Asianet Suvarna News Asianet Suvarna News

ಆನೆಯ ಕೋಪಕ್ಕೆ ಆಹುತಿಯಾದ ಕಾರು... ಭಯಾನಕ ವಿಡಿಯೋ

  • ನಡುರಸ್ತೆಯಲ್ಲಿ ಕಾರಿನ ಮೇಲೆ ದಾಳಿ ಮಾಡಿದ ಆನೆ
  • ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾದ ಕುಟುಂಬ
  • ದಕ್ಷಿಣ ಆಫ್ರಿಕಾದಲ್ಲಿ ಘಟನೆ
Angry elephant attacked over car with 4 people at South Africa akb
Author
Bangalore, First Published Jan 18, 2022, 4:14 PM IST

ದಕ್ಷಿಣ ಆಫ್ರಿಕಾ(ಜ. 18): ಕೋಪಗೊಂಡ ಆನೆಯೊಂದು ನಾಲ್ಕು ಜನರಿದ್ದ ಕಾರಿನ ಮೇಲೆ ದಾಳಿ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಭಯ ಹುಟ್ಟಿಸುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಘಟನೆಯ ವಿಡಿಯೋ ಇದಾಗಿದೆ. ಎಸ್‌ಯುವಿ(SUV-Sport utility vehicle) ಕಾರೊಂದನ್ನು ಸಿಟ್ಟಿಗೆದ್ದ ಆನೆ ಮಗುಚಿ ಮಗುಚಿ ಹಾಕುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. 

ದಕ್ಷಿಣ ಆಫ್ರಿಕಾದ (South Africa) ಐಸಿಮಂಗಲಿಸೊ (iSimangaliso) ವೆಟ್‌ಲ್ಯಾಂಡ್ ಪಾರ್ಕ್‌ನ ವಿಡಿಯೋ ಇದಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಲ್ಕು ಜನರ ಕುಟುಂಬ ಎಸ್‌ಯುವಿ ಕಾರಿನೊಳಗೆ ಇರುವಾಗಲೇ ಕೋಪಗೊಂಡ ಆನೆಯು ಅದರ ಮೇಲೆ ದಾಳಿ ಮಾಡಿದ್ದು, ಕಾರನ್ನು ಉಲ್ಟಾ ಮಗುಚಿ ಹಾಕಿದೆ. ಈ ದಾಳಿಗೊಳಗಾದ ಕಾರಿನ ಹಿಂದೆಯೇ ನಿಂತಿದ್ದ ಮತ್ತೊಂದು ಕಾರಿನಲ್ಲಿದ್ದವರು ಆನೆಯನ್ನು ವಿಚಲಿತಗೊಳಿಸಲು ಭಯಭೀತರಾಗಿ ಹಾರ್ನ್ ಮಾಡುತ್ತಾ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಜನವರಿ 16 ರಂದು ಜುಲುಲ್ಯಾಂಡ್ ಅಬ್ಸರ್ವರ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ  ಈ ವೀಡಿಯೊ ಅಪ್‌ಲೋಡ್ ಆಗಿದೆ ಮತ್ತು 7,000 ಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

 

ವೈರಲ್ ಆಗಿರುವ ವಿಡಿಯೋದಲ್ಲಿ ಆನೆಯೊಂದು ರಸ್ತೆಯ ಮಧ್ಯದಲ್ಲಿ ತನ್ನ ಸೊಂಡಿಲಿನಿಂದ ಕಾರನ್ನು ತಳ್ಳಿ ಪಲ್ಟಿ ಹೊಡೆಸಿದೆ.  ಈ ಕಾರಿನೊಳಗೆ ತಂದೆ ತಾಯಿ ಮತ್ತುಇಬ್ಬರು 8 ಮತ್ತು 10 ವರ್ಷದ ಮಕ್ಕಳಿದ್ದರು ಎಂದು ತಿಳಿದು ಬಂದಿದೆ.  ಕಾರನ್ನು ಪಲ್ಟಿ ಮಾಡಿದ ನಂತರವೂ ಆನೆ ತೃಪ್ತಿಯಾದಂತೆ ಕಾಣಲಿಲ್ಲ.  ಅದು ದಾರಿಯಲ್ಲಿದ್ದ ಕಾರನ್ನು ರಸ್ತೆಯಾಚೆಗೆ ತಳ್ಳುತ್ತಲೇ ಇತ್ತು. ಸ್ವಲ್ಪ ಹೊತ್ತಿನ ನಂತರ ಆನೆ ಸ್ಥಳದಿಂದ ತೆರಳಿತು. ಕಾರಿನಲ್ಲಿದ್ದವರನ್ನು ರಕ್ಷಿಸಲು ಕೆಲವು ರೇಂಜರ್‌ಗಳು ಅಲ್ಲಿಗೆ ಬಂದರು ಎಂದು ಡೈಲಿ ಮೇಲ್ ವರದಿ ಮಾಡಿದೆ. 

ಕಾಲುವೆಗಿಳಿದ ಆನೆಗಳು... ಮೇಲೆ ಬರಲಾಗದೇ ಗಜಪಡೆಯ ಪಾಡು... ವಿಡಿಯೋ ವೈರಲ್

ಆನೆ ದಾಳಿಗೊಳಗಾದ ಕುಟುಂಬದವರು ಸಂಪೂರ್ಣವಾಗಿ ಭಯಭೀತರಾಗಿದ್ದರು ಮತ್ತು ತೀವ್ರ ಆಘಾತಕ್ಕೊಳಗಾಗಿದ್ದರು. ಅಲ್ಲದೇ ಆನೆಯು ಹಿಂತಿರುಗಿ ಮತ್ತೆ ದಾಳಿ ಮಾಡುತ್ತದೆ ಎಂಬ ಭಯದಲ್ಲಿದ್ದರು. ಆನೆಯು ತನ್ನ ದಂತದಿಂದ ಕಾರಿನ ಬದಿಯನ್ನು ಚುಚ್ಚದಿರುವುದು ಒಳಗಿದ್ದವರ ಅದೃಷ್ಟವಾಗಿದೆ ಎಂದು ಈ ಕುಟುಂಬವನ್ನು ರಕ್ಷಿಸಿದ ರೇಂಜರ್ ಹೇಳಿದ್ದಾರೆ. 

ತಾಯಿ ಆನೆಯೊಂದು ಮರಿಯಾನೆಗೆ ತಿನಿಸುವ ಸುಂದರ ವಿಡಿಯೋ...

Follow Us:
Download App:
  • android
  • ios