ತ್ರಿಪುರಾದಲ್ಲಿ ಶೇ.81 ರಷ್ಟು ಮತದಾನ: ಮಾ.2ಕ್ಕೆ ಫಲಿತಾಂಶ ಪ್ರಕಟ

ಗುಡ್ಡಗಾಡು ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಗುರುವಾರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಹಿಂಸಾಚಾರದ ನಡುವೆ ಬಹುತೇಕ ಶಾಂತಿಯುತ ಮತದಾನವಾಗಿದೆ.

81 Percent voting in Tripura Assembly Election, Results will be on March 2 akb

ಅಗರ್ತಲಾ:  ಗುಡ್ಡಗಾಡು ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಗುರುವಾರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಹಿಂಸಾಚಾರದ ನಡುವೆ ಬಹುತೇಕ ಶಾಂತಿಯುತ ಮತದಾನವಾಗಿದೆ. ರಾಜ್ಯದಲ್ಲಿ ಒಟ್ಟು 28.13 ಲಕ್ಷ ಮತದಾರರಿದ್ದು, ಶೇ.81ರಷ್ಟುಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಶೇ.79ರಷ್ಟುಮತ ಚಲಾವಣೆಯಾಗಿತ್ತು.

ಬೇರೆ ಬೇರೆ ಕಡೆ ನಡೆದ ಘರ್ಷಣೆಗಳಲ್ಲಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ. ಒಬ್ಬ ಸಿಪಿಎಂ ನಾಯಕ (CPM leader) ಹಾಗೂ ಅದೇ ಪಕ್ಷದ ಇಬ್ಬರು ಬೂತ್‌ ಏಜೆಂಟ್‌ಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅದನ್ನು ಹೊರತುಪಡಿಸಿದರೆ ಬೆಳಿಗ್ಗೆ 7ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಬಿಗಿ ಭದ್ರತೆಯಲ್ಲಿ ನಡೆದ ಮತದಾನದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಬಂದು ಮತದಾನ ಮಾಡಿದ್ದಾರೆ. ವಿಧಾನಸಭೆ ಚುನಾವಣೆಗೆ ರಾಜ್ಯದಲ್ಲಿ ಒಟ್ಟು 3337 ಬೂತ್‌ಗಳನ್ನು ಸ್ಥಾಪಿಸಲಾಗಿತ್ತು. 40-45 ಕಡೆ ಎಲೆಕ್ಟ್ರಾನಿಕ್‌ ಮತಯಂತ್ರಗಳಲ್ಲಿ ದೋಷ ಕಂಡುಬಂದು, ಅವುಗಳನ್ನು ಬದಲಿಸಲಾಗಿದೆ. ಮತ ಎಣಿಕೆ ಮಾರ್ಚ್ 2ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ (Election Commission) ತಿಳಿಸಿದೆ.

ಕೇರಳದಲ್ಲಿ ಕುಸ್ತಿ ತ್ರಿಪುರಾದಲ್ಲಿ ದೋಸ್ತಿ; ಕಾಂಗ್ರೆಸ್- ಸಿಪಿಐ(ಎಂ) ಮೈತ್ರಿ ವಿರುದ್ಧ ಮೋದಿ ವಾಗ್ದಾಳಿ!

ತ್ರಿಪುರಾದಲ್ಲಿ (Tripura) ಹಾಲಿ ಬಿಜೆಪಿ ಅಧಿಕಾರದಲ್ಲಿದ್ದು, ಮುಖ್ಯಮಂತ್ರಿ ಮಾಣಿಕ್‌ ಸಾಹಾ (Manik Saha) ಅವರು ಮತ್ತೊಮ್ಮೆ ಸ್ಪಷ್ಟಬಹುಮತದೊಂದಿಗೆ ಸರ್ಕಾರ ರಚಿಸುವ ವಿಶ್ವಾಸ ಹೊಂದಿದ್ದಾರೆ. 60 ವಿಧಾನಸಭೆ ಸ್ಥಾನಗಳಿರುವ ರಾಜ್ಯದಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಐಪಿಎಫ್‌ಟಿ ಮೈತ್ರಿಕೂಟ 44 ಸೀಟುಗಳನ್ನು ಗೆದ್ದು ಸರ್ಕಾರ ರಚಿಸಿತ್ತು. ಎಡರಂಗವು ಪ್ರಮುಖ ವಿರೋಧ ಪಕ್ಷವಾಗಿದ್ದು, ಮಾಣಿಕ್‌ ಸರ್ಕಾರ್‌ ವಿರೋಧ ಪಕ್ಷದ ನಾಯಕರಾಗಿದ್ದಾರೆ.

ತ್ರಿಪುರಾ ವಿಧಾನಸಭಾ ಚುನಾವಣೆ: ಭರದಿಂದ ಸಾಗಿದ ಮತದಾನ: ಮಾ.2ಕ್ಕೆ ಫಲಿತಾಂಶ

Latest Videos
Follow Us:
Download App:
  • android
  • ios