‘ಪ್ರವೇಶ ಮಟ್ಟದ ನ್ಯಾಯಾಂಗ ಸೇವೆಗಳ ಪರೀಕ್ಷೆ (ಜಡ್ಜ್ ಆಗಲು) ಬರೆಯುವವರು ಕಡ್ಡಾಯವಾಗಿ 3 ವರ್ಷ ವಕೀಲಿಕೆ ಮಾಡಿರಬೇಕು’ ಎಂಬ ನಿಯಮವು, ಆದೇಶ ಹೊರಡಿಸಲಾದ ಮೇ 20ರ ಬಳಿಕ ನೇಮಕವಾಗುವವರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನವದೆಹಲಿ: ‘ಪ್ರವೇಶ ಮಟ್ಟದ ನ್ಯಾಯಾಂಗ ಸೇವೆಗಳ ಪರೀಕ್ಷೆ (ಜಡ್ಜ್ ಆಗಲು) ಬರೆಯುವವರು ಕಡ್ಡಾಯವಾಗಿ 3 ವರ್ಷ ವಕೀಲಿಕೆ ಮಾಡಿರಬೇಕು’ ಎಂಬ ನಿಯಮವು, ಆದೇಶ ಹೊರಡಿಸಲಾದ ಮೇ 20ರ ಬಳಿಕ ನೇಮಕವಾಗುವವರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಮೇ 14ರಂದು ನಡೆದ ನೇಮಕಾತಿ ವೇಳೆ ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸೇವಾ ಆಯೋಗವು 3 ವರ್ಷಗಳ ಅಭ್ಯಾಸವನ್ನು ಕಡ್ಡಾಯಗೊಳಿಸಿರಲಿಲ್ಲ. ಇದನ್ನು ಪ್ರಶ್ನಿಸಿ ನವೀದ್ ಬುಖ್ತಿಯಾ ಸೇರಿ 5 ವಕೀಲರು ಅರ್ಜಿ ಸಲ್ಲಿಸಿದ್ದರು.
ಇದನ್ನು ತಿರಸ್ಕರಿಸಿದ ನ್ಯಾ। ಕೆ. ವಿನೋದ್ ಚಂದ್ರನ್ಮ ಎನ್.ವಿ. ಅಂಜಾರಿಯಾ ಅವರ ಪೀಠ, ‘ಅವರು ತೀರ್ಪನ್ನು ಉಲ್ಲಂಘಿಸಿದರು ಎಂದು ಹೇಳುತ್ತಿದ್ದೀರಾ? ಇದರರ್ಥ, ಮೇ 20ರಂದು ಸಿಜೆಐ ಏನು ತೀರ್ಪು ಕೊಡುತ್ತಾರೆಂದು ಇಡೀ ಕೋರ್ಟ್‌ಗೆ ತಿಳಿದಿತ್ತು ಎಂದು ನೀವು ಹೇಳುತ್ತಿದ್ದೀರಾ?’ ಎಂದು ಖಾರವಾಗಿ ಪ್ರಶ್ನಿಸಿದೆ.
ಸಲಹೆ ನೀಡಿದ್ದಕ್ಕೆ ವಕೀಲರಿಗೂ ಇಡಿ ನೋಟಿಸ್ : ಸುಪ್ರೀಂ ಗರಂ
ನವದೆಹಲಿ: ಕಂಡಿದ್ದೆಲ್ಲವನ್ನೂ ತನಿಖೆ ಮಾಡಲು ಜಾರಿ ನಿರ್ದೇಶನಾಲಯವು ‘ಸೂಪರ್ ಕಾಪ್’ ಅಲ್ಲ ಎಂದು ಇ.ಡಿ. ವಿರುದ್ಧ ಮದ್ರಾಸ್ ಹೈಕೋರ್ಟ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬೆನ್ನಲ್ಲೇ, ಕಕ್ಷಿದಾರರಿಗೆ ಕಾನೂನು ಸಲಹೆ ನೀಡಿದ್ದ ಇಬ್ಬರು ಹಿರಿಯ ವಕೀಲರಿಗೆ ಇ.ಡಿ. ನೋಟಿಸ್ ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್, ಜಾರಿ ನಿರ್ದೇಶನಾಲಯ ತನ್ನ ಎಲ್ಲಾ ಎಲ್ಲೆಗಳನ್ನೂ ಮೀರುತ್ತಿದೆ. ಈ ಬಗ್ಗೆ ನಾವು ಕೆಲವೊಂದು ನಿಯಮಾವಳಿ ರೂಪಿಸಲಿದ್ದೇವೆ ಎಂದು ಹೇಳಿದೆ.
ಹಿರಿಯ ವಕೀಲರಾದ ಅರವಿಂದ್ ದಾತಾರ್ ಮತ್ತು ಪ್ರತಾಪ್ ವೇಣುಗೋಪಾಲ್ ಅವರು ವ್ಯಕ್ತಿಯೊಬ್ಬರಿಗೆ ಕಾನೂನು ಸಲಹೆ ನೀಡಿದ್ದನ್ನು ಪ್ರಶ್ನಿಸಿ ಇ.ಡಿ ಸಮನ್ಸ್ ಜಾರಿಗೊಳಿಸಿತ್ತು.
ಈ ಕುರಿತು ಸ್ವಯಂಪ್ರೇರಿತ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಬಿ.ಆರ್.ಗವಾಯಿ ಹಾಗೂ ನ್ಯಾ.ಕೆ.ವಿನೋದ್ ಚಂದ್ರನ್ ಅವರಿದ್ದ ಪೀಠ, ‘ವಕೀಲರು ಕಾನೂನು ಸಲಹೆ ನೀಡಿದ್ದಕ್ಕಾಗಿ ಇ.ಡಿ ನೋಟಿಸ್ ನೀಡಲು ಸಾಧ್ಯವಿಲ್ಲ. ವಕೀಲರು ಮತ್ತು ಕಕ್ಷಿದಾರರ ನಡುವಿನ ಸಂವಹನವು, ಒಂದು ವೇಳೆ ಅದು ತಪ್ಪಾಗಿದ್ದರು ಸಹ ವಿಶೇಷ ಸಂವಹನವೇ ಆಗಿದೆ. ಅವರ ವಿರುದ್ಧ ಇ.ಡಿ ನೋಟಿಸ್ ನೀಡಲಾಗದು. ಇ.ಡಿ ಎಲ್ಲ ಮಿತಿಗಳನ್ನು ಮೀರುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ
