* ಕರ್ನಾಟಕದಲ್ಲಿ ಕೊರೋನಾ ಮತ್ತಷ್ಟು ಇಳಿಕೆ* ಪಾಸಿಟಿವಿಟಿ ದರ ಶೇಕಡ 1.48ಕ್ಕೆ ಇಳಿಕೆ* ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ 

ಬೆಂಗಳೂರು, (ಜುಲೈ.10): ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ಮತ್ತಷ್ಟು ಕಡಿಮೆಯಾಗಿದ್ದು, ಇಂದು (ಶನಿವಾರ) ಹೊಸದಾಗಿ 2162 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹಾಗೂ 48 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ 2879 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 2796377 ಸೋಂಕಿನಿಂದ ಗುಣಮುಖರಾಗಿದ್ದಾರೆ.

ಜನರ ಬೇಕಾಬಿಟ್ಟಿ ಓಡಾಟ: ಸ್ವಲ್ಪ ನಿರ್ಲಕ್ಷಿಸಿದ್ರೂ ಮತ್ತೆ ಸೋಂಕು ಉಲ್ಬಣ..!

37,141 ಸಕ್ರಿಯ ಪ್ರಕರಣಗಳು ಇದ್ದು, ಪಾಸಿಟಿವಿಟಿ ದರ ಶೇಕಡ 1.48 ರಷ್ಟು ಇದೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 452 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಇಂದು 5 ಮಂದಿ ಮೃತಪಟ್ಟಿದ್ದಾರೆ. 746 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ 
ಬಾಗಲಕೋಟೆ-1, ಬಳ್ಳಾರಿ-27, ಬೆಳವಾಗಿ-106, ಬೆಂಗಳೂರು ಗ್ರಾಮಾಂತರ-12, ಬೆಂಗಳೂರು ನಗರ-452, ಬೀದರ್-4, ಚಾಮರಾಜನಗರ-37, ಚಿಕ್ಕಬಳ್ಳಾಪುರ-22, ಚಿಕ್ಕಮಗಳೂರು-109, ಚಿತ್ರದುರ್ಗ-34, ದಕ್ಷಿಣ ಕನ್ನಡ-218, ದಾವಣಗೆರೆ-36, ಧಾರವಾಡ-25, ಗದಗ-9, ಹಾಸನ-178, ಹಾವೇರಿ-9, ಕಲಬುರಗಿ-9, ಕೊಡಗು-108, ಕೋಲಾರ-73, ಕೊಪ್ಪಳ-10, ಮಂಡ್ಯ-63, ಮೈಸೂರು-211, ರಾಯಚೂರು-2, ರಾಮನಗರ-23, ಶಿವಮೊಗ್ಗ-110, ತುಮಕೂರು-98, ಉಡುಪಿ-113, ಉತ್ತರ ಕನ್ನಡ-56, ವಿಜಯಪುರ-1, ಯಾದಗಿರಿ-6.