ಆನೆಗೆ ಕಿರುಕುಳ ನೀಡಿದ ಟಿಕ್‌ಟಾಕ್‌ ಸ್ಟಾರ್‌ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶ ಆರೋಪಿ ವಿರುದ್ಧ  ಕ್ರಮಕ್ಕೆ ನೆಟ್ಟಿಗರ ಆಗ್ರಹ

ಶ್ರೀಲಂಕಾ(ಫೆ.5): ಕೆಲವು ಟಿಕ್‌ಟಾಕ್‌ ಸ್ಟಾರ್‌ಗಳು ತಮ್ಮ ವಿಡಿಯೋಗೆ ಅತೀ ಹೆಚ್ಚು ಲೈಕ್‌ ಪಡೆಯಲು ಹಾಗೂ ಪ್ರಚಾರ ಗಿಟ್ಟಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಈಗ ನಾವು ಹೇಳಲು ಹೊರಟಿರುವುದು ಕೂಡ ಅಂತಹ ಟಿಕ್‌ಟಾಕ್‌ ಹುಚ್ಚಾಟದ ಕತೆ. ಈ ವಿಡಿಯೋ ಶ್ರೀಲಂಕಾದ್ದಾಗಿದ್ದು, ವಿಡಿಯೋ ನೋಡಿದ ಜನ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಟಿಕ್‌ಟಾಕರ್ ಒಬ್ಬ ರಸ್ತೆಯಲ್ಲಿ ಬರುತ್ತಿದ್ದ ಆನೆಯ ಮೇಲೆ ದೌರ್ಜನ್ಯ ಮಾಡುತ್ತಿರುವ ವಿಡಿಯೋ ಇದಾಗಿದೆ.

ಇದೀಗ ವೈರಲ್ ಆಗಿರುವ ವಿಡಿಯೋವನ್ನು ಪೂರ್ಣಾ ಸೆನೆವಿರತ್ನ (Poorna Seneviratne) ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರ. ಈ ವಿಡಿಯೋವನ್ನು ಮೂಲತಃ ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಕಿರು ವೀಡಿಯೊದಲ್ಲಿ, @shashikagimhandha ಎಂಬ ಹೆಸರಿನ ಖಾತೆ ಹೊಂದಿರುವ ಟಿಕ್‌ಟಾಕ್‌ ಬಳಕೆದಾರ ತಮ್ಮ ಕಾರಿನ ಮೂಲಕ ಕಾಡಾನೆಯನ್ನು ಬೆದರಿಸುತ್ತಿರುವ ದೃಶ್ಯ ಕಾಣಬಹುದು. 

Scroll to load tweet…

ರಾತ್ರಿ ವೇಳೆ ಚಿತ್ರೀಕರಣಗೊಂಡ ದೃಶ್ಯ ಇದಾಗಿದೆ. ಕಾಡಿನ ಮಧ್ಯೆ ಇರುವ ರಸ್ತೆಯಲ್ಲಿ ಈತ ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಈ ವೇಳೆ ಆನೆಯೊಂದು ಎದುರಾಗುತ್ತದೆ. ರಸ್ತೆಯ ಬದಿ ನಿಂತಿರುವ ಆನೆಯ ಮುಂದೆ ಮುಂದೆ ಕಾರನ್ನು ಈತ ತೆಗೆದುಕೊಂಡು ಹೋಗುತ್ತಿದ್ದು, ಇದನ್ನು ನೋಡಿ ಭಯಗೊಂಡ ಆನೆ ಹಿಮ್ಮುಖವಾಗಿ ಹಿಂದೆ ಹಿಂದೆ ಚಲಿಸುತ್ತಿದೆ. ಆದರೂ ಸುಮ್ಮನಿರದ ಆತ ಆನೆ ಹಿಮ್ಮುಖವಾಗಿ ಚಲಿಸಿ ಇನ್ನೊಂದು ಕಡೆ ರಸ್ತೆಯಿಂದ ಕೆಳೆಗೆ ಕಾಡಿನೊಳಗೆ ಇಳಿಯುವವರೆಗೂ ಆತ ತನ್ನ ವಾಹನವನ್ನು ಅದರ ಮುಂದೆ ಮುಂದೆಯೇ ತೆಗೆದುಕೊಂಡು ಹೋಗುತ್ತಾನೆ. ಈ ವೇಳೆ ಆನೆ ಗಾಬರಿಯಾಗುವುದರ ಜೊತೆ ಘೀಳಿಟ್ಟು ಹಿಂದೆ ಹಿಂದೆ ಸಾಗುತ್ತದೆ. ಈ ದೃಶ್ಯವನ್ನು ಆತ ರೆಕಾರ್ಡ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನಷ್ಟಕ್ಕೆ ತಾನಿದ್ದ ಮುಗ್ಧ ಆನೆಯನ್ನು ಕೆಣಕಿ ಕಿರುಕುಳ ನೀಡಿದ್ದಕ್ಕೆ ಸಿಟ್ಟಿಗೆದ್ದಿದ್ದಾರೆ.

ಆನೆ ಕೆಚ್ಚಲಿನಿಂದ ಹಾಲು ಕುಡಿಯುವ ಮಗು... ವಿಡಿಯೋ ವೈರಲ್‌

ಇದು ಸಂಪೂರ್ಣವಾಗಿ ಅಸಹನೀಯ ಮತ್ತು ತಪ್ಪು ಎಂದು ತಿಳಿದುಕೊಳ್ಳಲು ನಿಮಗೆ ಒಂದು ಚೂರಾದರು ಮಿದುಳು ಇಲ್ಲದೇ ಹೋದರೆ ನೀವು ಸಂಪೂರ್ಣವಾಗಿ ನಾಶವಾಗಬೇಕು. ಮೂರ್ಖ ಸಾಮಾಜಿಕ ಮಾಧ್ಯಮಗಳ ವೀಕ್ಷಣೆಗಳಿಗಾಗಿ ವನ್ಯಜೀವಿಗಳಿಗೆ ಅಪಾಯವನ್ನುಂಟುಮಾಡಬೇಡಿ ಮತ್ತು ತೊಂದರೆಗೊಳಿಸಬೇಡಿ. ಇದು ಖುಷಿ ನೀಡುವಂತಹ ವಿಚಾರವಲ್ಲ. ಈ ವಿಡಿಯೋ ಮಾಡಿದವನನ್ನು ಪತ್ತೆ ಮಾಡಬೇಕು ಹಾಗೂ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಡಿಯೋ ನೋಡಿದವರು ಹೇಳಿದ್ದಾರೆ.

ಇದು ನನ್ನನ್ನು ಕೋಪಗೊಳ್ಳುವಂತೆ ಮಾಡಿತು. ಕೇವಲ ಲೈಕ್ಸ್‌ಗಾಗಿ ವನ್ಯಜೀವಿಗಳಿಗೆ ಕಿರುಕುಳ ನೀಡಿದ್ದು ಸರಿಯಲ್ಲ. ಇದೊಂದು ದುಃಖದ ವಿಷಯ ಇಂತಹ ಭೀಕರ ಕೃತ್ಯವನ್ನು ಮಾಡುವ ಜನರೂ ಇದ್ದಾರೆಯೇ ಎಂದು ನೋಡುಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಆನೆಯ ಕೋಪಕ್ಕೆ ಆಹುತಿಯಾದ ಕಾರು... ಭಯಾನಕ ವಿಡಿಯೋ

ಈ ವಿಡಿಯೋ ಈಗ ಶ್ರೀಲಂಕಾದ (Sri Lanka) ವನ್ಯಜೀವಿ (Wildlife) ಮತ್ತು ಪ್ರಕೃತಿ ಸಂರಕ್ಷಣಾ ಸೊಸೈಟಿಯ ಗಮನವನ್ನೂ ಸೆಳೆದಿದೆ. ಅಲ್ಲದೇ ಆನೆಗೆ ಕಿರುಕುಳ ನೀಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ. ಜೊತೆಗೆ ಆತನ ಇನ್ಸ್ಟಾ ಖಾತೆಯನ್ನು ಡಿಲಿಟ್ ಮಾಡಲು ಹಾಗೂ ಕ್ರಮ ಕೈಗೊಳ್ಳಲು ಘಟನೆಯ ಎಲ್ಲಾ ವಿವರಗಳನ್ನು ವನ್ಯಜೀವಿ ಸಂರಕ್ಷಣಾ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.