ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ನಡುವಿನ ಸಂಬಂಧವನ್ನು ಮಧ್ಯಪ್ರದೇಶ ಹೈಕೋರ್ಟ್ ಜಡ್ಜ್‌ವೊಬ್ಬರು ಸಾಮಂತ-ಗುಲಾಮ ಸಂಬಂಧಕ್ಕೆ ಹೋಲಿಸಿೆದ್ದಾರೆ

ನವದೆಹಲಿ: ಹೈಕೋರ್ಟ್- ಜಿಲ್ಲಾ ನ್ಯಾಯಾಲಯಗಳ ನಡುವಿನ ಸಂಬಂಧ ಸಾಮಂತರು ಮತ್ತು ಗುಲಾಮರಂತಿದೆ. ನ್ಯಾಯಾಂಗ ವ್ಯವಸ್ಥೆಯಲ್ಲೂ ಶ್ರೇಣೀಕೃತ ವ್ಯವಸ್ಥೆ ಛಾಯೆ ಗೋಚರಿಸುತ್ತದೆ. ಇಲ್ಲಿ ಹೈಕೋರ್ಟ್ ನ್ಯಾಯಾಧೀಶರು ಸವರ್ಣೀಯರಾಗಿದ್ದರೆ ಜಿಲ್ಲಾ ಜಡ್ಜ್‌ಗಳು ಶೂದ್ರರಂತೆ ಕಾಣುತ್ತಾರೆ ಎಂದು ಮಧ್ಯಪ್ರದೇಶದ ಹೈಕೋರ್ಟ್ ಅಚ್ಚರಿಯ ಟಿಪ್ಪಣಿ ಮಾಡಿದೆ. ನ್ಯಾಯಮೂರ್ತಿ ಅತುಲ್ ಶ್ರೀಧರನ್ ಅವರು ಇತ್ತೀಚೆಗೆ ವಜಾಗೊಂಡಿರುವ ವಿಶೇಷ ನ್ಯಾಯಾಧೀಶರೊಬ್ಬರ ಪ್ರಕರಣವೊಂದರ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟ್‌ನ್ಯಾಯಾಧೀಶರನ್ನುಭೇಟಿಯಾಗುವಾಗ ಜಿಲ್ಲಾ ನ್ಯಾಯಾಧೀಶರ ಬಾಡಿ ಲ್ಯಾಂಗ್‌ಜ್ ತಲೆಬಾಗಿ ಬೇಡಿಕೊಳ್ಳುವ ರೀತಿಯಲ್ಲಿರುತ್ತದೆ. ಜಿಲ್ಲಾ ನ್ಯಾಯಾಧೀಶರು ಒಂದು ರೀತಿ ಬೆನ್ನುಮೂಳೆ ಇಲ್ಲದ ಸಸ್ತನಿಯಾದ ಅಕಶೇರುಕಗಳ ರೀತಿ ಕಾಣುತ್ತಾರೆ. ಹೈಕೋರ್ಟ್ ನ್ಯಾಯಾಧೀಶರನ್ನು ಜಿಲ್ಲಾ ನ್ಯಾಯಾಧೀಶರು ರೈಲ್ವೆ ನಿಲ್ದಾಣಗಳಲ್ಲಿ ಸ್ವಾಗತ ಕೋರಿ ಅವರ ಊಟ-ತಿಂಡಿ ವ್ಯವಸ್ಥೆ ಮಾಡುವ ಉದಾಹರಣೆಗಳೂ ಸಾಕಷ್ಟಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಜಿಲ್ಲಾ ನ್ಯಾಯಾಧೀಶರು ಹೈಕೋರ್ಟ್ ರಿಜಿಸ್ಟ್ರಿಗೆ ನಿಯೋಜಿಸಲ್ಪಟ್ಟರೂ ಅವರಿಗೆ ಸೀಟು ನೀಡುವುದಿಲ್ಲ. ಒಂದು ವೇಳೆ ನೀಡಿದರೂ ಆ ಕುರ್ಚಿಯಲ್ಲಿ ಕೂರಲು ಹಿಂದೆ ಮುಂದೆ ನೋಡುತ್ತಾರೆ. ಇನ್ನು ರಾಜ್ಯ ನ್ಯಾಯಾಂಗ ವ್ಯವಸ್ಥೆಯಲ್ಲೂ ಶ್ರೇಣೀಕೃತ ಜಾತಿ ವ್ಯವಸ್ಥೆಯ ಛಾಯೆ ಕಾಣುತ್ತದೆ. ಇಂಥ ವ್ಯವಸ್ಥೆಯಲ್ಲಿ ಹೈಕೋರ್ಟ್ ನ್ಯಾಯಾಧೀಶರು ಸವರ್ಣೀಯರಾಗಿದ್ದರೆ, ಕೆಳ ನ್ಯಾಯಾಲಯದ ನ್ಯಾಯಾಧೀಶರು ಶೂದ್ರರು ಆಗಿರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿ ಸಾವು ತಡೆಗೆ ದೇಶವ್ಯಾಪಿ ಶಿಕ್ಷಣ ಸಂಸ್ಥೆಗಳಿಗೆ ಸುಪ್ರೀಂನಿಂದ 15 ಮಾರ್ಗಸೂಚಿ

ನವದೆಹಲಿ: ದೇಶಾದ್ಯಂತ ಹೆಚ್ಚುತ್ತಿರುವ ವಿದ್ಯಾರ್ಥಿಗಳು ಸಾವಿಗೆ ಶರಣಾಗುತ್ತಿರುವ ಪ್ರಕರಣಗಳ ಕುರಿತು ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇದೊಂದು 'ವ್ಯವಸ್ಥಿತ ವೈಫಲ್ಯ' ಎಂದಿದೆ. ವಿದ್ಯಾರ್ಥಿಗಳು ಸಾವಿನ ದಾರಿ ಹಿಡಿಯುವುದನ್ನು ತಡೆಯಲು ಅವರ ಮಾನಸಿಕ ಆರೋಗ್ಯ ಕಾಪಾಡುವ ವ್ಯವಸ್ಥೆ ಶೈಕ್ಷಣಿಕ ಸುಧಾರಣೆಯ ಅಗತ್ಯವಿದೆ ಎಂದಿದೆ. ಜತೆಗೆ, ವಿದ್ಯಾರ್ಥಿಗಳ ಸಾವು ತಡೆಯಲೆಂದೇ ಶಿಕ್ಷಣ ಸಂಸ್ಥೆಗಳಿಗೆ 15 ಮಾರ್ಗಸೂಚಿ ಬಿಡುಗಡೆ ಮಾಡಿ ಆದೇಶಿಸಿದೆ.

ಸುಪ್ರೀಂಕೋರ್ಟ್ ರೂಪಿಸಿರುವ ಮಾರ್ಗಸೂಚಿ ಸುಪ್ರೀಂಕೋರ್ಟ್‌ ಪ್ರಕಾರ ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಕಡ್ಡಾಯ ಮಾನಸಿಕ ಆರೋಗ್ಯ ಕೌನ್ಸೆಲಿಂಗ್, ಕುಂದು ಕೊರತೆ ಆಲಿಸುವ ವ್ಯವಸ್ಥೆ ಸೇರಿ ಹಲವು ಕ್ರಮಗಳನ್ನು ಶೈಕ್ಷಣಿಕ ಸಂಸ್ಥೆಗಳು ಕೈಗೊಳ್ಳಬೇಕಿದೆ. ಸರ್ಕಾರವು ಈ ಕುರಿತು ಕಾನೂನು ರೂಪಿಸುವವರೆಗೂ ಈ ಮಾರ್ಗಸೂಚಿ ಅಸ್ತಿತ್ವದಲ್ಲಿರಲಿದೆ ಎಂದು ಇದೇ ವೇಳೆ ಕೋರ್ಟ್ ತಿಳಿಸಿದೆ.

ಏನೇನು ಮಾರ್ಗಸೂಚಿ?

  • ವಿದ್ಯಾರ್ಥಿಗಳ ಸಣ್ಣ ಸಮೂಹಕ್ಕೆ ನಿರಂತರವಾಗಿ ಕೌನ್ಸಿಲರ್‌ಗಳ ಒದಗಿಸಬೇಕು. ಆ ಮೂಲಕ ನಿರಂತರ ಧೈರ್ಯ ತುಂಬುವ ಕೆಲಸ ಮಾಡಬೇಕು.
  • ಮಾನಸಿಕವಾಗಿ ಕುಗ್ಗಿರುವ ವಿದ್ಯಾರ್ಥಿಗಳನ್ನು ಗುರುತಿಸಬೇಕು. ತಮಗೆ ತಾವೇ ಹಾನಿ ಮಾಡಿಕೊಂಡವರ ಗಮನಿಸಿ ಪ್ರತಿಕ್ರಿಯಿಸಬೇಕು.
  • ಲೈಂಗಿಕ ದೌರ್ಜನ್ಯ, ರಾಗಿಂಗ್ ದೂರು ಸಂಬಂಧ ಶೈಕ್ಷಣಿಕ ಸಂಸ್ಥೆಗಳು ಆಂತರಿಕ ಸಮಿತಿ ಅಥವಾ ಪ್ರಾಧಿಕಾರ ರಚಿಸಬೇಕು
  • ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಗೌಪ್ಯ ದಾಖಲೆ ಕಾಪಿಟ್ಟುಕೊಳ್ಳಬೇಕು.
  • ಶೈಕ್ಷಣಿಕ ಹೊರೆ ಕಡಿಮೆಗೆ, ಅಂಕ ಹಾಗೂ ಬ್ಯಾಂಕ್‌ನ ಆಚೆಗೂ ಭವಿಷ್ಯ ರೂಪಿಸಿಕೊಳ್ಳಲು ಕಾಲ ಕಾಲಕ್ಕೆ ಪರೀಕ್ಷಾ ವಿಧಾನಗಳನ್ನು ಪರಿಶೀಲಿಸಬೇಕು

2022ರಲ್ಲಿ13,044 ವಿದ್ಯಾರ್ಥಿಗಳು ಸಾವಿಗೆ ಶರಣು

ಸುಪ್ರೀಂಕೋರ್ಟ್ ಈ 15 ಮಾರ್ಗ ಸೂಚಿಗಳನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ ವರದಿ ಆಧಾರವಾಗಿಟ್ಟುಕೊಂಡು ರಚಿಸಿದೆ. ಅದರ ಪ್ರಕಾರ 2022ರಲ್ಲಿ 13,044 ವಿದ್ಯಾರ್ಥಿಗಳು ಸಾವಿಗೆ ಶರಣಾಗಿದ್ದಾರೆ. ಹಾಗೆಯೇ 2021ರಲ್ಲಿ 5,425 ವಿದ್ಯಾರ್ಥಿಗಳು ಸಾವಿಗೆ ಶರಣಾಗಿದ್ದಾರೆ. ವರದಿಗಳ ಪ್ರಕಾರ ಪ್ರತಿ 100 ವಿದ್ಯಾರ್ಥಿ ಗಳಲ್ಲಿ ಎಂಟು ಮಂದಿ ವಿದ್ಯಾರ್ಥಿ ಗಳಾಗಿದ್ದಾರೆ. ಅಲ್ಲದೆ, ಪರೀಕ್ಷಾ ವೈಫಲ್ಯದಿಂದಾಗಿಯೇ ಸುಮಾರು 2,248 ವಿದ್ಯಾರ್ಥಿಗಳು ಸಾವಿಗೆ ಶರಣಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.