ಸಕಲೇಶಪುರ (ಮಾ.15):  ತಾಲೂಕಿನ ಸುಂಡೆಕೆರೆ ವ್ಯಾಪ್ತಿಯಲ್ಲಿ 18 ವರ್ಷದ ಗಂಡಾನೆ ಸಾವನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಕಳೆದ ಮೂರು ತಿಂಗಳಲ್ಲಿ ಮೂರು ಆನೆ ಸಾವನ್ನಪ್ಪಿದ್ದಕ್ಕೆ ಸ್ಥಳೀಯರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆನೆ ಸಾವನ್ನಪ್ಪಿ 4-5 ದಿನ ಕಳೆದಿದೆ. ಸ್ಥಳಕ್ಕೆ ಅರಣ್ಯಾ​ಧಿಕಾರಿಗಳು ಭೇಟಿ ನೀಡಿದ್ದು, ಎಸಿಎಫ್‌ ಲಿಂಗರಾಜು ನೇತೃತ್ವದಲ್ಲಿ ಆನೆಯ ಶವ ಪರೀಕ್ಷೆ ನಡೆಸಲಾಗಿದೆ.

 ಸಕಲೇಶಪುರ ತಾಲೂಕಿನಲ್ಲಿ ಆನೆಗಳ ಸಾವು ಹೆಚ್ಚಾಗುತ್ತಿದೆ. ಅನೆ ಮೃತಪಟ್ಟಿರುವ ಸ್ಥಳಕ್ಕೆ ಸ್ಥಳೀಯರನ್ನು ಬಿಡದ್ದರಿಂದ ಅರಣ್ಯ ಅಧಿ​ಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.