'5 ಬಾರಿ ನಮಾಜ್ ಮಾಡು, ಬೇಕಾದ ಪಾಪಗಳನ್ನ ಮಾಡು.. ಮುಸ್ಲಿಮರಿಗೆ ಇದನ್ನೇ ಕಲಿಸೋದು' ಎಂದ ಬಾಬಾ ರಾಮ್‌ದೇವ್!
ಬಾರ್ಮರ್‌ನಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಗುರು ಬಾಬಾ ರಾಮ್‌ದೇವ್, ಇಸ್ಲಾಂ ಹಾಗೂ ಮುಸ್ಲಿಮರ ಬಗ್ಗೆ ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ. ಇಸ್ಲಾಂನಲ್ಲಿ ನಮಾಜ್‌ಗೆ ಮುಖ್ಯ ಆದ್ಯತೆ. ನೀವು ದಿನಕ್ಕೆ ಐದು ಬಾರಿ ನಮಾಜ್ ಮಾಡಿದ ಬಳಿಕ ಏನೇ ಪಾಪ ಮಾಡಿದರೂ ಅಲ್ಲಿ ಸಮರ್ಥಿಸಿಕೊಳ್ಳಬಹುದು ಎಂದಿದ್ದಾರೆ.
ನವದೆಹಲಿ (ಫೆ.3): ಭಾಗೇಶ್ವರ ಧಾಮದ ಆಚಾರ್ಯ ಧೀರೇಂದ್ರ ಶಾಸ್ತ್ರಿ ಕುರಿತಾದ ವಿವಾದ ಇನ್ನೂ ತಣ್ಣಗಾಗಿಲ್ಲ. ಈ ನಡುವೆ ಯೋಗಗುರು ಬಾಬಾ ರಾಮ್‌ದೇವ್ ಇಸ್ಲಾಂ ಹಾಗೂ ಮುಸ್ಲಿಮರ ಕುರಿತಾಗಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ತಮ್ಮ ಭಾಷಣದಲ್ಲಿ ಬಾಬಾ ರಾಮ್‌ದೇವ್ ನಮಾಜ್ ಹಾಗೂ ಕ್ರಿಶ್ಚಿಯನ್ ಧರ್ಮದ ಕುರಿತಾಗಿ ಮಾತನ್ನಾಡಿದ್ದಾರೆ. ರಾಜಸ್ಥಾನದ ಬಾರ್ಮರ್‌ನ ಧಾರ್ಮಿಕ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್ ಈ ಮಾತನ್ನು ಆಡಿದ್ದಾರೆ. ಅವರು ಪನ್ನೋನಿಯೊ ಕಾ ತಾಲಾ ಗ್ರಾಮದ ಬ್ರಹ್ಮಲಿನ್ ಯತಿ ಸಂತ ಧರ್ಮಪುರಿ ಮಹಾರಾಜರ ದೇವಸ್ಥಾನದ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇಸ್ಲಾಂ ಧರ್ಮದಲ್ಲಿ ವ್ಯಕ್ತಿಗಳಿಗೆ ನಮಾಜ್ ಮಾಡುವ ಬಗ್ಗೆ ಮಾತ್ರವೇ ಹೇಳಿಕೊಡಲಾಗುತ್ತದೆ. ಅವರು ಕೂಡ ನಮಾಜ್ ಮಾಡಿದ ಬಳಿಕ, ಎಂಥಾ ಪಾಪಗಳನ್ನು ಬೇಕಾದರೂ ಮಾಡುತ್ತಾರೆ. ದಿನಕ್ಕೆ 5 ಬಾರಿ ನಮಾಜ್ ಮಾಡಿದರೆ ಸಾಕು, ನೀನು ಹಿಂದು ಹುಡುಗಿಯ ಜೊತೆ ಏನ್ ಬೇಕಾದ್ರೂ ಮಾಡು, ಜಿಹಾದ್ ಹೆಸರಲ್ಲಿ ಟೆರರಿಸ್ಟ್ ಬೇಕಾದ್ರೂ ಆಗು, ನಿನ್ನ ತಲೆಯಲ್ಲಿ ಏನು ಮಾಡಬೇಕು ಅನಿಸುತ್ತೋ ಅದೆಲ್ಲವನ್ನೂ ಮಾಡಬಹುದು ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ.
ಹಿಂದು ಧರ್ಮದಲ್ಲಿ ಇಂಥವೆಲ್ಲಾ ಆಗೋದಿಲ್ಲ: ಇನ್ನು ಕ್ರಿಶ್ಚಿಯನ್ ಧರ್ಮದಲ್ಲೂ ಕೂಡ ಹಾಗೆ. ಚರ್ಚ್‌ಗೆ ಹೋಗಿ ಪ್ರಾರ್ಥನೆ ಮಾಡಿ ಮೇಣದ ಬತ್ತಿ ಹಚ್ಚಿ ಬಂದರೆ ಮುಗಿಯಿತು. ಅಲ್ಲಿಗೆ ನಿಮ್ಮ ಎಲ್ಲಾ ಪಾಪಗಳು ತೊಳೆದುಹೋಗುತ್ತದೆ. ಆದರೆ, ಹಿಂದು ಧರ್ಮದಲ್ಲಿ ಇಂಥವೆಲ್ಲಾ ಆಗೋದಿಲ್ಲ ಎಂದಿದ್ದಾರೆ. ಅದಲ್ಲದೆ, ಮೊಣಕಾಲಿನ ಮೇಲೆ ಪೈಜಾಮಾ ಧರಿಸೋದು, ಮೀಸೆಗಳನ್ನು ಬೋಳಿಸಿಕೊಳ್ಳೋದು ಹಾಗೂ ಕ್ಯಾಪ್ ಧರಿಸೋದು ಅವರ ಸ್ವರ್ಗ ಎಂದು ವಿವಾದಿತವಾಗಿ ಮಾತನಾಡಿದ್ದಾರೆ.
ಶೀಘ್ರದಲ್ಲೇ ಪಾಕ್ 4 ಹೋಳಾಗುತ್ತದೆ, 3 ಭಾಗ ಭಾರತದ ಜೊತೆ ವಿಲೀನವಾಗಲಿದೆ: ಬಾಬಾ ರಾಮ್‌ದೇವ್!
ಇಂಥ ಸ್ವರ್ಗ ನರಕ್ಕಿಂತಲೂ ಕೆಟ್ಟದು: ಇವೆಲ್ಲವನ್ನೂ ನಾನು ಹೇಳುತ್ತಿಲ್ಲ. ಈ ಜನರು ಮಾಡುತ್ತಿರೋದನ್ನು ಎಲ್ಲರೂ ನೋಡುತ್ತಿದ್ದಾರೆ. ಇಂಥವೆಲ್ಲಾ ಕೃತ್ಯ ಮಾಡಿದ ಬಳಿಕ, ಸ್ವರ್ಗದಲ್ಲಿ ತಮ್ಮ ಸ್ಥಾನ ಖಚಿತವಾಗಿ ಎನ್ನುವ ಭಾವನೆಯಲ್ಲಿರುತ್ತಾರೆ. ಸ್ವರ್ಗದಲ್ಲಿ ಬೇಕಾದೆಲ್ಲಾ ಸಿಗುತ್ತದೆ. ಮದ್ಯವನ್ನೂ ಕೂಡ ಅಲ್ಲಿ ಕುಡಿಯಬಹದು ಎಂದು ಅವರಿಗೆ ಹೇಳಲಾಗುತ್ತದೆ. ಆದರೆ, ಇಂಥ ಸ್ವರ್ಗ ನರಕಕ್ಕಿಂತಲೂ ಕೆಟ್ಟದು. ಹಾಗಿದ್ದರೂ ಅವರು ಮೀಸೆ ಬೋಳಿಸಿಕೊಳ್ಳುತ್ತಾರೆ ಹಾಗೂ ಕ್ಯಾಪ್ ಧರಿಸುತ್ತಾರೆ. ಇದು ಹುಚ್ಚುತನ. ಅವರು ಯಾವ ರೀತಿಯ ಯೋಚನೆಯಲ್ಲಿದ್ದಾರೆಂದರೆ, ಇಡೀ ಜಗತ್ತಿನ ಜನರನ್ನು ಇಸ್ಲಾಂಗೆ ಮತಾಂತರ ಮಾಡುವ ಇರಾದೆಯಲ್ಲಿದ್ದಾರೆ ಎಂದು ಹೇಳಿದ್ದಾರೆ.
ಶೀಘ್ರದಲ್ಲೇ Patanjali ಬ್ರ್ಯಾಂಡ್‌ಗಳ 4 ಐಪಿಒ ಪ್ರಾರಂಭಿಸಲಿರುವ ಬಾಬಾ ರಾಮ್‌ದೇವ್
ನಾನು ಯಾರನ್ನೂ ಟೀಕಿಸುತ್ತಿಲ್ಲ: ನಾನು ಇಲ್ಲಿ ಯಾರನ್ನು ಟೀಕೆ ಮಾಡುತ್ತಿಲ್ಲ. ಆದರೆ, ಅವರ ಜನರು ಇಂಥ ಯೋಚನೆಗಳಲ್ಲಿದ್ದಾರೆ. ಇಡೀ ಜಗತ್ತನ್ನೇ ಇಸ್ಲಾಂ ಮಾಡುವ ಯೋಚನೆಯಿದೆ ಎಂದು ಕೆಲವು ಹೇಳುತ್ತಾರೆ. ಇನ್ನೂ ಕೆಲವರು ಇಡೀ ವಿಶ್ವವನ್ನೇ ಕ್ರಿಶ್ಚಿಯನ್ ಆಗಿ ಪರಿವರ್ತನೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಮತಾಂತರ ಮಾಡಲು ಅವರಿಗೆ ಬೇಕಾದ ಅಜೆಂಡಾಗಳೇ ಇಲ್ಲ ಎಂದು ರಾಮ್‌ದೇವ್ ಮಾತನಾಡಿದ್ದಾರೆ. ಆದರೆ, ನಮ್ಮ ಸನಾತನ ಧರ್ಮದಲ್ಲಿ ಹೀಗೆಲ್ಲಾ ಆಗೋದಿಲ್ಲ. ನಾವು ಬ್ರಹ್ಮ ಮಹೂರ್ಥದಲ್ಲಿ ದೇವರನ್ನು ನೆನೆಸಿಕೊಂಡು ಏಳಬೇಕು ಎಂದು ಹೇಳುತ್ತದೆ. ಯೋಗ, ಧ್ಯಾನ ಹಾಗೂ ಸಮಾಜದ ಸೇವೆ ಮಾಡು ಎಂದು ಹೇಳಲಾಗುತ್ತದೆ. ಇದು ನಮ್ಮ ಸನಾತನ ಧರ್ಮ. ದೇವರು ಯಾವುದೇ ಜಾತಿ ಧರ್ಮ ಸೃಷ್ಟಿ ಮಾಡಿಲ್ಲ. ಆತ ಮನುಷ್ಯರನ್ನು ಮಾತ್ರವೇ ಸೃಷ್ಟಿ ಮಾಡಿದ್ದು. ಉಳಿದೆಲ್ಲವನ್ನೂ ಮಾನವನೇ ಮಾಡಿಕೊಂಡಿದ್ದಾನೆ. ಅದರಲ್ಲೂ ಹಲವಾರು ಜಾತಿಗಳನ್ನು ಮಾಡಿಕೊಂಡಿದ್ದಾನೆ. ನಮ್ಮ ಧರ್ಮದ ಬಗ್ಗೆ ನಮಗೆ ಗೊತ್ತಿರಬೇಕು. ಧಾರ್ಮಿಕ ಗುರುಗಳ ಮಾರ್ಗದರ್ಶನ ಪಡೆಯಬೇಕು. ಧರ್ಮದ ರಕ್ಷಣೆಗೆ ನಿಲ್ಲಬೇಕು ಎಂದು ಹೇಳಿದ್ದಾರೆ.