ಆದರೆ ಇಂದು ಮಾನಿಕ್ ಸಾಹ ಬೆಳಗ್ಗೆ 9 ಗಂಟೆಗೆ ಹಪಾನಿಯದಲ್ಲಿರು ತ್ರಿಪುರಾ ಮೆಡಿಕಲ್ ಕಾಲೇಜಿಲ್ಲಿ ಹಾಜರಿದ್ದರು. ಈ ಭೇಟಿ ಮೆಡಿಕಲ್ ಕಾಲೇಜು ಪರಿಶೀಲನೆಗೆ ಆಗಿರಲಿಲ್ಲ. ಇಷ್ಟೇ ಅಲ್ಲ ಮಾನಿಕ್ ಸಾಹ ಸಿಎಂ ಆಗಿ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿರಲಿಲ್ಲ. ವೈದ್ಯರಾಗಿ ಹಾಜರಾಗಿದ್ದರು. ಇಷ್ಟೇ ಅಲ್ಲ 10 ವರ್ಷದ ಬಾಲಕನಿಗೆ ಯಶಸ್ವಿಯಾಗಿ ದಂತ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. 9 ಗಂಟೆಗೆ ಸರಿಯಾಗಿ ಸರ್ಜರಿ ಆರಂಭಿಸಿದ ಡಾ. ಮಾನಿಕ್ ಶಾ, 9.30ಕ್ಕೆ ಹೊರಬಂದ ಮಾನಿಕ್ ಶಾ ಮುಖದಲ್ಲಿ ನಗು ತುಂಬಿತ್ತು. ಬಾಲಕನಿಗೆ ಯಶಸ್ವಿಯಾಗಿ ಶಸ್ತ್ರಚಿಕ್ತಿತ್ಸೆ ಮಾಡಿದ್ದಾರೆ.
ಡಾ. ಮಾಣಿಕ್ ಶಾ(Dr Manik Saha) ಸರ್ಜರಿ ತಂಡದಲ್ಲಿ ತ್ರಿಪುರಾ ಮೆಡಿಕಲ್ ಕಾಲೇಜು(Tripura Medical College) ಆಸ್ಪತ್ರೆಯ ಡಾ. ಅಮಿತ್ ಲಾಲ್ ಗೋಸ್ವಾಮಿ, ಡಾ.ಪೂಜಾದೇಬನಾಥ್ , ಡಾ.ರುದ್ರಪ್ರಸಾದ್ ಚಕ್ರಬರ್ತಿ, ಡಾ. ಸ್ಮಿತಾ ಪೌಲ್, ಡಾ ಕಾಂಚನ್ ದಾಸ್ ಸೇರಿದಂತೆ ಕೆಲ ವೈದ್ಯರು ಹಾಜರಿದ್ದರು. ಯಶಸ್ವಿ ಸರ್ಜರಿ ಬಳಿಕ ಮಾತನಾಡಿದ ಮುಖ್ಯಮಂತ್ರಿ ಡಾ. ಮಾನಿಕ್ ಸಾಹ, ವರ್ಷಗಳ ಬಳಿಕ ಸರ್ಜರಿ ಮಾಡಿದರೂ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಬಾಲಕ ಚೇತರಿಸಿಕೊಂಡಿದ್ದು, ಸಮಸ್ಸೆ ನಿವಾರಿಸಲಾಗಿದೆ ಎಂದಿದ್ದಾರೆ.
ದಂತವೈದ್ಯ ಮಾಣಿಕ್ ಸಹಾ ತ್ರಿಪುರಾದ ಹೊಸ ಮುಖ್ಯಮಂತ್ರಿ!
ತ್ರಿಪುರಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಡಾ. ಮಾಣಿಕ್ ಶಾ, ಸಿಎಂ ಆದ ಬಳಿಕವೂ ಅದೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ವೃತ್ತಿಪರತೆ ಮೆರೆದಿದ್ದಾರೆ. ಹಲವು ವರ್ಷಗಳ ಕಾಲ ಇದೇ ಆಸ್ಪತ್ರೆಯಲ್ಲಿ ದಂತ ವೈದ್ಯರಾಗಿ ಜನಪ್ರಿಯರಾಗಿದ್ದ ಡಾ. ಮಾಣಿಕ್ ಶಾ, ಬಳಿಕ ರಾಜಕೀದತ್ತ ಮುಖಮಾಡಿದರು.
ತ್ರಿಪುರಾಗೆ ಈ ವರ್ಷ ಚುನಾವಣೆ ನಡೆಯಲಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ತ್ರಿಪುರಾ ಸಿಎಂ ಆಗಿ ಡಾ.ಮಾಣಿಕ್ ಶಾ ಪ್ರಮಾಣವಚನ ಸ್ವೀಕರಿಸಿದ್ದರು. ತ್ರಿಪುರಾದಲ್ಲಿ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪ್ರಬಲವಾಗುವ ಸೂಚನೆ ಸಿಕ್ಕ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಸಿಎಂ ಬದಲಾವಣೆ ಮಾಡಿತ್ತು. ಸಿಎಂ ಆಗಿದ್ದ ಬಿಪ್ಲಬ್ ಕುಮಾರ್ ದೇಬ್ ಬದಲು ಬಿಜೆಪಿ ಅಧ್ಯಕ್ಷರಾಗಿದ್ದ ಡಾ. ಮಾಣಿಕ್ ಶಾ ಅವರನ್ನು ಸಿಎಂ ಮಾಡಿತ್ತು. ಎಪ್ರಿಲ್ ತಿಂಗಳಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಮಾಣಿಕ್ ಶಾಗೆ ಒಂದೇ ತಿಂಗಳಲ್ಲಿ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿತ್ತು.
ವಿಮಾನದಲ್ಲಿ ಪ್ರಯಾಣಿಕನ ಆರೋಗ್ಯ ಏರುಪೇರು, ತುರ್ತು ಚಿಕಿತ್ಸೆ ನೀಡಿ ಜೀವ ಉಳಿಸಿದ ರಾಜ್ಯಾಪಾಲೆ!
ಸಿಎಂ ಮಾಣಿಕ್ ಶಾ ನೇತೃತ್ವದಲ್ಲಿ ನಡೆದ ಉಪಚುನಾವಣೆಯಲ್ಲಿ ತ್ರಿಪುರಾ ಬಿಜೆಪಿ ಭಾರಿ ಗೆಲುವು ದಾಖಲಿಸಿತ್ತು. ತ್ರಿಪುರಾದ 4 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ 3 ಹಾಗೂ ಕಾಂಗ್ರೆಸ್ 1ರಲ್ಲಿ ಗೆದ್ದಿತ್ತು. ಹೀಗೆ ಗೆದ್ದು ಕೊಂಡವರ ಪೈಕಿ ಮುಖ್ಯಮಂತ್ರಿ ಮಾಣಿಕ್ ಸಾಹಾ ಕೂಡ ಇದ್ದರು.