Asianet Suvarna News Asianet Suvarna News

Throwback 2023 ಟ್ವಿಟರ್ ಲೋಗೋ ಬದಲಾವಣೆ, ಪಾಕಿಸ್ತಾನಕ್ಕೆ ಸಾಲ ಘೋಷಣೆ; ಅಚ್ಚರಿ ನೀಡಿದ ಜುಲೈ!

ಈ ವರ್ಷದ ಪ್ರತಿ ತಿಂಗಳ ಒಂದಲ್ಲಾ ಒಂದು ಮಹತ್ವದ ಘಟನೆಗಳು ಸಂಭವಿಸಿದೆ. 2023ರ ಸಾಲಿನ ಜುಲೈ ತಿಂಗಳಲ್ಲಿ ದೇಶ ವಿದೇಶಗಳಲ್ಲಿ ನಡೆದ ಮಹತ್ವದ ಘಟನೆ ಏನು? 

Throwback 2023 Twitter logo change to IMF announces loan to Pakistan Highlights of July ckm
Author
First Published Dec 12, 2023, 7:02 PM IST

ಬೆಂಗಳೂರು(ಡಿ.12) ಹೊಸ ವರ್ಷವನ್ನು ಬರಮಾಡಿಕೊಳ್ಳಲು ಎಲ್ಲರು ಕಾತರರಾಗಿದ್ದಾರೆ. 2023ಕ್ಕೆ ಗುಡ್ ಬೈ ಹೇಳಲು ಸಜ್ಜಾಗಿರುವ ಜನ, ಈ ವರ್ಷದ ಪ್ರಮುಖ ಘಟನೆಗಳನ್ನು ಮೆಲುಕು ಹಾಕುತ್ತಿದ್ದಾರೆ. ಈ ಪೈಕಿ ಟ್ವಿಟರ್ ಲೋಗೋ ಬದಲಾವಣೆ, ಪ್ರಧಾನಿ ಮೋದಿ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಎಸ್‌ಸಿಒ ಸಭೆ, ಪಾಕಿಸ್ತಾನಕ್ಕೆ ಐಎಂಎಫ್ ಸಾಲ ಸೇರಿದಂತೆ ಜುಲೈ ತಿಂಗಳಲ್ಲಿ ಹಲವು ಮಹತ್ವದ ಘಟನೆಗಳು ನಡೆದಿದೆ.

ಜೂನ್ ಅಂತ್ಯದಲ್ಲಿ ಭುಗಿಲೆದ್ದ ಫ್ರಾನ್ಸ್ ದಂಗೆ ಜುಲೈ ತಿಂಗಳಲ್ಲಿ ತೀವ್ರಗೊಂಡಿತ್ತು. ಫ್ರಾನ್ಸ್‌ನಲ್ಲಿ ಪೊಲೀಸರ ಗುಂಡಿಗೆ 17 ವರ್ಷದ ಬಾಲಕ ಬಲಿಯಾಗಿದ್ದನ್ನು ಖಂಡಿಸಿ ದೇಶದ ಹಲವೆಡೆ ಹಿಂಸಾಚಾರ ನಡೆದಿತ್ತು. ನೂರಾರು ವಾಹನಗಳಿಗೆ ಪ್ರತಿಭಟನಾಕಾರರು ಬೆಂಕಿ ಹೆಚ್ಚಿದ್ದಾರೆ. ಈ ವೇಳೆ 200 ಪೊಲೀಸರಿಗೆ ಗಾಯಗಳಾಗಿವೆ. 850 ಕ್ಕೂ ಹೆಚ್ಚು ದಂಗೆಕೋರರನ್ನು ಬಂಧಿಸಲಾಗಿತ್ತು. ಈ ದಂಗೆ ಸಂಪೂರ್ಣ ಫ್ರಾನ್ಸ್‌ಗೆ ಹಬ್ಬಿತ್ತು.

ಸಾಧನೆ-ವಿವಾದ, ಈ ವರ್ಷ ಸದ್ದು ಮಾಡಿದ ದಿಗ್ಗಜರ ಸಾಲಿನಲ್ಲಿ ಎಸ್ ಸೋಮನಾಥ್- ಅದಾನಿ ಟಾಪ್!

ಜುಲೈ 4 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶಾಂಘೈ ಕೊಆಪರೇಶನ್ ಆರ್ಗನೈಜೇಶನ್ (SCO) ಸಭೆ ನಡೆದಿತ್ತು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್,ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್,  ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರಿಫ್ ಸೇರಿದಂತೆ ಹಲವರು ಭಾಗಿಯಾಗಿದ್ದರು.  ಅಷ್ಘಾನಿಸ್ತಾನದಲ್ಲಿನ ಪರಿಸ್ಥಿತಿ, ಉಕ್ರೇನ್‌ ಯುದ್ಧ, ಸದಸ್ಯ ರಾಷ್ಟ್ರಗಳ ನಡುವಿನ ಸಂಪರ್ಕ, ವ್ಯಾಪಾರ ವೃದ್ಧಿ, ಪೂರ್ವ ಲಡಾಖ್‌ನಲ್ಲಿ ಚೀನಾದ ಉಪಟಳ ಮುಂತಾದ ವಿಷಯಗಳ ಕುರಿತಾಗಿ ಚರ್ಚೆ ನಡೆಸಲಾಗಿತ್ತು.  

ಜುಲೈ 19 ರಂದು ಚೀನಾ ಸರ್ಕಾರ ತಮ್ಮ ವಿದೇಶಾಂಗ ಸಚಿವ  ಕ್ವಿನ್‌ ಗಾಂಗ್‌ ನಾಪತ್ತೆಯಾಗಿರುವುದನ್ನು ಖಚಿತಪಡಿಸಿತ್ತು. ಮೂರು ವಾರಗಳ ಬಳಿಕ ಚೀನಾ ಸರ್ಕಾರ ಈ ಮಾಹಿತಿ ಖಚಿತಪಡಿಸಿತ್ತು.  

ಜುಲೈ 13 ರಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮಹತ್ವದ ಘೋಷಣೆ ಮಾಡಿತ್ತು. ಪಾಕಿಸ್ತಾನ ಜನರ ನೆಮ್ಮದಿಗೆ ಕಾರಣವಾಗಿತ್ತು. ತೀವ್ರ ಆರ್ಥಿಕ ಸಂಕಷ್ಟ, ಬೆಲೆ ಏರಿಕೆಯಿಂದ ನಲುಗಿದ್ದ ಪಾಕಿಸ್ತಾನಕ್ಕೆ ಐಎಂಎಫ್‌ ಕೊನೆಗೂ ಬೇಲ್‌ಔಟ್‌ ನೀಡಿತ್ತು. 3 ಬಿಲಿಯನ್ ಡಾಲರ್‌ ಮೊತ್ತದ ಸಾಲದ ನೆರವಿಗೆ ಅನುಮೋದನೆ ನೀಡುವ ಮೂಲಕ ಪಾಕಿಸ್ತಾನ ಹಸಿವಿನಿಂದ ಸಾಯುವುದನ್ನು ತಪ್ಪಿಸಿತ್ತು.  

ಜಲೈ 24 ರಂದು ಉದ್ಯಮಿ ಎಲಾನ್ ಮಸ್ಕ್ ಅಚ್ಚರಿ ನೀಡಿದ್ದರು. ನೀಲಿ ಹಕ್ಕಿಯಿಂದಲೇ ಜನಪ್ರಿಯವಾಗಿದ್ದ ಟ್ವಿಟರ್ ತನ್ನ ಲೋಗೋವನ್ನು ಬದಲಿಸಿತ್ತು. ಎಕ್ಸ್ ಎಂದು ಟ್ವಿಟರ್ ಸಂಪೂರ್ಣ ಬದಲಾಗಿತ್ತು. ಈ ಮೂಲಕ ನೀಲಿ ಹಕ್ಕಿಯನ್ನು ಮಸ್ಕ್ ಹಾರಿಬಿಟ್ಟಿದ್ದರು.

Recap 2023 ಚಂದ್ರನ ಮೇಲೆ ಭಾರತ, ಕಾರು-ಮೊಬೈಲ್ ನಡುವೆ AI ತಂತ್ರಜ್ಞಾನ ಡೀಪ್ ಫೇಕ್ ಆತಂಕ!

ಜುಲೈ 29 ರಂದು ದುಬೈನ ರೈನ್ಬೋ ಶೇಖ್' ಎಂದು ಕರೆಯಲ್ಪಡುವ ಶೇಖ್ ಹಮದ್ ಬಿನ್ ಹಮ್ದಾನ್ ಅಲ್ ನಹ್ಯಾನ್ ಅವರ ಹಮ್ಮರ್ ಕಾರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ದೊಡ್ಡ ಗಾತ್ರದ ಹಮ್ಮರ್ H1, ಸಾಮಾನ್ಯ ಮಾದರಿಯ ಗಾತ್ರಕ್ಕಿಂತ ಮೂರು ಪಟ್ಟು ಹೆಚ್ಚು ಎಂಬುದು ವಿಶೇಷ. Motorious ಪ್ರಕಾರ, ಶೇಖ್‌ನ ಹಮ್ಮರ್ H1 X3 ಪ್ರಭಾವಶಾಲಿ ಆಯಾಮಗಳನ್ನು ಹೊಂದಿದೆ, ಇದು ಸರಿಸುಮಾರು 46 ಅಡಿ ಉದ್ದ, 21.6 ಅಡಿ ಎತ್ತರ ಮತ್ತು 19 ಅಡಿ ಅಗಲವನ್ನು ಹೊಂದಿದೆ. 

ಜುಲೈ ತಿಂಗಳ ಅಂತ್ಯದಲ್ಲಿ ಆಸ್ಟ್ರೇಲಿಯಾದ ಕಡಲತೀರದಲ್ಲಿ ಕೊಚ್ಚಿಹೋದ ನಿಗೂಢ ವಸ್ತುವಿನ ಮೂಲ ಬಹಿರಂಗಗೊಂಡಿತ್ತು. ಈ ನಿಗೂಢ ವಸ್ತು ಭಾರತದ ಚಂದ್ರಯಾನ - 3 ನ ಅವಶೇಷಗಳು ಎಂದು ನೆಟ್ಟಿಗರು ಚರ್ಚೆ ನಡೆಸಿದ್ದರು.   ಇದು ಭಾರತೀಯ ರಾಕೆಟ್‌ವೊಂದರ ಅವಶೇಷ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದರು.
 

Follow Us:
Download App:
  • android
  • ios