ಪನ್ನಾದ ಕೃಷ್ಣ ಕಲ್ಯಾಣಪುರ ಪಟ್ಟಿಯಲ್ಲಿರುವ ಗಣಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಬುಡಕಟ್ಟು ಯುವಕನೊಬ್ಬ ಇದೇ ಮೊದಲ ಬಾರಿಗೆ ಗಣಿ ಅಗೆದಾಗ ಆತ ನಿರೀಕ್ಷೆಯಯೇ ಮಾಡದ ಉಡುಗೊರೆ ಸಿಕ್ಕಿದೆ. ಮೊದಲ ದಿನವೇ ಆತನಿಗೆ ಜಾಕ್‌ಪಾಟ್‌ ಹೊಡೆದಿದೆ. 

ನವದೆಹಲಿ (ಜು.9): ಪನ್ನಾ ಭೂಮಿ ಯಾವಾಗ ಬಡವನನ್ನು ರಾಜನನ್ನಾಗಿ ಮಾಡುತ್ತದೆ ಅಥವಾ ಒಬ್ಬನನ್ನು ಲಕ್ಷಾಧಿಪತಿಯನ್ನು ಕೋಟ್ಯಾಧಿಪತಿಯನ್ನಾಗಿ ಮಾಡುತ್ತದೆ ಎಂಬುದರ ಬಗ್ಗೆ ಖಚಿತತೆ ಇಲ್ಲ ಎಂದು ಸಾಮಾನ್ಯವಾಗ ಹೇಳುತ್ತಾರೆ. ಆದರೆ, ಇತ್ತೀಚೆಗೆ ಈ ಮಾತು ಒಬ್ಬನ ಜೀವನದಲ್ಲಿನಿಜವಾಗಿದೆ. ಪನ್ನಾದ ಭೂಮಿಯ ಅದೃಷ್ಟ ಹೇಗಿದೆಯೆಂದರೆ, ಸಾಮಾನ್ಯ ಆದಿವಾಸಿ ಕಾರ್ಮಿಕನೊಬ್ಬನ ಜೀವನವನ್ನೇ ಬದಲಾಯಿಸಿಬಿಟ್ಟಿದೆ.

ಮಾಧವ್‌ ಆದಿವಾಸಿ ಎನ್ನುವ ವ್ಯಕ್ತಿ ಪನ್ನಾದ ಕೃಷ್ಣ ಕಲ್ಯಾಣಪುರ ಪಟ್ಟಿಯಲ್ಲಿರುವ ಗಣಿಯಲ್ಲಿ ಕಾರ್ಮಿಕನಾಗಿ ಕೆಲಸ ಆರಂಭಿಸಿದ್ದ. ಕೆಲಸದ ಮೊದಲ ದಿನವೇ ಆತನಿಗೆ ಜಾಕ್‌ಪಾಟ್‌ ಹೊಡೆದಿರುವುದು ವಿಶೇಷ. ಇದೇ ಮೊದಲ ಬಾರಿಗೆ ಗಣಿಯಲ್ಲಿ ಮೈನಿಂಗ್‌ಗಾಗಿ ಬಂದಿದ್ದ ಮಾಧವ್‌ಗೆ ಆರೀ ಬೆಲೆಯ ವಜ್ರ ಸಿಕ್ಕಿದೆ.

ಮೊದಲ ದಿನವೇ ಅವನ ಅದೃಷ್ಟ ಹೊಡೆದಿದೆ. ಈ ಕಾರ್ಮಿಕ ತನ್ನ ಅದೃಷ್ಟವನ್ನು ಪರೀಕ್ಷಿಸಲು ಗಣಿ ಸ್ಥಾಪಿಸಿದ್ದ ಮತ್ತು ಅದೇ ದಿನ ಅವನಿಗೆ 11 ಕ್ಯಾರೆಟ್ 95 ಸೆಂಟ್ಸ್‌ನ ಅದ್ಭುತ ವಜ್ರ ಸಿಕ್ಕಿದೆ. ವಜ್ರದ ಅಂದಾಜು ಮೌಲ್ಯ 40 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ವಾಸ್ತವವಾಗಿ, ಕಾರ್ಮಿಕ ಮಾಧವ, ಕೃಷ್ಣ ಕಲ್ಯಾಣಪುರ ಪಟ್ಟಿಯಲ್ಲಿರುವ ಆಳವಿಲ್ಲದ ಗಣಿಯಲ್ಲಿ ಕೆಲಸ ಮಾಡುತ್ತಿದ್ದರು, ಅಲ್ಲಿ ಅವರು ಇತ್ತೀಚೆಗೆ 11.95 ಕ್ಯಾರೆಟ್‌ಗಳ ಈ ಅಮೂಲ್ಯ ರತ್ನವನ್ನು ಕಂಡುಕೊಂಡರು.

ಪನ್ನಾ ವಜ್ರ ಕಚೇರಿಯ ಅಧಿಕಾರಿ ರವಿ ಪಟೇಲ್ ಹೇಳುವ ಪ್ರಕಾರ "ಈ ವಜ್ರವು ತುಂಬಾ ಸ್ವಚ್ಛ ಮತ್ತು ಅಮೂಲ್ಯವಾಗಿದೆ. ಇದರ ಅಂದಾಜು ಬೆಲೆ 40 ಲಕ್ಷ ರೂ.ಗಳಿಗಿಂತ ಹೆಚ್ಚು" ಎಂದು ಹೇಳಿದರು.

ನಿಯಮಗಳ ಪ್ರಕಾರ ಕಾರ್ಮಿಕನು ಈ ಅಮೂಲ್ಯ ಕಲ್ಲನ್ನು ಪನ್ನಾದಲ್ಲಿರುವ ವಜ್ರ ಕಚೇರಿಯಲ್ಲಿ ಠೇವಣಿ ಇಟ್ಟಿದ್ದಾನೆ. ವಜ್ರವನ್ನು ಶೀಘ್ರದಲ್ಲೇ ಹರಾಜು ಮಾಡಲಾಗುವುದು ಮತ್ತು 12.5 ಪ್ರತಿಶತದಷ್ಟು ರಾಯಧನವನ್ನು ಕಡಿತಗೊಳಿಸಿದ ನಂತರ ಪಡೆದ ಮೊತ್ತವನ್ನು ಕಾರ್ಮಿಕನಿಗೆ ನೀಡಲಾಗುತ್ತದೆ.ಮಧ್ಯಪ್ರದೇಶದ ಬುಂದೇಲ್‌ಖಂಡ್ ಪ್ರದೇಶದಲ್ಲಿ ನೆಲೆಗೊಂಡಿರುವ ಪನ್ನಾ ಜಿಲ್ಲೆಯಲ್ಲಿ 12 ಲಕ್ಷ ಕ್ಯಾರೆಟ್‌ಗಳಷ್ಟು ವಜ್ರದ ನಿಕ್ಷೇಪವಿದೆ ಎಂದು ಅಂದಾಜಿಸಲಾಗಿದೆ.