ಕೊರೋನಾ ಇನ್ನೂ ಹೋಗಿಲ್ಲ: ಪ್ರವಾಸಿಗರಿಗೆ ಕೇಂದ್ರ ಎಚ್ಚರಿಕೆ
- ಕೋವಿಡ್ ಲಾಕ್‌ಡೌನ್ ತೆರವಿನ ಬೆನ್ನಲ್ಲೇ ಪ್ರವಾಸ ಹೆಚ್ಚಳ
- ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರುತ್ತಿರುವ ಪ್ರವಾಸಿಗರು
- ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅಸಮಾಧಾನ
ನವದೆಹಲಿ (ಜು.11): ಕೋವಿಡ್ ಲಾಕ್‌ಡೌನ್ ತೆರವಿನ ಬೆನ್ನಲ್ಲೇ, ಗಿರಿಧಾಮ ಮತ್ತು ಇನ್ನಿತರ ನೆಚ್ಚಿನ ಪ್ರವಾಸಿ ತಾಣಗಳಿಗೆ ಹೋಗುತ್ತಿರುವ ಜನರು ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಗುಂಪು-ಗುಂಪಾಗಿ ಸೇರುತ್ತಿರುವ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನರ ಬೇಕಾಬಿಟ್ಟಿ ಓಡಾಟ: ಸ್ವಲ್ಪ ನಿರ್ಲಕ್ಷಿಸಿದ್ರೂ ಮತ್ತೆ ಸೋಂಕು ಉಲ್ಬಣ..!
‘ಕೊರೋನಾ ವೈರಸ್‌ನ 2ನೇ ಅಲೆ ಇನ್ನೂ ಅಂತ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು’ ಎಂದು ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ.
ಕರ್ನಾಟಕದಲ್ಲಿ ಕೊರೋನಾ ಮತ್ತಷ್ಟು ಇಳಿಕೆ: ಪಾಸಿಟಿವಿಟಿ ದರ ಶೇಕಡ 1.48
"
ಗಿರಿಧಾಮ ಮತ್ತು ಪ್ರವಾಸಿ ತಾಣಗಳ ಹೊಂದಿದ ರಾಜ್ಯಗಳ ಅಧಿಕಾರಿಗಳ ಜೊತೆ ಶನಿವಾರ ಪರಿಶೀಲನಾ ಸಭೆ ನಡೆಸಿದ ಭಲ್ಲಾ ಅವರು, ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಗೋವಾ, ಹಿಮಾಚಲ ಪ್ರದೇಶ, ಕೇರಳ ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಒಟ್ಟಾರೆ ಕೋವಿಡ್ ಪರಿಸ್ಥಿತಿ, ಕೊರೋನಾ ಲಸಿಕೆ ಅಭಿಯಾನದ ಬಗ್ಗೆ ಚರ್ಚೆ ನಡೆಸಲಾಯಿತು.