Asianet Suvarna News Asianet Suvarna News

ಕಾರ್ಗಿಲ್‌ನಲ್ಲಿ ರಾತ್ರಿ ಹೊತ್ತಲ್ಲಿ ಇದೇ ಮೊದಲ ಬಾರಿಗೆ ಯುದ್ಧ ವಿಮಾನ ಇಳಿಸಿದ ಭಾರತ

 24 ವರ್ಷಗಳ ಹಿಂದೆ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧಕ್ಕೆ ಸಾಕ್ಷಿಯಾದ ಕಾರ್ಗಿಲ್ ನಲ್ಲಿ ಇದೇ ಮೊದಲ ಬಾರಿಗೆ ರಾತ್ರಿ ವೇಳೆ ಯುದ್ಧ ವಿಮಾನ ಇಳಿದು ಸಂಚಲನ ಮೂಡಿಸಿದೆ. ವಾಯು ಪಡೆಯ ಸರಕು ಸಾಗಣೆ ವಿಮಾನ 'ಸಿ-130ಜೆ ಸೂಪ‌ರ್ ಹರ್ಕುಲೆಸ್‌' ರಾತ್ರಿ ವೇಳೆ ಇಲ್ಲಿ ಇಳಿದ ಮೊದಲ ವಿಮಾನವಾಗಿದೆ.

This is the first time India has landed a warplane at night in Kargil C 130J aircraft lands on Pakistan border for the first time akb
Author
First Published Jan 8, 2024, 7:19 AM IST

ನವದೆಹಲಿ: 24 ವರ್ಷಗಳ ಹಿಂದೆ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧಕ್ಕೆ ಸಾಕ್ಷಿಯಾದ ಕಾರ್ಗಿಲ್ ನಲ್ಲಿ ಇದೇ ಮೊದಲ ಬಾರಿಗೆ ರಾತ್ರಿ ವೇಳೆ ಯುದ್ಧ ವಿಮಾನ ಇಳಿದು ಸಂಚಲನ ಮೂಡಿಸಿದೆ. ವಾಯು ಪಡೆಯ ಸರಕು ಸಾಗಣೆ ವಿಮಾನ 'ಸಿ-130ಜೆ ಸೂಪ‌ರ್ ಹರ್ಕುಲೆಸ್‌' ರಾತ್ರಿ ವೇಳೆ ಇಲ್ಲಿ ಇಳಿದ ಮೊದಲ ವಿಮಾನವಾಗಿದೆ.

ಗರುಡಾ ಕಮಾಂಡೋಗಳನ್ನು ಹೊತ್ತ ಈ ವಿಮಾನ, ಭಾರತಕ್ಕೆ ಅತ್ಯಂತ ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ, ಸಮುದ್ರ ಮಟ್ಟದಿಂದ 10500 ಅಡಿ ಎತ್ತರದಲ್ಲಿರುವ, ಪಾಕಿಸ್ತಾನ ಜತೆಗಿನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಗೆ ಸನಿಹದಲ್ಲೇ ಇರುವ ಕಾರ್ಗಿಲ್ ಏರ್‌ಸ್ಟ್ರಿಪ್‌ನಲ್ಲಿ ರಾತ್ರಿ ವೇಳೆ ಇಳಿ ಯುವ ಮೂಲಕ ಗಡಿಯಲ್ಲಿ ಭಾರತದ ಸನ್ನದ್ಧತೆಯನ್ನು ಎತ್ತಿ ತೋರಿಸಿದೆ ಎಂದು ವರದಿಗಳು ತಿಳಿಸಿವೆ. 

ಸೇನೆಗೆ ಮತ್ತಷ್ಟು ಬಲ: 97 ತೇಜಸ್‌ ಯುದ್ಧ ವಿಮಾನ, 156 ಪ್ರಚಂಡ ಹೆಲಿಕಾಪ್ಟರ್ ಖರೀದಿಗೆ ಸಮ್ಮತಿ

ಈ ಹಿಂದೆ ಕೂಡ ವಾಯುಪಡೆ ಸಿ-130 ಜೆ ವಿಮಾನವನ್ನು ಈ ಏರ್‌ಸ್ಟ್ರಿಪ್‌ನಲ್ಲಿ ಇಳಿಸಿತ್ತು. ಆದರೆ ರಾತ್ರಿ ವೇಳೆ ಈ ವಿಮಾನ ಇಳಿಸಿದ್ದು ಇದೇ ಮೊದಲು. ಇತ್ತೀಚೆಗೆ ಆ ಸಾಹಸ ನಡೆದಿದೆ. ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ಸರಕು ಸಾಗಣೆ ಮಾಡಲು, ಯೋಧರನ್ನು ಜಮಾವಣೆ ಮಾಡಲು ವಾಯುಪಡೆಗೆ  ಅನುಕೂಲವಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ರಕ್ಷಣಾ ಸಚಿವಾಲಯ ಈಗಾಗಲೇ ಗಡಿಯಲ್ಲಿರುವ ಎಲ್ಲ ವಾಯುನೆಲೆಗಳಲ್ಲಿ ಮೂಲಸೌಕರ್ಯ ಅಭಿವೃಧಿಪಡಿಸಲು ಒತ್ತು ನೀಡುತ್ತಿದೆ.

ರಕ್ಷಣಾ ಇಲಾಖೆಗೆ ಹೆಚ್ಚಿದ ‘ತೇಜಸ್ಸು’: 97 ತೇಜಸ್ ಯುದ್ಧ ವಿಮಾನ, 156 ಪ್ರಚಂಡ್ ಹೆಲಿಕಾಪ್ಟರ್‌ ಖರೀದಿಗೆ ಅನುಮತಿ

Follow Us:
Download App:
  • android
  • ios