Asianet Suvarna News Asianet Suvarna News

ಇಂದು ಈಶಾನ್ಯದ 3 ರಾಜ್ಯಗಳ ಚುನಾವಣಾ ಫಲಿತಾಂಶ: ತ್ರಿಪುರ, ಮೇಘಾಲಯ, ನಾಗಾಲ್ಯಾಂಡಲ್ಲಿ ಮತ ಎಣಿಕೆ

ತ್ರಿಪುರ, ನಾಗಾಲ್ಯಾಂಡ್‌ ಮತ್ತು ಮೇಘಾಲಯ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿವೆ. ಈ ಚುನಾವಣೆಗಳ ಫಲಿತಾಂಶವು ರಾಷ್ಟ್ರ ರಾಜಕೀಯದ ಮೇಲೆ ಕೊಂಚ ಪರಿಣಾಮ ಬೀರುವ ಸಾಧ್ಯತೆ ಇದೆ.

today 3 northeastern states Election results Counting in Tripura, Meghalaya, Nagaland akb
Author
First Published Mar 2, 2023, 5:47 AM IST

ಕೊಹಿಮಾ/ಶಿಲ್ಲಾಂಗ್‌/ ಅಗರ್ತಲಾ: ತ್ರಿಪುರ, ನಾಗಾಲ್ಯಾಂಡ್‌ ಮತ್ತು ಮೇಘಾಲಯ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿವೆ. ಈ ಚುನಾವಣೆಗಳ ಫಲಿತಾಂಶವು ರಾಷ್ಟ್ರ ರಾಜಕೀಯದ ಮೇಲೆ ಕೊಂಚ ಪರಿಣಾಮ ಬೀರುವ ಸಾಧ್ಯತೆ ಇದೆ.ಮೂರೂ ರಾಜ್ಯಗಳ ವಿಧಾನಸಭೆಗಳು ತಲಾ 60 ಸ್ಥಾನ ಹೊಂದಿವೆ. ನಾಗಾಲ್ಯಾಂಡ್‌ನಲ್ಲಿ ಶೇ.74, ಮೇಘಾಲಯದಲ್ಲಿ ಶೇ.82 ಹಾಗೂ ತ್ರಿಪುರದಲ್ಲಿ ಶೇ.81ರಷ್ಟು ಮತದಾನವಾಗಿತ್ತು. ಮೇಘಾಲಯ ಹಾಗೂ ನಾಗಾಲ್ಯಾಂಡ್‌ನಲ್ಲಿ ತಲಾ 1 ಕಡೆ ಅವಿರೋಧ ಆಯ್ಕೆ ನಡೆದಿತ್ತು. ಈ ಹಿನ್ನೆಲೆಯಲ್ಲಿ 59 ಕ್ಷೇತ್ರದಲ್ಲಿ ಮಾತ್ರ ಮತದಾನ ನಡೆದಿತ್ತು.

ಮೇಘಾಲಯದಲ್ಲಿ (Meghalaya) ಹಾಲಿ ಬಿಜೆಪಿ-ಎನ್‌ಪಿಪಿ (NCP) ಅಧಿಕಾರದಲ್ಲಿದ್ದರೂ, ಈ ಸಲ ಎರಡೂ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿವೆ. ಇದರ ಜತೆಗೆ ತೃಣಮೂಲ ಕಾಂಗ್ರೆಸ್‌ (Trinamool congress) ಕೂಡ ಕಣದಲ್ಲಿದೆ. ಹೀಗಾಗಿ ತ್ರಿಕೋನ ಸಮರ ಏರ್ಪಟ್ಟಿದೆ. ಇನ್ನು ನಾಗಾಲ್ಯಾಂಡ್‌ನಲ್ಲಿ (Nagaland)ಹಾಲಿ ಅಧಿಕಾರದಲ್ಲಿರುವ ಎನ್‌ಡಿಪಿಪಿ ಹಾಗೂ ಬಿಜೆಪಿ ಮೈತ್ರಿಕೂಟ ಮತ್ತೆ ಸ್ಪರ್ಧಿಸುತ್ತಿದೆ. ಕಾಂಗ್ರೆಸ್‌ ಹಾಗೂ ಇತರ ಪ್ರಾದೇಶಿಕ ಪಕ್ಷಗಳೂ (regional parties)ಕಣದಲ್ಲಿವೆ. ತ್ರಿಪುರಾದಲ್ಲೂ ಬಿಜೆಪಿ, ಕಾಂಗ್ರೆಸ್‌-ಎಡರಂಗ, ಟಿಎಂಸಿ, ತ್ರಿಪ್ರಾ ಪಕ್ಷಗಳ ನಡುವೆ ಚತುಷ್ಕೋನ ಸ್ಪರ್ಧೆ ಇದೆ. ಚುನಾವಣೆ ಬೆನ್ನಲ್ಲೇ ಪ್ರಕಟವಾಗಿದ್ದ ಸಮೀಕ್ಷೆಗಳು, ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ ಭವಿಷ್ಯ ನುಡಿದಿದ್ದವು. ಆದರೆ, ತ್ರಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಬಹುಮತ ಪಡೆದುಕೊಳ್ಳಲಿದೆ ಎಂದಿದ್ದವು.

ನನ್ ಹೆಂಡ್ತಿನೂ ಹೀಗೆ ಕೈ ಹಿಡಿದಿಲ್ಲ ಎಂದ ಗಾಯಕ: ಬನ್ನಿ ಕೈ ಹಿಡಿದು ಕಮಲ ಮುಡಿಸುವೆ ಎಂದ ಸಚಿವ

ರಾತ್ರೋರಾತ್ರಿ ತೆರೆಮರೆ ಚರ್ಚೆ:

ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ ಸೂಚನೆ ಲಭಿಸಿರುವ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳ ಬಿಜೆಪಿ ಉಸ್ತುವಾರಿ ಹಿಮಂತ ಬಿಸ್ವ ಶರ್ಮ ಅವರು ಮೇಘಾಲಯ ಮುಖ್ಯಮಂತ್ರಿ ಹಾಗೂ ಎನ್‌ಪಿಪಿ ನಾಯಕ ಕಾನ್ರಾಡ್‌ ಸಂಗ್ಮಾ ಜತೆ ಸೋಮವಾರ ತಡರಾತ್ರಿ ಮಾತುಕತೆ ನಡೆಸಿದ್ದಾರೆ. ಅತಂತ್ರ ಫಲಿತಾಂಶ ಬಂದರೆ ಒಗ್ಗೂಡುವ ಬಗ್ಗೆ ಚರ್ಚಿಸಿದ್ದಾರೆ.

ತ್ರಿಪುರಾದಲ್ಲಿ ಶೇ.81 ರಷ್ಟು ಮತದಾನ: ಮಾ.2ಕ್ಕೆ ಫಲಿತಾಂಶ ಪ್ರಕಟ

 

Follow Us:
Download App:
  • android
  • ios