Noida Airport: ಏಷ್ಯಾದ ಅತೀ ದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ!
- ಏಷ್ಯಾದ ಅತೀ ದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕು ಸ್ಥಾಪನೆ
- ಉತ್ತರ ಪ್ರದೇಶದ ನೋಯ್ಡಾದ ಜೇವರ್‌ನಲ್ಲಿ ಶಂಕು ಸ್ಥಾಪನೆ ನೆರವೇರಿಸಿದ ಮೋದಿ
- 5,845 ಹೆಕ್ಟೇರ್ ಪ್ರದೇಶದಲ್ಲಿ ತಲೆ ಎತ್ತಲಿರುವ ಅತೀ ದೊಡ್ಡ ವಿಮಾನ ನಿಲ್ದಾಣ
ನೋಯ್ಡಾ(ನ.25): ಏಷ್ಯಾದ ಅತೀ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ(Narnedra Modi) ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಉತ್ತರ ಪ್ರದೇಶದ(Uttar pradesh) ಗೌತಮ್‌ಬುದ್ಧ ನಗರದಲ್ಲಿನ ಜೇವರ್‌ನಲ್ಲಿ(Jewar) ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Noida International Airport) ನಿರ್ಮಾಣವಾಗಲಿದೆ. ಮೊದಲ ಹಂತದ ಕಾಮಾಗಾರಿಗೆ ಸರಿಸುಮಾರು 10,050 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಈ ವಿಮಾನ ನಿಲ್ದಾಣ ಭಾರತದ ಹೆಮ್ಮೆಯ ಪ್ರತೀಕವಾಗಲಿದೆ.
ರಾಜಧಾನಿ ವ್ಯಾಪ್ತಿಯಲ್ಲಿ(National Capital Region) ಈಗಾಗಲೇ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ (Indira Gandhi International Airport)ನಿಲ್ದಾಣ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ರಾಜಧಾನಿ ವ್ಯಾಪ್ತಿಯಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಇಷ್ಟೇ ಅಲ್ಲ ಉತ್ತರ ಪ್ರದೇಶದ 5ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅನ್ನೋ ಹೆಗ್ಗಳಿಕೆಗೂ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಲಿದೆ.
Hubballi| ಉತ್ತರ ಕರ್ನಾಟಕದ ಮೊದಲ ವೈಮಾನಿಕ ಕಾರ್ಗೋ ಸೇವೆ ಆರಂಭಅದ್ಧೂರಿ ಸ್ವಾಗತದೊಂದಿಗೆ ವೇದಿಕೆ ಹತ್ತಿದ ನರೇಂದ್ರ ಮೋದಿ ನೆರೆದಿದ್ದ ಜನಸ್ತೋಮದತ್ತ ಕೈಬಿಸಿ ಎಲ್ಲರಿಗೂ ನಮನ ಸಲ್ಲಿಸಿದರು. ಅತೀ ದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ ಮೋದಿ ಬಳಿಕ ನೆರೆದಿದ್ದವರನ್ನುದ್ದೇಶಿ ಮಾತನಾಡಿದರು. ಭೂಮಿ ಪೂಜೆಗೆ ಆಗಮಿಸಿದ ಎಲ್ಲರಿಗೂ ಶುಭಕಾಮನೆಗಳು. ಇದೀಗ ಜೇವರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಇದರ ಅತೀ ದೊಡ್ಡ ಲಾಭ ದಹೆಲಿ(Delhi) ಹಾಗೂ ಉತ್ತರ ಪ್ರದೇಶದ ಜನರಿಗೆ ನೇರವಾಗಿ ಸಲ್ಲಲಿದೆ. ಇದು ಹೊಸ ಭಾರತ, ಒಂದಕ್ಕಿಂತ ಮತ್ತೊಂದು ಅತ್ಯಾಧುನಿಕ ಹಾಗೂ ಅಧುನಿತಕ ತಂತ್ರಜ್ಞಾನದ ಮೂಲಕ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅದು ವಿಮಾನ ನಿಲ್ದಾಣ ಇರಬಹುದು, ರೈಲು ನಿಲ್ದಾಣ, ರಸ್ತೆ ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ. ಇದರ ಲಾಭ ದೇಶದ ಜನರಿಗೆ ಸಿಗಲಿದೆ, ಜನರ ಜೀವನ ಸ್ಥಿತಿ ಸುಧಾರಣೆಯಾಗಲಿದೆ ಎಂದು ಮೋದಿ ಹೇಳಿದರು.
PM Garib Kalyan Anna Yojana: ಮಾರ್ಚ್ 2022ವರೆಗೆ 80 ಕೋಟಿ ಮಂದಿಗೆ ಉಚಿತ ಪಡಿತರ!
ಸಾಮಾನ್ಯ ವರ್ಗದ ಜನ, ಉದ್ಯಮಿ, ವ್ಯಾಪಾರಿ ಸೇರಿದಂತೆ ಎಲ್ಲರಿಗೂ ಇದರ ಲಾಭವಾಗಲಿದೆ. ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕ ಸಾರಿಗೆಯಲ್ಲಿ ಹೊಸ ಇತಿಹಾಸ ರಚಿಸಲಿದೆ. ದೇಶ ಇದೀಗ ಹೆಚ್ಚು ಕೆನೆಕ್ಟ್ ಆಗಿದೆ. ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ನೀವು ಯಾವುದೇ ಕಡೆಗೂ ಪ್ರಯಾಣ ಅತೀ ಸುಲಭವಾಗಿ ಮಾಡಬಹುದು. ರೈಲು ನಿಲ್ದಾಣ, ಫೆರಿಫರಲ್ ಎಕ್ಸ್‌ಪ್ರೆಸ್ ವೇ ಸೇರಿದಂತೆ ಎಲ್ಲಾ ಮಾರ್ಗ ಹಾಗೂ ಸಾರಿಗೆ ಸಂಪರ್ಕ ಈ ವಿಮಾನ ನಿಲ್ದಾಣಕ್ಕೆ ಸಂಪರ್ಕಗೊಂಡಿರುತ್ತದೆ. ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉತ್ತರ ಭಾರತದ ದೇಶಿಯಾ ಸರಕು ಸಾಮಾಗ್ರಿ ಹಾಗೂ ವ್ಯಾಪಾರ ವಹಿವಾಟಿಗೆ ರಹದಾರಿಯಾಗಲಿದೆ ಎಂದು ಮೋದಿ ಹೇಳಿದರು.
ಇಂದು ಭಾರತದಲಿ ನಾಗರೀಕ ವಿಮಾನಯಾನ ನಿಲ್ದಾಣಗಳು ಅಭಿವೃದ್ಧಿಯಾಗುತ್ತಿದೆ. ಹೊಸ ವಿಮಾನ ನಿಲ್ದಾಣಗಳು ತಲೆ ಎತ್ತುತ್ತಿದೆ. ದೇಶದ ಮೂಲೆ ಮೂಲೆಗ ವಿಮಾನ ನಿಲ್ದಾಣದ ಸಂಪರ್ಕ ಸಿಗುತ್ತಿದೆ. ನೋಯ್ಡಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 40 ಏಕರೆ ಪ್ರದೇಶದಲ್ಲಿ ರಿಪೇರಿ, ನಿರ್ವಹಣೆ ಸೇರಿದಂತೆ ವಿಮಾನದ ಬಿಡಿ ಭಾಗಗಳ ಜೋಡಣೆ ಸೇರಿದಂತೆ ಹಲವು ಘಟಕಗಳು ತಲೆ ಎತ್ತಲಿದೆ. ಇಲ್ಲಿನ ನಿರ್ವಹಣಾ ಹಾಗೂ ರಿಪೇರಿ ಕೇಂದ್ರದಿಂದ ಭಾರತದ ಮಾತ್ರವಲ್ಲ ವಿದೇಶಗಳ ವಿಮಾನಗಳನ್ನು ರಿಪೇರಿ ಮಾಡಲಾಗುತ್ತದೆ. ಸದ್ಯ ಭಾರತ ರಿಪೇರಿಗಾಗಿ ವಿದೇಶವನ್ನು ಅವಲಂಬಿಸಿದೆ. ಇದರಿಂದ ಅಪಾರ ನಷ್ಟವಾಗುತ್ತಿದೆ. ಆದರೆ ನೋಯ್ಡಾ ವಿಮಾನ ನಿಲ್ದಾಣದಿಂದ ಈ ಸಮಸ್ಯೆ ಪರಿಹಾರವಾಗಲಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗಲಿದೆ. ದೇಶದ ಸಮಸ್ಯೆಯೂ ಪರಿಹಾರವಾಗಲಿದೆ ಎಂದು ಮೋದಿ ಹೇಳಿದರು.
5,845 ಹೆಕ್ಟೇರ್ ಪ್ರದೇಶದಲ್ಲಿ ನೂತನ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿರ್ಮಾಣವಾಗುತ್ತಿದೆ. ಪ್ರತಿ ವರ್ಷ ಸರಿಸುಮಾರು 1.2 ಕೋಟಿ ಪ್ರಯಾಣಿಕರಿಗೆ ಸೇವೆ ನೀಡಲಿದೆ. ಇದರಿಂದ ಉತ್ತರ ಪ್ರದೇಶ ಮಾತ್ರವಲ್ಲ, ಉತ್ತರ ಭಾರತದ ಪ್ರವಾಸೋದ್ಯಮ ಕೂಡ ಅಭಿವೃದ್ಧಿಯಾಗಲಿದೆ. ಏರ್‌ಪೋರ್ಟ್ ಮೊದಲ ಹಂತದ ಕಾಮಗಾರಿ 2024ರಲ್ಲಿ ಪೂರ್ಣಗೊಳ್ಳಲಿದೆ.