ಕೊರೆವ ಚಳಿಗೆ ಉತ್ತರ ಭಾರತ ಗಡಗಡ : 100 ವಿಮಾನಗಳ ಸಂಚಾರ ವ್ಯತ್ಯಯ
ದೆಹಲಿ ಸೇರಿದಂತೆ ಉತ್ತರ ಭಾರತದ ಅನೇಕ ರಾಜ್ಯಗಳು ಈ ಬಾರಿಯ ಚಳಿಗೆ ತತ್ತರಿಸಿ ಹೋಗಿದ್ದು, ಅಲ್ಲಲ್ಲಿ ತಾಪಮಾನ ತೀವ್ರ ಕುಸಿತಗೊಂಡಿದೆಯಲ್ಲದೇ ದಟ್ಟ ಮಂಜಿನಿಂದ ಗೋಚರತೆಯ ಪ್ರಮಾಣ ಕುಸಿಯುತ್ತಿದೆ.
ನವದೆಹಲಿ: ದೆಹಲಿ ಸೇರಿದಂತೆ ಉತ್ತರ ಭಾರತದ ಅನೇಕ ರಾಜ್ಯಗಳು ಈ ಬಾರಿಯ ಚಳಿಗೆ ತತ್ತರಿಸಿ ಹೋಗಿದ್ದು, ಅಲ್ಲಲ್ಲಿ ತಾಪಮಾನ ತೀವ್ರ ಕುಸಿತಗೊಂಡಿದೆಯಲ್ಲದೇ ದಟ್ಟ ಮಂಜಿನಿಂದ ಗೋಚರತೆಯ ಪ್ರಮಾಣ ಕುಸಿಯುತ್ತಿದೆ.
ಭಾನುವಾರ ಮುಂಜಾನೆ ದೆಹಲಿಯಲ್ಲಿ ಕೇವಲ 3.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಈ ಬಾರಿಯ ಚಳಿಗಾಲದಲ್ಲೇ ಅತೀ ಕನಿಷ್ಠ ತಾಪಮಾನವಾಗಿದೆ. ಕಾಶ್ಮೀರದಲ್ಲಿ ಮೈನಸ್ 4.2 ಡಿಗ್ರಿ, ರಾಜಸ್ಥಾನದಲ್ಲಿ 3 ಡಿಗ್ರಿಗೆ ಉಷ್ಣಾಂಶ ಕುಸಿದಿದೆ. ಹೀಗಾಗಿ ದಿಲ್ಲಿ ಹಾಗೂ ಉತ್ತರ ಭಾರತದ 100 ವಿಮಾನಗಳ ಸಂಚಾರ ವಿಳಂಬವಾಗಿದ್ದು, 3-4 ತಾಸು ತಡವಾಗಿ ಸಂಚರಿಸಿವೆ. ರೈಲು-ರಸ್ತೆ ಸಂಚಾರದಲ್ಲೂ ವ್ಯತ್ಯಾಯವಾಗಿದೆ.
ವಾಹನ ಸವಾರರೇ ಎಚ್ಚರ: ಚಳಿಗಾಲದಲ್ಲೇ ರಸ್ತೆ ಅಪಘಾತ ಹೆಚ್ಚು..!
ಈ ನಡುವೆ, ಚಳಿಗಾಲದ ರಜೆ ಬಳಿಕ ದೆಹಲಿಯಲ್ಲಿ ಶಾಲೆಗಳು ಸೋಮವಾರದಿಂದ ಪುನರಾರಂಭ ಆಗುತ್ತಿದ್ದರೂ, ಚಳಿ ಕಾರಣ ಬೆಳಗ್ಗೆ 9 ಗಂಟೆ ನಂತರವೇ ಶಾಲೆ ಆರಂಭಿಸಬೇಕು. ಅದಕ್ಕೂ ಮುನ್ನ ಆರಂಭಿಸ ಕೂಡದು. ಸಂಜೆ 5 ಗಂಟೆಯೊಳಗೆ ತರಗತಿ ಮುಗಿಸಬೇಕು ಎಂದು ಸೂಚಿಸಲಾಗಿದೆ.
ಕಾಶ್ಮೀರದಲ್ಲೂ ಕೊರೆವ ಚಳಿ:
ಜಮ್ಮು- ಕಾಶ್ಮೀರದಲ್ಲೂ ತಾಪಮಾನ ಪಾತಾಳಕ್ಕೆ ಕುಸಿದಿದ್ದು, ಶ್ರೀನಗರದಲ್ಲಿ ಶನಿವಾರ ರಾತ್ರಿ ಕನಿಷ್ಠ ತಾಪಮಾನ ಮೈನಸ್ 4.2 ಡಿಗ್ರಿ ದಾಖಲಾಗಿದೆ.
ರಾಜಸ್ಥಾನದಲ್ಲೂ ಶೀತ ಅಲೆ:
ರಾಜಸ್ಥಾನದ ಪಿಲಾನಿಯಲ್ಲಿ 3 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದ್ದು ಇದು ರಾಜ್ಯದಲ್ಲೇ ಅತ್ಯಂತ ಶೀತ ಪ್ರದೇಶವಾಗಿದೆ.
ಡೀಸೆಲ್ ವಾಹನ ನಿಷೇಧ
ನವದೆಹಲಿ: ದೆಹಲಿಯ ವಾಯುಗುಣ ಮಟ್ಟವು ಕೊರೆವ ಚಳಿ ಕಾರಣ ಮತ್ತೆ ಕುಸಿಯುತ್ತಿದ್ದು ನಗರದಲ್ಲಿ ವಾಯುಗುಣಮಟ್ಟವು ಭಾನುವಾರ ಮುಂಜಾನೆ 10 ಮತ್ತು 11 ಗಂಟೆಗೆ ಕ್ರಮವಾಗಿ 457 ಮತ್ತು 458 ದಾಖಲಾಗಿದೆ. ಇದು 'ಕಳಪೆ' ವಾಯುಗುಣ ಮಟ್ಟ. ಹೀಗಾಗಿ ಕೇಂದ್ರ ಸರ್ಕಾರವು ಎಲ್ಲ ಬಿಎಸ್-3 ಪೆಟ್ರೋಲ್ ಚಾಲಿತ ಹಾಗೂ ಬಿಎಸ್ ಬಿಎಸ್-4 ಡೀಸೆಲ್ ಚಾಲಿತ 4 ಚಕ್ರಗಳ ವಾಹನ ಸಂಚಾರವನ್ನು ನಿಷೇಧಿಸಿದೆ.
ಉತ್ತರದಲ್ಲಿ ತೀವ್ರ ಚಳಿ: ಕೆಲವೆಡೆ ಶೂನ್ಯ ತಾಪಮಾನ, ಜಮ್ಮುನಲ್ಲಿ 2.2 ಡಿಗ್ರಿ