ಇಂದು ಜಗತ್ತಿನಲ್ಲಿ ಕ್ಯಾನ್ಸರ್‌ನಂಥ ರೋಗಗಳಿಗೆ ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಸಣ್ಣಪುಟ್ಟ ಕೆಲಸಗಳೂ ಕಾರಣ. ಪಾತ್ರೆ ತೊಳೆಯಲು ಬಳಸುವ ಡಿಶ್‌ವಾಶರ್‌ಗಳಿಂದ ಕ್ಯಾನ್ಸರ್‌ನಂಥ ರೋಗ ಹೆಚ್ಚಾಗಿದೆ. ನಮ್ಮ ಪೂರ್ವಜರು ಪಾತ್ರೆ ತೊಳೆಯಲು ಬಳಸುತ್ತಿದ್ದ ಬೂದಿಯನ್ನು ಇಂದು ಅಮೆಜಾನ್‌ ತನ್ನ ಸೈಟ್‌ನಲ್ಲಿ ಮಾರಾಟ ಮಾಡುತ್ತಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಬೆಂಗಳೂರು (ಫೆ.16): ತಮ್ಮ ಧರ್ಮಾಧಾರಿತ ಹೇಳಿಕೆಗಳ ಮೂಲಕವೇ ಕಳೆದ ಕೆಲವು ದಿನಗಳಿಂದ ವ್ಯಾಪಕವಾಗಿ ಸುದ್ದಿಯಲ್ಲಿದ್ದ ಯೋಗ ಗುರು ಬಾಬಾ ರಾಮ್‌ದೇವ್‌ ವಿರುದ್ಧ ಈಗಾಗಲೇ ರಾಜಸ್ಥಾನದ ಬಾರ್ಮರ್‌ನಲ್ಲಿ ನೀಡಿರುವ ಹೇಳಕೆಗೆ ಸಂಬಂಧಪಟ್ಟಂತೆ ಕೇಸ್‌ ಕೂಡ ದಾಖಲಾಗಿದೆ. ಈ ನಡುವೆ ಬಾಬಾ ರಾಮ್‌ದೇವ್‌ ಅವರು ಎರಡು ದಿನಗಳ ಹಿಂದೆ ಮಾಡಿರುವ ಟ್ವೀಟ್‌ ಸಖತ್‌ ವೈರಲ್‌ ಆಗಿದೆ. ದೇಶದಲ್ಲಿ ಸ್ವದೇಶಿ ಉತ್ಪನ್ನಗಳ ತಯಾರಿಕೆಯನ್ನು ಪ್ರೋತ್ಸಾಹಿಸಬೇಕು ಎನ್ನುವುದು ಬಾಬಾ ರಾಮ್‌ದೇವ್‌ ಅವರ ಅಭಿಮತ. ಅದಕ್ಕಾಗಿ ಪತಂಜಲಿ ಎನ್ನುವ ಕಂಪನಿಯ ಮೂಲಕ ಸ್ವದೇಶಿ ದಿನಬಳಕೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಭಾರತೀಯರು ಮೊದಲು ಪೇಸ್ಟ್‌ಗಳ ಬದಲು ಮಸಿಯನ್ನು ಬಳಸಿ ಹಲ್ಲುಜ್ಜುತ್ತಿದ್ದರು. ವಿದೇಶಿ ಕಂಪನಿಗಳು, ಇದರಿಂದ ಅನಾರೋಗ್ಯ ಉಂಟಾಗುತ್ತದೆ ಎಂದು ನಂಬಿಸಿ ಜನರ ದಾರಿ ತಪ್ಪಿಸಿದರು. ಈಗ ಪ್ರತಿಷ್ಠಿತ ಕಂಪನಿಗಳೇ ಚಾರ್ಕೋಲ್‌ (ಮಸಿ) ಪೇಸ್ಟ್‌ಗಳನ್ನು ಮುಕ್ತವಾಗಿ ಮಾರಾಟ ಮಾಡುತ್ತಿದೆ. ಈಗ ಅದೇ ರೀತಿಯ ಇನ್ನೊಂದು ವಿಚಾರವನ್ನು ಬಾಬಾ ರಾಮ್‌ದೇವ್‌ ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ. ಅಮೇಜಾನ್‌ ತಮ್ಮ ಆನ್‌ಲೈನ್‌ ವೇದಿಕೆಯಲ್ಲಿ ಬೂದಿಯ ಪ್ಯಾಕೆಟ್‌ಅನ್ನು ಮಾರಾಟಕ್ಕೆ ಇಟ್ಟಿದೆ. 

Scroll to load tweet…


ಪಾತ್ರೆ ತೊಳೆಯಲು ಮೊದಲಿನಿಂದಲೂ ನಮ್ಮ ಜನ ಬೂದಿ ಬಳಸುತ್ತಿದ್ದರು. ಆದರೆ, ಇದನ್ನು ವಿದೇಶಿ ಕಂಪನಿಗಳು ಅವೈಜ್ಞಾನಿಕ ಎಂದಿದ್ದರು. ಇದರಿಂದ ಕಾಯಿಲೆಗಳು ಬರುತ್ತವೆ ಎಂದು ಹೇಳಿದ್ದರು. ಈಗ ಅಂಥ ಕಂಪನಿಗಳೇ ಬೂದಿಯನ್ನು ಪ್ಯಾಕೆಟ್‌ನಲ್ಲಿ ಮಾರಾಟ ಮಾಡುತ್ತಿವೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

'ನಮ್ಮ ಪೂರ್ವಜರು ಪಾತ್ರೆ ತೊಳೆಯಲು ಬಳಸುತ್ತಿದ್ದ ಒಲೆಯ ಬೂದಿಯನ್ನು ಮೊದಲು ಅವೈಜ್ಞಾನಿಕ ಎಂದು ಗೇಲಿ ಮಾಡುತ್ತಿದ್ದರು. ಕೆಮಿಕಲ್ ಡಿಶ್ ವಾಶ್ ಬಳಸುವುದನ್ನು ರೂಢಿ ಮಾಡಿಸಿದ್ದರು. ಇದು ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಕಾರಣವಾಗಿದೆ. ಇಂದು ಅಮೆಜಾನ್ ನಂಥ ದೊಡ್ಡ ಕಂಪನಿ ಅದೇ ಒಲೆ ಬೂದಿಯನ್ನು ಕೆಜಿಗೆ 1800 ರೂಪಾಯಿಯ ಮಾರಾಟ ಮಾಡುತ್ತಿದೆ' ಎಂದು ಬರೆದುಕೊಂಡಿದ್ದಾರೆ. ನಮ್ಮ ಆಚಾರ, ಪದ್ದತಿ ಅವೈಜ್ಞಾನಿಕ ಎಂದವರೆಲ್ಲ ಮೊದಲ ಅಮೆಜಾನ್‌ಗೆ ಹೋಗಿ ನೋಡಿ ಎಂದು ಹೇಳಿದ್ದಾರೆ.

ಎರಡು ದಿನಗಳ ಹಿಂದೆ ರಾಮ್‌ದೇವ್‌ ಮಾಡಿರುವ ಈ ಟ್ವೀಟ್‌ಅನ್ನು ಈವರೆಗೂ 1.1 ಮಿಲಿಯನ್‌ ಜನರು ವೀಕ್ಷಿಸಿದ್ದಾರೆ. ಅಂದಾಜು 20 ಸಾವಿರಕ್ಕೂ ಹೆಚ್ಚಿನ ಜನರು ಮೆಚ್ಚುಗೆ ಸೂಚಿಸಿದ್ದಾರೆ. 6241 ಮಂದಿ ರೀಟ್ವೀಟ್‌ ಮಾಡಿದ್ದರೆ, 147 ಮಂದಿ ಕೋಟ್‌ ಟ್ವೀಟ್‌ ಮಾಡಿದ್ದಾರೆ. ಅವರ ಈ ಟ್ವೀಟ್‌ಗೆ ಬಂದಿರುವ ಕಾಮೆಂಟ್‌ಗಳು ಕೂಡ ಬಹಳ ಮಜವಾಗಿದೆ. 'ಬಾಬಾ ಜೀ ನಾವು ಇದೇ ರೀತಿಯ ಜನ. ಮೊದಲು ನಾವು ನಮ್ಮ ವಿಷಯಗಳನ್ನು ಕೀಳರಿಮೆಯಿಂದ ನೋಡುತ್ತೇವೆ. ನಂತರ ನಮ್ಮದೇ ವಸ್ತುಗಳನ್ನು ವಿದೇಶಿ ಕಂಪನಿಗಳು ಕೊಡುತ್ತವೆ, ಆಹ ನಾವು ಅದನ್ನು ಸಂತೋಷದಿಂದ ಬಳಸುತ್ತೇವೆ' ಎಂದು ಒಬ್ಬರು ಬರೆದುಕೊಂಡಿದ್ದಾರೆ.

'5 ಬಾರಿ ನಮಾಜ್‌ ಮಾಡು, ಬೇಕಾದ ಪಾಪಗಳನ್ನ ಮಾಡು.. ಮುಸ್ಲಿಮರಿಗೆ ಇದನ್ನೇ ಕಲಿಸೋದು' ಎಂದ ಬಾಬಾ ರಾಮ್‌ದೇವ್‌!

'ಸ್ವಾಮಿ ಜೀ, ನಿಮ್ಮ ಮಾತುಗಳೆಲ್ಲವೂ ಸರಿ, ಆದರೆ ನೀವು ಇದಕ್ಕೆ ಉತ್ತರ ನೀಡಿ, ಬೂದಿಯಿಂದ ಪಾತ್ರೆಗಳನ್ನು ತೊಳೆಯುವುದನ್ನು ಅವೈಜ್ಞಾನಿಕ ಎಂದು ಗೇಲಿ ಮಾಡಿದವರು ಯಾರು? ಆಧುನಿಕತೆಯ ಓಟದಲ್ಲಿ, ಜನರು ಸ್ವತಃ ಡಿಶ್‌ವಾಶರ್‌ಗಳನ್ನು ಅಳವಡಿಸಿಕೊಂಡಿದ್ದಾರೆ. ಇಂದಿಗೂ ನನ್ನ ಹಳ್ಳಿಯಲ್ಲಿ ಪಾತ್ರೆಗಳನ್ನು ಒಲೆಯ ಬೂದಿಯಿಂದ ತೊಳೆಯುತ್ತಾರೆ' ಎಂದು ಇನ್ನೊಬ್ಬರು ಬರೆದಿದ್ದಾರೆ. 'ನೀವು ಕೂಡ ಇಂಥ ಬೂದಿಯನ್ನು ಹತ್ತು ರೂಪಾಯಿಗೆ ಪ್ಯಾಕ್ ಮಾಡಿ ಮನೆಮನೆಗೆ ತಲುಪಿಸಿ' ಇನ್ನು ಇನ್ನೊಬ್ಬರು ಬರೆದಿದ್ದಾರೆ.'ಭಾರತದ ಪ್ರತೀ ವಸ್ತುವೂ ಸತ್ಯ ಸನಾತನದಿಂದ ಕೂಡಿದೆ. ನೀವು ಅಂಥ ವಸ್ತುಗಳ ಉತ್ಪನ್ನಕ್ಕೆ ಚೆನ್ನಾಗಿ ಪತಂಜಲಿ ಮೂಲಕ ಮಾರುಕಟ್ಟೆ ಒದಿಗಿಸಿರುವಿರಿ' ಎಂದು ಬಾಬಾ ರಾಮ್‌ದೇವ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ‘ಲಾಲಾ, ಇದನ್ನು ಪತಂಜಲಿ ಬೂದಿಯನ್ನು 400 ರೂಪಾಯಿಗೆ ಮಾರಬಹುದು ಯೋಚಿಸಿ’ ಎಂದು ಇನ್ನೊಬ್ಬರು ಬಾಬಾ ರಾಮ್‌ದೇವ್‌ ಅವರ ಕಾಲೆಳೆದಿದ್ದಾರೆ.

ಶೀಘ್ರದಲ್ಲೇ ಪಾಕ್‌ 4 ಹೋಳಾಗುತ್ತದೆ, 3 ಭಾಗ ಭಾರತದ ಜೊತೆ ವಿಲೀನವಾಗಲಿದೆ: ಬಾಬಾ ರಾಮ್‌ದೇವ್‌!

ನಿಮ್ಮ ದಂತಕಾಂತಿ ಪೇಸ್ಟ್‌ಗಳಲ್ಲಿ ಫ್ಲೋರೈಡ್‌ಗಳನ್ನು ಮಿಕ್ಸ್‌ ಮಾಡುತ್ತಿರೋದೇಕೆ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು ನೀವೇನು ಯೋಚನೆ ಮಾಡಬೇಡಿ ನನ್ನಿಂದ ಖರೀದಿ ಮಾಡಿ, ಕೆಜಿಗೆ 150 ರೂಪಾಯಿಯಂತೆ ಕೊಡುತ್ತೇನೆ ಎಂದು ಬರೆದುಕೊಂಡಿದ್ದಾರೆ.