ವಿವಾದಿತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಾಯಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ರೈತರಿಗೆ ಗನ್ ತೋರಿಸಿ ಬೆದರಿಸಿದ್ದ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೂಜಾ ಖೇಡ್ಕರ್ ತಾಯಿ ಮನೋರಮಾ ಖೇಡ್ಕರ್ ಅವರನ್ನು ಬಂಧಿಸಲಾಗಿದೆ.
ವಿವಾದಿತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಾಯಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ರೈತರಿಗೆ ಗನ್ ತೋರಿಸಿ ಬೆದರಿಸಿದ್ದ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೂಜಾ ಖೇಡ್ಕರ್ ತಾಯಿ ಮನೋರಮಾ ಖೇಡ್ಕರ್ ಅವರನ್ನು ಬಂಧಿಸಲಾಗಿದೆ. ತಮ್ಮ ವಿರುದ್ಧ ಪ್ರಕರಣ ದಾಖಲಾದ ನಂತರ ಮನೋರಮಾ ತಲೆಕೆಡಿಸಿಕೊಂಡಿದ್ದರು. ಈಕೆ ಗನ್ ತೋರಿಸಿ ರೈತರಿಗೆ ಬೆದರಿಕೆ ಹಾಕುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಈಕೆಯ ವಿರುದ್ಧ ಪೊಲೀಸರು ಎಫ್‌ಐಆರ್ ಫೈಲ್ ಮಾಡಿದ್ದರು. ಇದೀಗ ರಾಯಗಡ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಪೊಲೀಸರ ಬಂಧನದ ವೇಳೆ ಈಕೆ ರಾಯಗಡದ ಪ್ರಖ್ಯಾತ ಲಾಡ್ಜ್‌ನಲ್ಲಿ ತಂಗಿದ್ದರು. ಇಂದು ಮುಂಜಾನೆ ಲಾಡ್ಜ್‌ನಲ್ಲಿ ಇದ್ದಾಗಲೇ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಕೃಷಿ ಭೂಮಿಗೆ ಸಂಬಂಧಿಸಿದಂತೆ ರೈತರ ಜೊತೆ ಮನೋರಮಾ ಖೇಡ್ಕರ್ ಕಿತ್ತಾಟಕ್ಕಿಳಿದಿದ್ದರು. ರೈತರು ನಿಂತಿದ್ದ ಕೃಷಿ ಭೂಮಿ ತನ್ನದು ಎಂದು ರೈತರೊಂದಿಗೆ ಮಾತಿನ ಚಕಮಕಿ ನಡೆಸಿದ ಆಕೆ ನಂತರ ಪಿಸ್ತೂಲ್ ತೋರಿಸಿ ರೈತರನ್ನು ಬೆದರಿಸಿದ್ದಾರೆ. ಈ ವೇಳೆ ವೀಡಿಯೋ ರೆಕಾರ್ಡ್ ಮಾಡುತ್ತಿರುವುದನ್ನು ನೋಡಿ ಸುಮ್ಮನಾಗಿದ್ದರು. ಮನೋರಮಾ ಈ ರೀತಿ ಮಾಡ್ತಿರೋದು ಇದೇ ಮೊದಲಲ್ಲ ಎಂದುವ ವರದಿ ಆಗಿದೆ.
ಗನ್ ಹಿಡಿದು ರೈತರನ್ನು ಬೆದರಿಸಿದ್ದ ಐಎಎಸ್ ಪೂಜಾ ತಾಯಿ ನಾಪತ್ತೆ
ಇತ್ತ ಮಗಳು ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಮಾಡಿರುವ ವಿವಾದಗಳು ಕೂಡ ಕಡಿಮೆ ಏನಲ್ಲ, ತಮಗೆ ಕೆಂಪು ಗೂಟದ ಕಾರು ಬಳಸುವ ಹಕ್ಕು ಇಲ್ಲದಿದ್ದರೂ ತಮ್ಮ ಆಡಿ ಕಾರಿಗೆ ಕೆಂಪು ಬೀಕಾನ್ ದೀಪ ಬಳಸಿಕೊಂಡು ಪೂಜಾ ಖೇಡ್ಕರ್ ತಿರುಗಾಡಲು ಶುರು ಮಾಡಿದ ನಂತರ ಅವರ ಕುಟುಂಬದ ಒಂದೊಂದೇ ಎಡವಟ್ಟುಗಳು ಬೆಳಕಿಗೆ ಬರುತ್ತಿವೆ. ಸಾಮಾನ್ಯವಾಗಿ ತರಬೇತಿಯಲ್ಲಿರುವ ಅಧಿಕಾರಿಗಳಿಗೆ ಕೆಂಪು ಅಥವಾ ನೀಲಿ ಬಣ್ಣದ ಗೂಟದ ಕಾರುಗಳನ್ನು ನೀಡಲಾಗುವುದಿಲ್ಲ ( red-blue beacon) ಕೆಂಪು ನೀಲಿ ಬೀಕಾನ್‌ಗಳಿರುವ ಗಾಡಿಗಳನ್ನು ಅವರು ಬಳಸುವಂತಿಲ್ಲ. ಆದರೆ ಈ ಐಎಎಸ್ ಅಧಿಕಾರಿ ತರಬೇತಿಯಲ್ಲಿರುವಾಗಲೇ ತಮ್ಮ ಖಾಸಗಿ ಆಡಿ ಕಾರಿಗೆ ಕೆಂಪು ಬೀಕಾನ್ ದೀಪವನ್ನು ಅಳವಡಿಸಿಕೊಂಡು ತಿರುಗಾಡುತ್ತಿದ್ದರು. ಇದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಪುಣೆಯಿಂದ ವಾಶೀಂಗೆ ವರ್ಗಾವಣೆ ಮಾಡಲಾಗಿತ್ತು.
ಇದಾದ ನಂತರ ಅವರು ಕೆನೆಪದರವಲ್ಲದ ಒಬಿಸಿ ಕೋಟಾವನ್ನು ಹಾಗೂ ದೈಹಿಕ ವಿಕಲಚೇತನರಿಗಾಗಿ ಇರುವ ಕೋಟಾವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಪೂಜಾ ಈಗ ಸಂಕಷ್ಟದಲ್ಲಿದ್ದು, ಯೂನಿಯನ್ ಪಬ್ಲಿಕ್ ಸರ್ವಿಸಸ್ ಕಮಿಷನ್ ಈಗ ಅವರನ್ನು ಜಿಲ್ಲಾಧಿಕಾರಿ ತರಬೇತಿಯಿಂದ ತಡೆ ಹಿಡಿದಿದೆ. ಅಲ್ಲದೇ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ಗೆ ಅವರನ್ನು ಮರಳಿ ಕರೆಸಿದೆ.
ನನ್ನ ಮಗಳ ವಿರುದ್ಧ ಪಿತೂರಿ: ಟ್ರೈನಿ ಐಎಎಸ್ ಅಧಿಕಾರಿ ಉದ್ಧಟತನವನ್ನ ಸಮರ್ಥಿಸಿಕೊಂಡ ತಂದೆ
ಪೂಜಾ ಕೇಂದ್ರ ನಾಗರಿಕ ಸೇವಾ ಆಯೋಗವೂ (ಯುಪಿಎಸ್‌ಸಿ) ನಡೆಸುವ ಪರೀಕ್ಷೆಯಲ್ಲಿ 821ನೇ ರಾಂಕ್ ಗಳಿಸಿದ್ದು, ಪುಣೆಯಲ್ಲಿ ಸಹಾಯಕ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಈಗ ಅವರನ್ನು ಮಹಾರಾಷ್ಟ್ರದ ಮತ್ತೊಂದು ಜಿಲ್ಲೆಯಾದ ವಾಶಿಂಗೆ ವರ್ಗಾವಣೆ ಮಾಡಲಾಗಿದೆ. ಇವರು ಕೇವಲ ಗೂಟದ ಕಾರಿನಲ್ಲಿ ಓಡಾಡುತ್ತಿದ್ದಿದ್ದು ಮಾತ್ರವಲ್ಲದೇ, ಕಾರಿಗೆ ಮಹಾರಾಷ್ಟ್ರ ಸರ್ಕಾರ ಎಂಬ ಬೋರ್ಡನ್ನು ಕೂಡ ಅಂಟಿಸಿದ್ದರು. ಪ್ರೊಬೇಷನರಿ ಅವಧಿಯಲ್ಲಿ ಯಾವ ಅಧಿಕಾರಿಗೂ ಈ ಸೌಲಭ್ಯ ನೀಡುವುದಿಲ್ಲ, ಹೀಗಾಗಿ ಇದು ವಿವಾದಕ್ಕೆ ಕಾರಣವಾಯ್ತು.
ಈಕೆಯ ಕಿತಾಪತಿ ಬರೀ ಇಷ್ಟೇ ಅಲ್ಲ ಹೆಚ್ಚುವರಿ ಕಲೆಕ್ಟರ್ ಅಜಯ್ ಮೋರ್ ಅವರು ಇಲ್ಲದಿದ್ದಾಗ ಅವರಿಗೆ ಮೀಸಲಾಗಿದ್ದ ಕೊಠಡಿಯನ್ನು ಕೂಡ ಇವರು ಅಕ್ರಮಿಸಿಕೊಂಡಿದ್ದರು. ಅವರ ಅನುಮತಿ ಇಲ್ಲದೇ ಅವರ ಕಚೇರಿಯ ಪೀಠೋಪಕರಣಗಳನ್ನು ಕಚೇರಿಯಿಂದ ತೆಗೆದು ಹಾಕಿದ್ದರು. ಅಲ್ಲದೇ ತನಗೆ ಲೆಟರ್ ಹೆಡ್, ನಾಮಫಲಕ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವಂತೆ ಕಂದಾಯ ಸಹಾಯಕರಿಗೆ ಕೇಳಿದ್ದರು ಎಂದು ವರದಿ ಆಗಿತ್ತು.
