Asianet Suvarna News Asianet Suvarna News

ಬೈಕರ್ಸ್‌ಗೆ ಧುತ್ತನೇ ಎದುರಾದ ಹುಲಿರಾಯ... ವೈರಲ್ ವಿಡಿಯೋ

ರಸ್ತೆಯಲ್ಲಿ ಸಾಗುತ್ತಿದ್ದಾಗ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ಇದನ್ನು ನೋಡಿ ಬೈಕರ್‌ಗಳು ಇತರ ವಾಹನ ಸವಾರರು ಕೆಲ ಕಾಲ ದಂಗಾಗಿದ್ದಾರೆ. ಆದರೆ ಹುಲಿ ಇವರಾರ ಮೇಲೂ ದಾಳಿ ನಡೆಸಲು ಮುಂದಾಗದೆ ರಾಜ ಗಾಂಭೀರ್ಯದಿಂದ ಮುಂದೆ ಹೆಜ್ಜೆ ಹಾಕಿದೆ. 

tiger appears on road to bikers, what happend next watch viral video akb
Author
First Published Dec 23, 2022, 12:33 PM IST

ರಸ್ತೆಯಲ್ಲಿ ಸಾಗುತ್ತಿದ್ದಾಗ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ಇದನ್ನು ನೋಡಿ ಬೈಕರ್‌ಗಳು ಇತರ ವಾಹನ ಸವಾರರು ಕೆಲ ಕಾಲ ದಂಗಾಗಿದ್ದಾರೆ. ಆದರೆ ಹುಲಿ ಇವರಾರ ಮೇಲೂ ದಾಳಿ ನಡೆಸಲು ಮುಂದಾಗದೆ ರಾಜ ಗಾಂಭೀರ್ಯದಿಂದ ಮುಂದೆ ಹೆಜ್ಜೆ ಹಾಕಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ ಈ ಅಪರೂಪದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಕಾರು ಚಾಲಕರೊಬ್ಬರು ಕಾರಿನ ಒಳಭಾಗದಿಂದ ಸೆರೆ ಹಿಡಿದಿದ್ದಾರೆ. 

ವಿಡಿಯೋದಲ್ಲಿ ಕಾಣಿಸುವಂತೆ ಹುಲಿಯೊಂದು ರಸ್ತೆ (Road crossing) ದಾಟುತ್ತಿದ್ದು, ಈ ವೇಳೆ ಬೈಕ್ ಸವಾರರು (Bikers) ಅದೇ ರಸ್ತೆಯಲ್ಲಿ ಬೈಕ್ ಚಲಾಯಿಸಿಕೊಂಡು ಬರುತ್ತಿರುತ್ತಾರೆ. ಇದನ್ನು ನೋಡಿದ ಹುಲಿ ರಸ್ತೆ ದಾಟುವುದನ್ನು ಬಿಟ್ಟು ಇವರತ್ತ ಗಾಂಭೀರ್ಯದ ನೋಟ ಬೀರಿ ನಿಧಾನಕ್ಕೆ ಇವರ ಬಳಿ ಬರುತ್ತದೆ. ಇದನ್ನು ನೋಡಿ ಬೈಕ್ ಸವಾರರು ತಮ್ಮ ಬೈಕ್‌ನ್ನು ಹಿಂದಕ್ಕೆ ಹಿಂದಕ್ಕೆ ತರುತ್ತಾರೆ. ಆದರೆ ಹುಲಿ (Tiger) ಮಾತ್ರ ಇವರ ಬಳಿಯೇ ಬರುತ್ತಿದ್ದು, ಈ ವೇಳೆ ಬೈಕ್‌ನಲ್ಲಿದ್ದ ಒಬ್ಬ ಅರೇ ಗುರೂಜೀ ಹೋಗಲು ಬಿಡು ಎಂದು ಹಿಂದಿಯಲ್ಲಿ ಹೇಳುತ್ತಾನೆ. ನಂತರ ಸೆಕೆಂಡುಗಳ ಕಾಲ ನೋಡಿದ ಹುಲಿ ಸೀದಾ ರಸ್ತೆ ಪಕ್ಕದ ಕಾಡಿನತ್ತ ಹೆಜ್ಜೆ ಹಾಕುತ್ತದೆ. ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿರುವ ಸುಶಾಂತ್ ನಂದಾ (Sushanth nanda) ಅವರು, ಬೈಕ್‌ನಲ್ಲಿ ಬ್ಯಾಕ್ ಗೇರ್ ಇರುವುದಿಲ್ಲ. ವಾಹನ ಚಾಲನೆ ಮಾಡುವಾಗ ನಿಮ್ಮ ಸಾಮಾನ್ಯ ಜ್ಞಾನವನ್ನು ಬಳಸಿಕೊಳ್ಳಿ, ವನ್ಯಜೀವಿ ಆವಾಸ ಸ್ಥಾನಗಳ ನಡುವೆ ಸಂಚರಿಸುವಾಗ ನಿಧಾನವಾಗಿ ಸಂಚರಿಸಿ ಎಂದು ಬರೆದುಕೊಂಡಿದ್ದಾರೆ.

ಜೊಯಿಡಾ : ಆತಂಕ ಸೃಷ್ಟಿಸಿದ್ದ ಹುಲಿ ಕೊನೆಗೂ ಬೋನಿಗೆ ಸೆರೆ 

ಹುಲಿಗಳ ಭೀಕರ ಕಾದಾಟ

ಕೆಲ ದಿನಗಳ ಹಿಂದೆ ಹುಲಿಗಳೆರಡು ಭೀಕರವಾಗಿ ಕಾದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. one_earth__one_life ಹೆಸರಿನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, ಸಾವಿರಾರು ಜನ ವೀಕ್ಷಿಸಿದ್ದರು. ಎರಡು ಹುಲಿಗಳ ಭಯಾನಕ ಕದನ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿತ್ತು. ಆದರೆ ಈ ಘಟನೆ ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಬಗ್ಗೆ ವಿಡಿಯೋದಲ್ಲಿ ಉಲ್ಲೇಖವಿಲ್ಲ. ಶ್ವಾನಗಳ, ಕಾದಾಟವನ್ನು ನೋಡಿರಬಹುದು ಆದರೆ ಎರಡು ಹುಲಿಗಳು ಕಾದಾಡುವುದನ್ನು(Tiger Fighting) ನೋಡಲು ಸಿಗುವುದು ಬಲು ಅಪರೂಪ. ಆದರೂ ಇಲ್ಲೊಂದು ಕಡೆ ಎರಡು ವ್ಯಾಘ್ರಗಳು ಭೀಕರವಾಗಿ ಕಾದಾಡುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆ ಆಗಿವೆ. ಹೇಗೆ ಹುಲಿಗಳೆರಡು ಒಂದರ ಮೇಲೆ ಒಂದು ಮುಗಿ ಬೀಳುತ್ತಾ ಭಯಾನಕವಾಗಿ ಕಾದಾಡುತ್ತಿವೆ ಎಂಬುದನ್ನು ಈ ವಿಡಿಯೋ ತೋರಿಸುತ್ತಿದೆ. ಹಲವು ಸೆಕೆಂಡುಗಳವರೆಗೆ ಈ ಹುಲಿಗಳು ಭೀಕರವಾಗಿ ಕಾದಾಡಿ ನಂತರ ದೂರ ಸರಿದು ಹೋಗಿವೆ. ಯಾರೋ ಪ್ರವಾಸಿಗರು ಸಫಾರಿ ಜೀಪ್‌ನಲ್ಲಿ(Saffari jeep ಕುಳಿತುಕೊಂಡು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಕಾಮೆಂಟ್ ಮಾಡಿದ್ದು, ಇದು ತುಂಬಾ ಅಪರೂಪದ ದೃಶ್ಯ ಹಿಂದೆಂದೂ ಇಂತಹ ದೃಶ್ಯ ನೋಡಿರಲಿಲ್ಲ ಎಂದು  ಕಾಮೆಂಟ್ ಮಾಡಿದ್ದಾರೆ. ಅವುಗಳ ಘರ್ಜನೆ ನನ್ನ ಮೈ ನವಿರೇಳುವಂತೆ ಮಾಡಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  

ಮೊಬೈಲ್‌ನಲ್ಲಿ ಮುಳುಗಿದ ಮೇಲೆ ಸಿಂಹ ಬಂದರೂ ತಿಳಿಯದೇ...? ಇಲ್ಲೇನಾಯ್ತು ನೋಡಿ

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಷ್ಟು ವೀಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಕೆಲ ದಿನಗಳ ಹಿಂದೆ ತಬ್ಬಲಿ ಹುಲಿಮರಿಗೆ ಚಿಂಪಾಂಜಿಯೊಂದು ಆರೈಕೆ ಮಾಡುತ್ತಿರುವ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು.  ಅಮೆರಿಕಾದ ದಕ್ಷಿಣ ಕೆರೊಲಿನಾದ ಮಿರ್ಟಲ್ ಬೀಚ್ ಸಫಾರಿಯಲ್ಲಿ ಕಂಡು ಬಂದ ದೃಶ್ಯ ಇದಾಗಿದ್ದು, ಚಿಂಪಾಜಿಯೊಂದು ತನ್ನದಲ್ಲದ ಹುಲಿಯ ಮರಿಗಳನ್ನು ತನ್ನ ಮಕ್ಕಳಂತೆ ಆರೈಕೆ ಮಾಡುತ್ತಿದೆ. ತಾಯಿ ತೊರೆದ ಮುದ್ದಾದ ಮರಿಗಳಿಗೆ ಈ ಚಿಂಪಾಜಿ ಬಾಟಲ್ ಹಾಲು ನೀಡುತ್ತ ಮಡಿಲಲ್ಲಿ ಮಲಗಿಸಿಕೊಂಡು ಎತ್ತಿ ಆಡಿಸುತ್ತಾ ಮುದ್ದಾಡುತ್ತಿದೆ. ಹುಲಿ ಮರಿಗಳು ಕೂಡ ಈ ಚಿಂಪಾಜಿಯಲ್ಲೇ ತಮ್ಮ ತಾಯಿಯನ್ನು ಕಾಣುತ್ತಿವೆ. 

Follow Us:
Download App:
  • android
  • ios