ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಯಲು ಮೈಸೂರಿನ ಕನ್ನಡಿ ತಂತ್ರದಂತೆ, ಅಸ್ಸಾಂನ ಟಿನ್ಸುಕಿಯಾ ಪುರಸಭೆಯು 'ಹಾಲ್‌ ಆಫ್‌ ಶೇಮ್‌' ಅಭಿಯಾನ ಆರಂಭಿಸಿದೆ. ಈ ಅಭಿಯಾನದಡಿ, ನಿಯಮ ಉಲ್ಲಂಘಿಸುವವರ ದೃಶ್ಯವನ್ನು ಸಿಸಿಟಿವಿಯಲ್ಲಿ ಸೆರೆಹಿಡಿದು, ಬೃಹತ್ ಎಲ್‌ಇಡಿ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

-ಮೈಸೂರಿನಲ್ಲಿ ಕನ್ನಡಿ ಅಳವಡಿಸಿದಂತೆ ಅಸ್ಸಾಂನಲ್ಲೂ ತಂತ್ರ

ಗುವಾಹಟಿ (ಜು.13): ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಯಲು ಮೈಸೂರಿನಲ್ಲಿ ಕನ್ನಡಿ ಅಳವಡಿಸುವ ವಿನೂತನ ಪ್ರಯತ್ನ ಮಾಡಲಾಗಿತ್ತು. ಇದೀಗ ಅಸ್ಸಾಂನಲ್ಲೂ ಇಂಥದ್ದೇ ತಂತ್ರದ ಮೊರೆ ಹೋಗಲಾಗಿದೆ 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾಲ್ ಆಫ್ ಶೇಮ್ ಅಭಿಯಾನ.

ಅಸ್ಸಾಂನ ಟಿನ್ಸುಕಿಯಾ ಪುರಸಭೆಯು ‘ಹಾಲ್‌ ಆಫ್‌ ಶೇಮ್‌’ ಎಂಬ ವಿಶಿಷ್ಟ ಅಭಿಯಾನವನ್ನು ಆರಂಭಿಸಿದೆ. ಇದರ ಮೂಲಕ, ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟೀವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಯಾರಾದರೂ ರಸ್ತೆ ಬದಿ ಅಥವಾ ಇತರ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿದರೆ, ಕಸ ಚೆಲ್ಲಿದರೆ ಆ ದೃಶ್ಯಗಳನ್ನು ಸಿಸಿಟೀವಿ ಸೆರೆಹಿಡಿಯುತ್ತದೆ. ನಂತರ ಅದನ್ನು ಬೀದಿಯಲ್ಲಿ ಅಳವಡಿಸಿದ ಬೃಹತ್‌ ಎಲ್‌ಇಡಿ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಪರದೆ ಮೇಲೆ ಅನಾವರಣವಾಗುವ ಭಯಕ್ಕಾದರೂ ಜನ ಇಂಥ ಕೆಲಸಗಳನ್ನು ಬಿಡಬಹುದು ಎಂಬುದು ಆಡಳಿತದ ಚಿಂತನೆ.

ಆದರೆ ಈ ಕ್ರಮಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರ್ವಜನಿಕ ನಿಯಮಗಳನ್ನು ಉಲ್ಲಂಘಿಸುವವರಿಗೆ ಸೂಕ್ತ ಶಿಕ್ಷೆ ವಿಧಿಸುವ ಬದಲು ಈ ರೀತಿ ಮಾನ ಕಳೆಯುವುದು ಸರಿಯಲ್ಲ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.