ಟೋಮ್ಯಾಟೋ ದರಕ್ಕೆ ಜನ ಸುಸ್ತು, ಕೃಷಿ ಕಾಯ್ದೆ ಹಿಂಪಡೆಯಲು ಸಂಪುಟ ಅಸ್ತು; ನ.25ರ ಟಾಪ್ 10 ಸುದ್ದಿ!
ಭಾರಿ ಮಳೆಯಿಂದಾಗಿ ಟೋಮ್ಯಾಟೋ ದರ 150 ರೂಪಾಯಿ ದಾಟಿದೆ. ಪ್ರಧಾನಿ ಮೋದಿ ನೋಯ್ಡಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಛಾಪನೆ ನೆರವೇರಿಸಿದ್ದಾರೆ. ಭಾರತದ ರಸ್ತೆಗಳು ಶೀಘ್ರದಲ್ಲೇ ಅಮೆರಿಕ ರಸ್ತೆ ರೀತಿಯಾಗವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ವಿಚಾರಣೆಗೆ ಹಾಜರಾದ ಹಂಸಲೇಖ, ಮುಂದಿನ ಮದುವೆ ಗಂಡಿನ ಹೆಸರು ಬಾಯ್ಬಿಟ್ಟ ಪ್ರಿಯಾಂಕಾ ಸೇರಿದಂತೆ ಸೇರಿದಂತೆ ನವೆಂಬರ್ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
Noida Airport; ಏಷ್ಯಾದ ಅತೀ ದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ!
ಷ್ಯಾದ ಅತೀ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ(Narnedra Modi) ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಉತ್ತರ ಪ್ರದೇಶದ(Uttar pradesh) ಗೌತಮ್‌ಬುದ್ಧ ನಗರದಲ್ಲಿನ ಜೇವರ್‌ನಲ್ಲಿ(Jewar) ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Noida International Airport) ನಿರ್ಮಾಣವಾಗಲಿದೆ. ಮೊದಲ ಹಂತದ ಕಾಮಾಗಾರಿಗೆ ಸರಿಸುಮಾರು 10,050 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಈ ವಿಮಾನ ನಿಲ್ದಾಣ ಭಾರತದ ಹೆಮ್ಮೆಯ ಪ್ರತೀಕವಾಗಲಿದೆ.
Vegetable Price in Chennai : ನಗರದಲ್ಲಿ ಕೈ ಸುಡುತ್ತಿದೆ ಟೊಮೆಟೋ ಬೆಲೆ
ದಕ್ಷಿಣ ಭಾರತದಲ್ಲಿ (South India) ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ (Heavy Rain ), ಚೆನ್ನೈನಲ್ಲಿ (Chennai) ಪ್ರತಿ ಕೆಜಿ ಟೊಮೊಟೋ (Tomato) ದರವನ್ನು 150 ರು.ಗೆ ಮುಟ್ಟಿಸಿದೆ. ಕರ್ನಾಟಕದಿಂದ (Karnataka) ಟೊಮೆಟೋ ಆಗಮನ ಸ್ಥಗಿತವಾಗಿರುವುದು, ಕೃಷ್ಣಗಿರಿಯಲ್ಲಿ ಮಳೆಯಿಂದಾಗಿ ಬೆಳೆ ನಷ್ಟವಾದ (Crop Loss) ಕಾರಣ, ಬೇಡಿಕೆಗೆ ಅಗತ್ಯ ಪ್ರಮಾಣದ ಪೂರೈಕೆ (supply) ಆಗುತ್ತಿಲ್ಲ. ಹೀಗಾಗಿ ಇಲ್ಲಿನ ಸಗಟು ಮಾರುಕಟ್ಟೆಯಲ್ಲಿ (Market) ಪ್ರತಿ ಕೆಜಿ ಟೊಮೆಟೊ ಬೆಲೆ 120 ರು.ತಲುಪಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ದರ 150 ರು. ಮುಟ್ಟಿದೆ.
Gadkari in J&K : ಭಾರತದ ರಸ್ತೆಗಳಿನ್ನು ಶೀಘ್ರದಲ್ಲಿಯೇ ಅಮೆರಿಕದಂತೆ!
ಮುಂಬರುವ ವರ್ಷಗಳಲ್ಲಿ ಭಾರತದಲ್ಲಿನ ರಸ್ತೆಗಳನ್ನು ಅಮೆರಿಕಾದ ರಸ್ತೆಗಳಂತೆ ಮೂಲ ಸೌಕಾರ್ಯ ಒದಗಿಸಿ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ.
Farm Laws Repeal: 3 ಕೃಷಿ ಕಾಯ್ದೆ ಹಿಂಪಡೆವ ಮಸೂದೆಗೆ ಸಂಪುಟ ಅಸ್ತು!
ವಿವಾದಿತ 3 ಕೃಷಿ ಕಾಯ್ದೆಗಳನ್ನುಮ (Farm Laws repeal) ಹಿಂಪಡೆಯುವ ಮಸೂದೆಗೆ ಕೇಂದ್ರ ಸಚಿವ ಸಂಪುಟ (Union Cabinet) ಬುಧವಾರ ಅನುಮೋದನೆ ನೀಡಿದೆ. ಇದರಿಂದಾಗಿ ರೈತರ (Farmers) ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಕಾಯ್ದೆ ಹಿಂಪಡೆತ ಬೇಡಿಕೆಯನ್ನು ಈಡೇರಿಸುವತ್ತ ಮತ್ತೊಂದು ಪ್ರಮುಖ ಹೆಜ್ಜೆ ಇರಿಸಿದಂತಾಗಿದೆ.
Ind vs NZ Kanpur Test: ಅಯ್ಯರ್-ಜಡೇಜಾ ಶತಕದ ಜತೆಯಾಟ, ಬೃಹತ್ ಮೊತ್ತದತ್ತ ಟೀಂ ಇಂಡಿಯಾ ದಾಪುಗಾಲು
ಶುಭ್‌ಮನ್ ಗಿಲ್ (52), ಶ್ರೇಯಸ್ ಅಯ್ಯರ್(75*) ಹಾಗೂ ರವೀಂದ್ರ ಜಡೇಜಾ(50*) ಬಾರಿಸಿದ ಸಮಯೋಚಿತ ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್ (New Zealand Cricket Team) ವಿರುದ್ದದ ಮೊದಲ ಟೆಸ್ಟ್‌ನ ಮೊದಲ ದಿನದಾಟದಂತ್ಯದ ವೇಳೆಗೆ ಟೀಂ ಇಂಡಿಯಾ (Team India) 4 ವಿಕೆಟ್ ಕಳೆದುಕೊಂಡು 258 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲು ಹಾಕಲಾರಂಭಿಸಿದೆ
Remark Against Pejawara Shri :ವಿಚಾರಣೆಗೆ ಹಾಜರಾದ ಹಂಸಲೇಖ - ಪರ, ವಿರೋಧಿ ಪ್ರತಿಭಟನೆ
ಪೇಜಾವರ (Pejawara Swamiji) ಶ್ರೀಗಳ ವಿರುದ್ಧ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಬಸವನಗುಡಿ ಪೊಲೀಸ್ ಠಾಣೆಗೆ (Police Station) ಚಿತ್ರ ಸಾಹಿತಿ, ಸಂಗೀತ ನಿರ್ದೇಶಕರಾದ ಹಂಸಲೇಖ (hamsalekha) ಅವರು ಹಾಜರಾಗಿದ್ದಾರೆ. ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಈ ನಿಟ್ಟಿನಲ್ಲಿ ತಮ್ಮ ವಕೀಲರ ಜೊತೆ ಆಗಮಿಸಿದ್ದಾರೆ.
Priyanka Chopra : ಗಂಡನ ಎದುರೇ ಮುಂದಿನ ಮದುವೆ ಗಂಡಿನ ಹೆಸರು ಬಾಯ್ಬಿಟ್ಟ ಪ್ರಿಯಾಂಕಾ!
ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಜೋನಾಸ್( Nick Jonas) ತಮ್ಮ ಇನ್ ಸ್ಟಾಗ್ರಾಂ (Social Media) ಖಾತೆಯಲ್ಲಿ ತಮ್ಮ ಹೆಸರಿನ ಜೊತೆಯಿದ್ದ ಪತಿಯ ಹೆಸರನ್ನು ತೆಗೆದುಹಾಕಿದ್ದು ವದಂತಿ ಗೆ ಕಾರಣವಾಗಿತ್ತು. ಇಬ್ಬರು ಬೇರೆ ಬೇರೆಯಾಗುತ್ತಿದ್ದಾರೆ ಎಂದೆಲ್ಲ ಸುದ್ದಿ ಜೋರಾಗಿಯೇ ಓಡಾಡಿತ್ತು.
Petrol Price:ರಾಜ್ಯದ ಪ್ರಮುಖ ನಗರಗಳಲ್ಲಿಇಂದು ಪೆಟ್ರೋಲ್ ದರ ಎಷ್ಟಿದೆ?
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕ ಕಡಿತಗೊಳಿಸಿದ ಕಾರಣ ಕಳೆದ 21 ದಿನಗಳಿಂದ ಇವುಗಳ ಬೆಲೆಯಲ್ಲಿ ಗಮನಾರ್ಹ ಏರಿಳಿತ ಕಂಡುಬಂದಿಲ್ಲ. ರಾಜ್ಯದ ವಿವಿಧ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿ ಇಲ್ಲಿದೆ.
Bounce Infinity Electric Vehicle:ಬೌನ್ಸ್‌ನಿಂದ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಉತ್ಪಾದನೆ
ಗ್ರಾಹಕರಿಗೆ ಬಾಡಿಗೆ (Rent) ಆಧಾರದಲ್ಲಿ ವಿದ್ಯುತ್ ಚಾಲಿತ ( Electric Vehicle ) ದ್ವಿಚಕ್ರ ವಾಹನಗಳನ್ನು (Two Wheeler) ಒದಗಿಸುತ್ತಿದ್ದ ‘ಬೌನ್ಸ್’ ಇದೀಗ ವಿದ್ಯುತ್ ಚಾಲಿತ ದ್ವಿ ಚಕ್ರ ವಾಹನ ಉತ್ಪಾದನೆಗೆ ಇಳಿದಿದೆ.