Asianet Suvarna News Asianet Suvarna News

ಸಾವಿನಲ್ಲಿ ಅಂತ್ಯವಾದ ಪ್ರೀತಿ: ಫೋನ್‌ನಲ್ಲಿ ಜಗಳಾಡಿ ಸಾವಿಗೆ ಶರಣಾದ ಪ್ರೇಮಿಗಳು

  • ಸಣ್ಣ ಕಾರಣಕ್ಕೆ ಜಗಳವಾಡಿ ಸಾವಿಗೆ ಶರಣಾದ ಪ್ರೇಮಿಗಳು
  • ಬಿಹಾರದಲ್ಲಿ ಯುವತಿ, ಜೈಪುರದಲ್ಲಿ ಯುವಕ ಆತ್ಮಹತ್ಯೆ
  • ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ
     
Tragic end to love story as girl dies by suicide in Bihar while boy at Jaipur akb
Author
Bangalore, First Published Mar 25, 2022, 4:23 PM IST

ಮುಜಾಫರ್‌ಪುರ (ಬಿಹಾರ): ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದು ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಿಎಗೆ ತಯಾರಿ ನಡೆಸುತ್ತಿದ್ದ ಬಿಹಾರದ ಮುಜಾಫರ್‌ಪುರ ನಿವಾಸಿ 23 ವರ್ಷದ ಅಂಜಲಿ ಎಂಬ ಯುವತಿ ಜೈಪುರದಲ್ಲಿ ನೆಲೆಸಿರುವ ತನ್ನ ಗೆಳೆಯ ವಿವೇಕ್ ಜೊತೆಗೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ಗೆಳತಿಯ ಸಾವಿನ ಬಗ್ಗೆ ಮಾಹಿತಿ ಸಿಕ್ಕಿದ ನಂತರ ಗೆಳೆಯ ವಿವೇಕ್ ಕೂಡ ಜೈಪುರದ (Jaipur)8 ನೇ ಮಹಡಿಯಿಂದ ಜಿಗಿದು ಪ್ರಾಣ ಬಿಟ್ಟಿದ್ದಾನೆ. 

ಬಿಹಾರದ ಖಾಜಿ ಮೊಹಮ್ಮದ್‌ಪುರ ಪೊಲೀಸರ ಪ್ರಕಾರ, ಗುರುವಾರ ಬೆಳಗ್ಗೆ ಕುಟುಂಬ ಸದಸ್ಯರಿಂದ ಪದೇ ಪದೇ ಬಂದ ಕರೆಗೆ ಸ್ಪಂದಿಸದೆ ಇದ್ದಾಗ ಹಾಗೂ ನಂತರ ಆಕೆಯನ್ನು ಕರೆಯಲು ಪ್ರಯತ್ನಿಸಿದರೂ ಆಕೆಯ ಕೋಣೆಯ ಬಾಗಿಲು ತೆರೆಯದಿದ್ದಾಗ, ಆಕೆಯ ಕುಟುಂಬ ಸದಸ್ಯರು ಕೀಹೋಲ್ ಮೂಲಕ ಇಣುಕಿ ನೋಡಿದಾಗ ಆಕೆಯ ದೇಹವು ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ತಕ್ಷಣ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರ ಮಾಹಿತಿ ಮೇರೆಗೆ ಖಾಜಿ ಮೊಹಮ್ಮದ್‌ಪುರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಶಶಿಕುಮಾರ್ ಭಗತ್ (Shashi Kumar Bhagat) ಅವರು ಸ್ಥಳಕ್ಕೆ ಧಾವಿಸಿದ್ದರು.

ಹಾವೇರಿ: ವಿಷ ಸೇವಿಸಿ ಪ್ರೇಮಿಗಳ ಆತ್ಮಹತ್ಯೆ, ಕಾರಣ?

ನಂತರ ಪೊಲೀಸರು ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಯುವತಿ ಸೀಲಿಂಗ್ ಫ್ಯಾನ್‌ಗೆ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡಿದ್ದಾಳೆ. ಸಾವಿನ ಬಗ್ಗೆ ಕೊಠಡಿಯಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಅಲ್ಲದೇ ಈಕೆಯ ಮೊಬೈಲ್ ಸ್ಕ್ರೀನ್ ಲಾಕ್ ಆಗಿದ್ದರಿಂದ ಪೊಲೀಸರಿಗೆ ಸ್ಥಳದಲ್ಲೇ ಫೋನ್ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣದ ಬಗ್ಗೆ ಖಾಜಿ ಮೊಹಮ್ಮದ್‌ಪುರ ಠಾಣೆ ಪೊಲೀಸರು  (Qazi Mohammadpur police station) ತನಿಖೆ ಆರಂಭಿಸಿದ್ದಾರೆ.

ಪೊಲೀಸರ ಪ್ರಕಾರ, ಬುಧವಾರ ರಾತ್ರಿ 9 ಗಂಟೆಗೆ ಪ್ರೇಮಿಗಳಾದ ಅಂಜಲಿ ಮತ್ತು ವಿವೇಕ್ ನಡುವೆ ಜಗಳವಾಗಿತ್ತು. ಸಂಭಾಷಣೆಯ ಸಮಯದಲ್ಲಿ, ಮುಜಾಫರ್‌ಪುರದ (Muzaffarpur) ಇವರಿಬ್ಬರಿಗೂ ಸಾಮಾನ್ಯ ಸ್ನೇಹಿತರಾಗಿರುವ ಒಬ್ಬರು ಕೂಡ ಈ ಕಾನ್ಫರೆನ್ಸ್ ಕರೆಯಲ್ಲಿ ಭಾಗಿಯಾಗಿದ್ದರು. ಅವರು ಈ ಇಬ್ಬರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು, ಆದರೆ ಅದೆಲ್ಲವೂ ವ್ಯರ್ಥವಾಗಿದೆ. 

7ರ ಬಾಲಕಿ...42ರ ಪುರುಷ..ಲಾಡ್ಜ್‌ನಲ್ಲಿ ಪ್ರೇಮಿಗಳ ಆತ್ಮಹತ್ಯೆ ಯತ್ನ!
 

ಕಾನ್ಫರೆನ್ಸ್ ಕರೆಯಲ್ಲಿ ಭಾಗಿಯಾಗಿದ್ದ ಕಾಮನ್ ಫ್ರೆಂಡ್, ವಿವೇಕ್ ಮತ್ತು ಅಂಜಲಿ ನಡುವಿನ ವಾಗ್ವಾದದ ನಂತರ, ವಿಷಯಗಳು ಸಹಜವಾದವು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ವಿವೇಕ್ ಕರೆ ಸಂಪರ್ಕ ಕಡಿತಗೊಳಿಸಿದರು. ಕರೆ ಡಿಸ್ಕನೆಕ್ಟ್ ಮಾಡಿದ ನಂತರ ವಿವೇಕ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ನಂತರ  ಅಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಈ ಘಟನೆಯ ನಂತರ, ಅಂಜಲಿಯ ಸಹೋದರ ವಿವೇಕ್‌ಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿ ಮತ್ತು ಗಂಭೀರ ಪರಿಣಾಮ ಎದುರಿಸಬೇಕಾಗಬಹುದು ಎಂದು ಬೆದರಿಕೆ ಹಾಕಿದ್ದಾನೆ. ಅಂಜಲಿಯ ಸಹೋದರನೊಂದಿಗಿನ ಸಂಭಾಷಣೆಯ ನಂತರ, ವಿವೇಕ್ ಜೈಪುರದಲ್ಲಿ ತನ್ನ ನಿವಾಸದ 8 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತ ತನ್ನದೇ ಸ್ವಂತ ಕುಟುಂಬಸ್ಥರ ಕಿರುಕುಳದಿಂದ ಬೇಸತ್ತು ಅಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿವೇಕ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಪೊಲೀಸರು ವಿವೇಕ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತದೇಹದ ಬಳಿ ಮೊಬೈಲ್ ಫೋನ್ ಕೂಡ ಪತ್ತೆಯಾಗಿದೆ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗುವುದು ಎಂದು ಜೈಪುರ ಪೊಲೀಸ್ (Jaipur police) ಡಿಎಸ್ಪಿ ರಾಮನರೇಶ್ ಪಾಸ್ವಾನ್ (Ramnaresh Paswan) ಹೇಳಿದ್ದಾರೆ. ವಿವೇಕ್ (Vivek) ಮತ್ತು ಅಂಜಲಿ (Anjali) 8ನೇ ತರಗತಿಯಿಂದ ಪರಿಚಿತರಾಗಿದ್ದರಿಂದ ಅವರ ಸಂಬಂಧ ಕುಟುಂಬ ಸದಸ್ಯರಿಗೆ ತಿಳಿದಿತ್ತು. ಅವರು ಓರಿಯಂಟ್ ಕ್ಲಬ್ ಶಾಲೆ (Orient Club school)ಯಲ್ಲಿ ಒಟ್ಟಿಗೆ ಓದಿದ್ದರು. ಇವರಿಬ್ಬರ ಸಂಬಂಧ ತನಗೆ ತಿಳಿದಿತ್ತು ಎಂದು ಮೃತ ಚಿಕ್ಕಪ್ಪ ಸಂಜಯ್ ಸಾಹ್ (Sanjay Sah) ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಅಂಜಲಿಯ ಸಹೋದರನಿಗೆ ಇದು ಇಷ್ಟವಾಗಲಿಲ್ಲ ಮತ್ತು ಅವರ ಸಂಬಂಧವನ್ನು ನಿರಂತರವಾಗಿ ಆತ ವಿರೋಧಿಸುತ್ತಿದ್ದ ಎಂದು ತಿಳಿದು ಬಂದಿದೆ.
 

Follow Us:
Download App:
  • android
  • ios