ಅಕ್ರಮ ವಿದ್ಯುತ್ ಬೇಲಿ ತಗುಲಿ ಮೂರು ಕಾಡಾನೆಗಳು ಸಾವನ್ನಪ್ಪಿದ ಘಟನೆ  ತಮಿಳುನಾಡಿನ ಧರ್ಮಪುರಿಯಲ್ಲಿ ನಡೆದಿದೆ. ಅಕ್ರಮವಾಗಿ ನಿರ್ಮಿಸಲ್ಪಟ್ಟಿದ್ದ ವಿದ್ಯುತ್ ಬೇಲಿಯನ್ನು ದಾಟುವ ವೇಳೆ ಈ ಅವಘಡ ಸಂಭವಿಸಿದೆ.

ಧರ್ಮಪುರಿ: ಅಕ್ರಮ ವಿದ್ಯುತ್ ಬೇಲಿ ತಗುಲಿ ಮೂರು ಕಾಡಾನೆಗಳು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಧರ್ಮಪುರಿಯಲ್ಲಿ ನಡೆದಿದೆ. ಅಕ್ರಮವಾಗಿ ನಿರ್ಮಿಸಲ್ಪಟ್ಟಿದ್ದ ವಿದ್ಯುತ್ ಬೇಲಿಯನ್ನು ದಾಟುವ ವೇಳೆ ಈ ಅವಘಡ ಸಂಭವಿಸಿದೆ. ಧರ್ಮಪುರಿ ಜಿಲ್ಲೆಯ ಮಾರಂಡಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಕಾನೂನಿಗೆ ವಿರುದ್ಧವಾಗಿ ಈ ಅಕ್ರಮ ವಿದ್ಯುತ್ ಬೇಲಿ ನಿರ್ಮಿಸಿದ್ದಕ್ಕೆ ಮುರುಗೇಶನ್ (Murugeshan)ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಕಾಡುಪ್ರಾಣಿಗಳಿಂದ ಬೆಳೆ ರಕ್ಷಿಸುವ ಸಲುವಾಗಿ ವಿದ್ಯುತ್ ಬೇಲಿ (electric fence) ಹಾಕಿರುವುದಾಗಿ ಆತ ಅವಲತ್ತುಕೊಂಡಿದ್ದಾನೆ. 

ಸಿದ್ದಾಪುರ: ವಿದ್ಯುತ್‌ ಸ್ಪರ್ಶಿಸಿ ಎರಡು ಕಾಡಾನೆ ಸಾವು

ವಿದ್ಯುತ್‌ ಸ್ಪರ್ಶಿಸಿ ಕಾಡಾನೆಗಳೆರಡು (Wild elephant) ಮೃತಪಟ್ಟಿರುವ ಘಟನೆ ನೆಲ್ಯಹುದಿಕೇರಿ ಸಮೀಪದ ಪುಷ್ಪಗಿರಿ ಖಾಸಗಿ ತೋಟದಲ್ಲಿ ನಡೆದಿದೆ. ನೆಲ್ಯಹುದಿಕೇರಿಯ (NelyaHudikeri) ಕಾಫಿ ಬೆಳೆಗಾರರಾದ ಕೊಣೇರೀರ ಪ್ರಕಾಶ್‌ ಹಾಗೂ ಮಂಡ್ಯಪಂಡ ಸುಮನ್‌ ಚಂಗಪ್ಪ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಮರದ ಕೊಂಬೆ ಬಿದ್ದು 11 ಕೆವಿ ಸಾಮರ್ಥ್ಯದ ವಿದ್ಯುತ್‌ ತಂತಿ ತಳಮಟ್ಟದಲ್ಲಿ ತೂಗಾಡುತಿದ್ದ ಪರಿಣಾಮ ಬೆಳಗ್ಗೆ ಆಹಾರ ಅರಸಿ ತೋಟಕ್ಕೆ ಬಂದಿದ್ದ ಕಾಡಾನೆಗಳು ವಿದ್ಯುತ್‌ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿವೆ. ಮೃತ ಆನೆಗಳನ್ನು ಸುಮಾರು 19 ವರ್ಷದ ಗಂಡಾನೆ ಹಾಗೂ 15 ವರ್ಷದ ಹೆಣ್ಣಾನೆ ಎಂದು ಅಂದಾಜಿಸಲಾಗಿದೆ.

ಮತ್ತೊಂದು 18ವರ್ಷದ ಕಾಡಾನೆ ಸಾವು

ಸ್ಥಳಕ್ಕೆ ರೈತ ಸಂಘದ ಮುಖಂಡರು ಹಾಗೂ ಸದಸ್ಯರು ಆಗಮಿಸಿ ಅರಣ್ಯ ಇಲಾಖೆ ಮತ್ತು ವಿದ್ಯುತ್‌ ಇಲಾಖೆಯ ಬೇಜವಾಬ್ದಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭ ಮಾತನಾಡಿದ ರೈತ ಸಂಘ(Rait Sangha) ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡ್ಯಪಂಡ ಪ್ರವೀಣ್‌ ಬೋಪಣ್ಣ,(Praveen Bopaiah) ಕಾಡಾನೆಗಳ ಹಾವಳಿ ತಡೆಯಲು ಅರಣ್ಯ ಇಲಾಖೆ(Forest Depertment) ವಿಫಲವಾಗಿದ್ದು, ಪದೇಪದೆ ಆನೆಗಳು ತೋಟಕ್ಕೆ ಬರುತ್ತಿವೆ. ಆಹಾರ ಅರಸಿ ತೋಟಕ್ಕೆ ಬಂದಿದ್ದ ಕಾಡಾನೆಗಳೆರಡು ವಿದ್ಯುತ್‌ ಸ್ಪರ್ಶಿಸಿ ಸಾವನ್ನಪ್ಪಿದೆ. ವಿದ್ಯುತ್‌ ಇಲಾಖೆಯ ನಿರ್ಲಕ್ಷ್ಯದಿಂದ ಈ ಅನಾಹುತ ಸಂಭವಿಸಿದೆ. ವಿದ್ಯುತ್‌ ತಂತಿ ಕೆಲ ದಿನಗಳ ಹಿಂದೆಯೇ ತುಂಡಾಗಿ ಬಿದ್ದಿದ್ದು, ತೂಗಾಡುತ್ತಿರುವ ಬಗ್ಗೆ ವಿದ್ಯುತ್‌ ಇಲಾಖೆಗೆ ಮಾಹಿತಿ ನೀಡಿದ್ದರೂ ಸಿಬ್ಬಂದಿ ಬೇಜವಾಬ್ದಾರಿ ತೋರಿದೆ. ಪರಿಣಾಮ ಆನೆಗಳೆರಡು ಸಾವಿಗೀಡಾಗಿವೆ ಎಂದು ಇಲಾಖೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೃತ ಕಾಡಾನೆಗಳನ್ನು(Wild Elephants) ತೋಟದ ಒಳಗಡೆ ಹೂತು ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ, ಜಾಂಗೋ ಕ್ರೇನ್‌ ಸಹಾಯದಿಂದ ಮೃತ ಆನೆಗಳನ್ನು ತೋಟದಿಂದ ಹೊರತಂದು ನಂಜರಾಯಪಟ್ಟಣ ಸಮೀಪದ ಮೀನುಕೊಲ್ಲಿಯ ಅರಣ್ಯ ಪ್ರದೇಶಕ್ಕೆ ಸಾಗಿಸಲಾಯಿತು. 

ನರಳಿ ನಾಲ್ಕು ತಿಂಗಳ ಗರ್ಭಿಣಿ ಕಾಡಾನೆ ಸಾವು

ತೋಟದಲ್ಲಿ ತೋಡಿದ್ದ ಹೊಂಡಕ್ಕೆ ಬಿದ್ದು ಕಾಡಾನೆ ಸಾವು

ತೋಟದಲ್ಲಿ ತೋಡಿದ್ದ ಹೊಂಡಕ್ಕೆ ಬಿದ್ದು ಕಾಡಾನೆಯೊಂದು ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಳೆಕೆರೆ ಗ್ರಾಮದಲ್ಲಿ ಎಸ್ಟೇಟ್‌ನಲ್ಲಿ ನಡೆದಿದೆ. 10 ವರ್ಷದ ಹೆಣ್ಣಾನೆ‌ ಮೃತಪಟ್ಟಿದೆ. ಗೀತಾಂಜಲಿ ಎಸ್ಟೇಟ್‌ನಲ್ಲಿ ಕಾಲು ಜಾರಿ ಬಿದ್ದು ಆನೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕಾಡಾನೆಗಳು ಕಾಫಿ ತೋಟಕ್ಕೆ ಬಾರದಂತೆ 10×10 ಅಳತೆಯ ಕಂದಕವನ್ನ ತೋಟದ ಮಾಲೀಕರು ತೋಡಿದ್ದರು.

Scroll to load tweet…