ಸಾಧನೆ-ವಿವಾದ, ಈ ವರ್ಷ ಸದ್ದು ಮಾಡಿದ ದಿಗ್ಗಜರ ಸಾಲಿನಲ್ಲಿ ಎಸ್ ಸೋಮನಾಥ್- ಅದಾನಿ ಟಾಪ್!
2023ಕ್ಕೆ ವಿದಾಯ ಹೇಳಿ ಹೊಸ ವರ್ಷ ಬರಮಾಡಿಕೊಳ್ಳಲು ಸಿದ್ಧತೆಗಳು ನಡೆಯುತ್ತಿದೆ. ಈ ವರ್ಷ ಹಲವು ಅಚ್ಚರಿ, ಸಂಭ್ರಮ, ನೋವು ನಲಿವುಗಳನ್ನು ನೀಡಿದೆ. ಹೀಗೆ 2023ರಲ್ಲಿ ಕೆಲ ದಿಗ್ಗಜರು ವಿನಾಕಾರಣ ಸುದ್ದಿಯಾದರೆ, ಕೆಲವರು ತಮ್ಮ ಸಾಧನೆ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು(ಡಿ.12) 2023ಕ್ಕೆ ವಿದಾಯ ಹೇಳುವ ಮುನ್ನ ಈ ವರ್ಷ ಹಲವು ಘಟನೆಗಳು ನಡೆದಿದೆ. ಕೆಲವು ಸ್ಮರಣೀಯವಾಗಿದ್ದರೆ, ಮತ್ತೆ ಕೆಲವು ನೆಪಿಸಿಕೊಳ್ಳಲು ಸಾಧ್ಯವಾಗದ ಘಟನೆಗಳು. ಇದರ ನಡುವೆ ವಿವಾದ, ಸಾಧನೆ, ಸಂಭ್ರಮಕ್ಕೂ ಪಾರವೇ ಇರಲಿಲ್ಲ. ಈ ವರ್ಷದ ಆರಂಭದಲ್ಲೇ ಉದ್ಯಮಿ ಗೌತಮ್ ಅದಾನಿ ಭಾರಿ ಸದ್ದು ಮಾಡಿದ್ದರು. ಅದಾನಿ ಸಮೂಹವು ಷೇರು ಮಾರುಕಟ್ಟೆಯಲ್ಲಿ ಅಕ್ರಮಗಳನ್ನು ಎಸಗುತ್ತಿದೆ ಹಾಗೂ ಲೆಕ್ಕಪತ್ರಗಳಲ್ಲೂ ಅಕ್ರಮ ಎಸಗುತ್ತಿದೆ ಎಂದು ಹಿಂಡನ್‌ಬರ್ಗ್ ಸಂಸ್ಥೆಯು ಈ ವರ್ಷದ ಜನವರಿಯಲ್ಲಿ ವರದಿ ಪ್ರಕಟಿಸಿತ್ತು. ಅದು ತೀವ್ರ ವಿವಾದಕ್ಕೆ ಕಾರಣವಾಗಿ, ಅದಾನಿ ವಿರುದ್ಧ ತನಿಖೆಗೆ ಆಗ್ರಹಿಸಿ ಸುಪ್ರೀಂಕೋರ್ಟ್‌ಗೆ ಹಲವಾರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಸದನದಲ್ಲೂ ಅದಾನಿ ವಿಚಾರ ಈ ವರ್ಷವಿಡೀ ಗದ್ದಲ ಸೃಷ್ಟಿಸಿತ್ತು.
ತಲ್ಲಣ ಸೃಷ್ಟಿಸಿದ ಅಮೇಜಾನ್ ಸಿಇಒ ಆ್ಯಂಡಿ ಜಸ್ಸಿ ನಿರ್ಧಾರ
ಅಮೇಜಾನ್ ಈ ವರ್ಷದ ಆರಂಭದಲ್ಲಿ ಮಹತ್ವದ ನಿರ್ಧಾರ ಘೋಷಿಸಿತ್ತು. ಬರೋಬ್ಬರಿ 10,000 ಉದ್ಯೋಗ ಕಡಿತವನ್ನು ಅಮೆಜಾನ್ ಸಿಇಒ ಆ್ಯಂಡಿ ಜಸ್ಸಿ ಘೋಷಿಸಿದ್ದರು. ಇದರಿಂದ ಪರೋಕ್ಷವಾಗಿ 28,000ಕ್ಕೂ ಹೆಚ್ಚು ನೌಕರರಿಗೆ ಸಂಕಷ್ಟ ಎದುರಾಗಿತ್ತು. ಆ್ಯಂಡಿ ಜಸ್ಸಿ ನಿರ್ಧಾರದ ಬೆನ್ನಲ್ಲೇ ಹಲವು ಕಂಪನಿಗಳು ಉದ್ಯೋಗ ಕಡಿತ ಘೋಷಿಸಿತ್ತು.
Sports Flashback 2023: ರೊನಾಲ್ಡೋನಿಂದ ಜೋಕೋವರೆಗೆ ಜನವರಿಯಲ್ಲಿ ಸದ್ದು ಮಾಡಿದ ಸ್ಪೋರ್ಟ್ಸ್ ಸುದ್ದಿಗಳಿವು..!
ಆ್ಯಪಲ್ ಸಿಇಒ ಕುಕ್ ಭಾರತಕ್ಕೆ ಭೇಟಿ
ಅಮೆರಿಕ ಮೂಲದ ಆ್ಯಪಲ್ ಸಂಸ್ಥೆಯ ಮೊತ್ತಮೊದಲ ಮಳಿಗೆ ಏ.18ರಂದು ಭಾರತದಲ್ಲಿ ಉದ್ಘಾಟನೆಗೊಂಡಿತ್ತು. ಮುಂಬೈ ಹಾಗೂ ದೆಹಲಿ ಮಳಿಗೆ ಉದ್ಘಾಟನೆಗೆ ಸಂಸ್ಥೆಯ ಸಿಇಒ ಟಿಮ್ ಕುಕ್ ಭಾರತಕ್ಕೆ ಆಗಮಿಸಿದ್ದರು. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮತ್ತು ದೆಹಲಿಯ ಸಾಕೇತ್ ಮಾಲ್‌ನಲ್ಲಿ ಆ್ಯಪಲ್ ಮಳಿಗೆ ಉದ್ಧಾಟನೆ ಮಾಡಲಾಗಿತ್ತು. ಈ ವೇಳೆ ಕುಕ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಬಾಲಿವುಡ್ ನಟ ನಟಿಯರನ್ನು ಬೇಟಿಯಾಗಿದ್ದರು. ಈ ಮೂಲಕ ಕುಕ್ ಭಾರತದಲ್ಲಿ ಸದ್ದು ಮಾಡಿದ್ದರು.
ಅತೀಕ್ ಅಹಮ್ಮದ್ ಹತ್ಯೆ
ಕುಖ್ಯಾತ ಮಾಫಿಯಾ ಡಾನ್, ಮಾಜಿ ಸಂಸದ ಹಾಗೂ ಮಾಜಿ ಶಾಸಕ ಅತೀಕ್ ಅಹ್ಮದ್‌ನನ್ನು ಎಪ್ರಿಲ್ 15 ರಂದು ಹತ್ಯೆ ಮಾಡಲಾಗಿತ್ತು. ಆತನ ಜತೆ ಸೋದರ ಅಶ್ರಫ್ ಅಹ್ಮದ್‌ನನ್ನೂ ಗುಂಡಿಕ್ಕಿ ಸಾಯಿಸಲಾಗಿತ್ತು. ಅತೀಕ್‌ನನ್ನು ವೈದ್ಯಕೀಯ ಪರೀಕ್ಷೆಗಾಗಿ ಪ್ರಯಾಗ್‌ರಾಜ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಪತ್ರಕರ್ತರು ಅತೀಕ್‌ನ ಹೇಳಿಕೆ ಪಡೆಯುತ್ತಿದ್ದರು. ಈ ವೇಳೆ ಮೂವರು ಗುಂಡಿನ ದಾಳಿ ನಡೆಸಿ ಅತೀಕ್ ಹತ್ಯೆ ಮಾಡಿದ್ದರು. ಅತೀಕ್ ಹತ್ಯೆ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.
ಮುಖ್ಯಮಂತ್ರಿ ಎನ್ ಬೀರೆನ್ ಸಿಂಗ್
ಈಶಾನ್ಯ ರಾಜ್ಯಗಳ ಪೈಕಿ ಮಣಿಪುರ ಈ ವರ್ಷದಲ್ಲಿ ಭಾರಿ ಸಾವು ನೋವು ಕಂಡಿತ್ತು. ಮೇ 3 ರಂದು ಆರಂಭಗೊಂಡ ಮಣಿಪುರ ಹಿಂಸಾಚಾರದಿಂದ ಮುಖ್ಯಮಂತ್ರಿ ಎನ್ ಬೀರೆನ್ ಸಿಂಗ್ ತೀವ್ರ ಟೀಕೆ, ಆರೋಪದ ಸುರಿಮಳೆ ಎದುರಿಸಿದ್ದರು. ಸುದೀರ್ಘ ದಿನಗಳ ಕಾಲ ನಡೆದ ಮಣಿಪುರ ಗದ್ದಲ ನಿಯಂತ್ರಿಸಲು ಎನ್ ಬೀರೆನ್ ಸಿಂಗ್ ಸರ್ಕಾರ ವಿಪಲವಾಗಿದೆ ಅನ್ನೋ ಆರೋಪ ಸರ್ಕಾರವನ್ನೇ ಅಲುಗಾಡಿಸಿತ್ತು. ದೇಶ ವಿದೇಶಗಳಲ್ಲಿ ಎನ್ ಬೀರೆನ್ ಸಿಂಗ್ ಭಾರತದಲ್ಲಿ ಭಾರಿ ಸದ್ದು ಮಾಡಿದ್ದರು.
ಉದ್ಯಮಿ ಎಲಾನ್ ಮಸ್ಕ್
ಉದ್ಯಮಿ ಎಲಾನ್ ಮಸ್ಕ್ ಕಳೆದ ಎರಡೂ ಮೂರು ವರ್ಷಗಳಿಂದ ಸದಾ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ ಟ್ವಿಟರ್ ಖರೀದಿಸಿ ಸಂಚಲನ ಸೃಷ್ಟಿಸಿದ್ದರೆ, 2023ರಲ್ಲಿ ಟ್ವಿಟರ್ ಲೋಗೋ ಬದಲಾಯಿಸಿ ನೀಲಿ ಹಕ್ಕಿಯನ್ನು ಹಾರಿಬಿಟ್ಟಿದ್ದರು. 2023ರಲ್ಲೂ ಎಲಾನ್ ಮಸ್ಕ್ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ.
ಹೊಸ ವರ್ಷಕ್ಕೆ ಬಿಡುಗಡೆಯಾಗುತ್ತಿದೆ ಅತ್ಯಾಧುನಿಕ ಹೀರೋ ಸ್ಕೂಟರ್- ಬೈಕ್!
ಎಸ್ ಸೋಮನಾಥ್
ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಭಾರತ ಮಾತ್ರವಲ್ಲಿ ವಿಶ್ವದಲ್ಲೇ ಭಾರಿ ಜನಪ್ರಿಯರಾಗಿದ್ದಾರೆ. ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸಿದ ವಿಜ್ಞಾನಿ ಎಸ್ ಸೋಮನಾಥ್, ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ವಿ ಸೋಮನಾಥ್ ಈ ವರ್ಷ ಭಾರತೀಯರ ಹಿರಿಮೆ, ಗರಿಮೆ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿದ ವಿಜ್ಞಾನಿಯಾಗಿ, ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
ದುಡಿಮೆ ಸಮಯ ಹೇಳಿ ಸುದ್ದಿಯಾದ ನಾರಾಯಣಮೂರ್ತಿ
ಇನ್ಫೋಸಿಸ್ ಸಂಸ್ಥಾಪ ನಾರಾಯಣಮೂರ್ತಿ ಈ ವರ್ಷ ಬಾರಿ ಚರ್ಚೆಗೆ ಗ್ರಾಸವಾಗಿದ್ದರು. ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಅನ್ನೋ ಮೂರ್ತಿ ಹೇಳಿಕೆಗೆ ದೇಶ ವಿದೇಶದ ಉದ್ಯಮಿಗಳು, ಕಂಪನಿಗಳ ಸಿಇಒ,ಸಂಸ್ಥಾಪಕರು ಪ್ರತಿಕ್ರಿಯಿಸಿದ್ದರು. ನಾರಾಯಣಮೂರ್ತಿ ಹೇಳಿಕೆಗೆ ಪರ ವಿರೋಧಗಳು ವ್ಯಕ್ತವಾಗಿತ್ತು. 2023ರಲ್ಲಿ ನಾರಾಯಣಮೂರ್ತಿ ದುಡಿಮೆ ಸಮಯದ ಮೂಲಕ ಭಾರತದಲ್ಲಿ ಸದ್ದು ಮಾಡಿದ್ದಾರೆ.
ಒಪನ್ಎಐ ಕಂಪನಿಯ ಸಿಇಒ ಸ್ಯಾಮ್ ಆಲ್ಟಮನ್ ವರ್ಷಾಂತ್ಯದಲ್ಲಿ ಭಾರಿ ಸದ್ದು ಮಾಡಿದ್ದಾರೆ. ಕಂಪನಿಯಿಂದ ವಜಾಗೊಂಡ ಐದೇ ದಿನಕ್ಕೆ ಮತ್ತೆ ಕಂಪನಿ ಸ್ಯಾಮ್ ಆಲ್ಟಮನ್ ಸೇರಿಸಿಕೊಂಡಿತ್ತು. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಚಾಟ್‌ಜಿಪಿಟಿ ತಂತ್ರಜ್ಞಾನದ ಮೂಲಕ ಕ್ರಾಂತಿ ಮಾಡಿ ಸ್ಯಾಮ್ ಆಲ್ಟಮನ್ ಈ ವರ್ಷ ಭಾರತದಲ್ಲಿ ಸದ್ದು ಮಾಡಿದ್ದಾರೆ.
ಈ ವರ್ಷ ಕೆಲ ದಿಗ್ಗಜ ಹಾಗೂ ಹಿರಿಯ ಉದ್ಯಮಿಗಳು, ಪ್ರಮುಖ ಗಣ್ಯರು ನಿಧನರಾಗಿದ್ದಾರೆ. ಮಹೀಂದ್ರ ಮಹೀಂದ್ರ ಎಮ್ರಿಟಸ್ ಮುಖ್ಯಸ್ಥ ಕೇಶುಬ್ ಮಹೀಂದ್ರ ತಮ್ಮ 99ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹಿಂದುಜಾ ಗ್ರೂಪ್ ಚೇರ್ಮೆನ್ ಎಸ್‌ಪಿ ಹಿಂದುಜಾ ಲಂಡನ್‌ನಲ್ಲಿ ನಿಧರಾಗಿದ್ದಾರೆ. ಬೀದಿ ನಾಯಿ ದಾಳಿಯಲ್ಲಿ ವಾಘ್ ಬಕ್ರಿ ಚಹಾ ಗ್ರೂಪ್ ಮಾಲೀಕ ಹಾಗೂ ಕಾರ್ಯನಿರ್ವಹಾ ನಿರ್ದೇಶಕ ಪರಾಗ್ ದೇಸಾಯಿ ಅಕ್ಟೋಬರ್ 22 ರಂದು ನಿಧನರಾಗಿದ್ದಾರೆ. ನವೆಂಬರ್ 14 ರಂದು ಸಹರಾ ಗ್ರೂಪ್ ಮುಖ್ಯಸ್ಥ ಸುಬ್ರತೊ ರಾಯ್ ಮುಂಬೈನಲ್ಲಿ ನಿಧನರಾಗಿದ್ದಾರೆ.