ದೇಶದ ಹಾಗೂ ರಾಜ್ಯದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ವಿರುದ್ಧ ಜಿಎಸ್‌ಟಿ ಮಂಡಳಿಯೂ ತೆರಿಗೆ ವಂಚನೆ ನೋಟಿಸ್ ಜಾರಿ ಮಾಡಿದ್ದು ಉದ್ಯಮ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. 

ನವದೆಹಲಿ: ದೇಶದ ಹಾಗೂ ರಾಜ್ಯದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ವಿರುದ್ಧ ಜಿಎಸ್‌ಟಿ ಮಂಡಳಿಯೂ ತೆರಿಗೆ ವಂಚನೆ ನೋಟಿಸ್ ಜಾರಿ ಮಾಡಿದ್ದು ಉದ್ಯಮ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಘಟನೆಯ ಬಳಿಕ ಇನ್‌ಫೋಸಿಸ್‌ನ ಶೇರುಗಳ ಬೆಲೆಯಲ್ಲಿಯೂ ಕುಸಿತ ಕಂಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಮತ್ತೊರ್ವ ಉದ್ಯಮಿ ಹಾಗೂ ಇನ್‌ಫೋಸಿಸ್‌ ಮಂಡಳಿಯ ಮಾಜಿ ಸದಸ್ಯ ಹಾಗೂ ಸಿಎಫ್‌ಒ ಮೋಹನ್‌ದಾಸ್ ಪೈ ಅವರು ಪ್ರತಿಕ್ರಿಯಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯ ಕೂಡಲೇ ಮಧ್ಯಪ್ರವೇಶ ಮಾಡಬೇಕು. ಇಂತಹ ತೆರಿಗೆ ಭಯೋತ್ಪಾದನೆಯೂ ಭಾರತದಲ್ಲಿ ದೊಡ್ಡ ಹೂಡಿಕೆಯ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರದ ಆಡಳಿತದ ಪ್ರಮುಖ ಪ್ರತಿಪಾದಕ ಎಂದೇ ಬಿಂಬಿತರಾಗಿರುವ ಮೋಹನ್‌ದಾಸ್ ಪೈ ಅವರು ಒಂದು ವೇಳೆ ಇನ್ಪೋಸಿಸ್‌ಗೆ ನೊಟೀಸ್ ಬಂದಿದ್ದೆ ನಿಜವಾದಲ್ಲಿ ಇದೊಂದು ಅತೀರೇಕದ ವಿಚಾರ ಎಂದು ಹೇಳಿದ್ದಾರೆ. 

ಇನ್‌ಫೋಸಿಸ್‌ಗೆ ನೊಟೀಸ್‌ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ಮೋಹನ್ ದಾಸ್ ಪೈ, ತಮ್ಮ ಪೋಸ್ಟ್‌ನ್ನು ಪ್ರಧಾನಿ ನರೇಂದ್ರ ಮೋದಿ, ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಟ್ಯಾಗ್ ಮಾಡಿದ್ದು, ಈ ಬೆಳವಣಿಗೆಯನ್ನು ತೆರಿಗೆ ಭಯೋತ್ಪಾದನೆಗೊಂದು ನಿದರ್ಶನ ಎಂದು ಕರೆದಿದ್ದಾರೆ. ದೇಶದಲ್ಲಿ ತೆರಿಗೆ ಭಯೋತ್ಪಾದನೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಭಾರತದಿಂದ ಸೇವಾ ರಫ್ತುಗಳು (Service exports) ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವುದಿಲ್ಲ, ಇದನ್ನು ಅಧಿಕಾರಿಗಳು ತಮಗೆ ಬೇಕಾದಂತೆ ಅರ್ಥೈಸಿಕೊಳ್ಳಬಹುದೇ ಎಂದ ಮೋಹನ್ ದಾಸ್ ಪೈ ಪ್ರಶ್ನಿಸಿದ್ದಾರೆ. ಇದಕ್ಕೂ ಮೊದಲ ಮೋಹನ್‌ದಾಸ್‌ ಪೈ ಅವರು ಜುಲೈ 23ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ಗೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಇದೊಂದು ಪರಿವರ್ತನೀಯ (transformative) ಬಜೆಟ್ ಎಂದು ಮೋಹನ್‌ದಾಸ್ ಪೈ ಹೇಳಿದ್ದರು.

ಇನ್ಫೋಸಿಸ್‌ಗೆ 32000 ಕೋಟಿ ರು. ತೆರಿಗೆ ನೋಟಿಸ್‌?: ಈ ಮೊತ್ತ ಸಂಸ್ಥೆಯ ಒಂದಿಡೀ ವರ್ಷದ ಲಾಭಕ್ಕೆ ಸಮ

ಏನಿದು ಪ್ರಕರಣ?:
ನಿನ್ನೆ ಜುಲೈ 31ರಂದು ಜಿಎಸ್ಟಿ ಗುಪ್ತಚರ ಪ್ರದಾನ ನಿರ್ದೇಶನಾಲಯವು 32 ಸಾವಿರ ಕೋಟಿ ರು. ತೆರಿಗೆ ಕಟ್ಟುವಂತೆ ಇನ್ಫೋಸಿಸ್‌ಗೆ ನೋಟಿಸ್‌ ಜಾರಿ ಮಾಡಿದೆ ಎನ್ನಲಾಗಿದೆ. ಇನ್ಪೋಸಿಸ್‌ ಸಂಸ್ಥೆ ತನ್ನ ವಿದೇಶಿ ಗ್ರಾಹಕರ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ವಿದೇಶಗಳಲ್ಲೇ ತನ್ನ ಕೆಲವು ಶಾಖೆಗಳನ್ನು ತೆರೆದಿದೆ. 2017-18ರಿಂದ 2021-22ರ ಅವಧಿಯಲ್ಲಿ ಇನ್ಪೋಸಿಸ್‌ ಈ ವಿದೇಶಿ ಶಾಖೆಗಳ ಮೂಲಕ ನೀಡಿದ ಸೇವೆಗೆ ಐಜಿಎಸ್‌ಟಿ (ಇಂಟಿಗ್ರೇಟೆಡ್‌ ಗೂಡ್ಸ್‌ ಆ್ಯಂಡ್‌ ಸರ್ವೀಸ್‌ ಟ್ಯಾಕ್ಸ್‌) ಕಟ್ಟಬೇಕಿತ್ತು. ಆದರೆ ಈ ತೆರಿಗೆಯನ್ನು ಅದು ಕಟ್ಟಿಲ್ಲ. ಇದು ತೆರಿಗೆ ವಂಚನೆ ಎಂದು ಪರಿಗಣಿತವಾಗುತ್ತದೆ. ಹೀಗಾಗಿ ಈ ಅವಧಿಗೆ ಪಾವತಿಸದೇ ಉಳಿದ 32403 ಕೋಟಿ ರು. ಜಿಎಸ್ಟಿ ಬಾಕಿ ಪಾವತಿಸುವಂತೆ ಇನ್ಪೋಸಿಸ್‌ಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಆದರೆ ವಿಶೇಷವೆಂದರೆ ಜಿಎಸ್ಟಿಯ ವೆಬ್‌ಸೈಟ್‌ ಅಭಿವೃದ್ಧಿಪಡಿಸಿರುವುದೇ ಇನ್ಫೋಸಿಸ್‌. ಜೊತೆಗೆ ತೆರಿಗೆ ವಂಚನೆ ಆರೋಪದಡಿ ಕಟ್ಟಲು ಸೂಚಿಸಲಾಗಿರುವ 32,000 ಕೋಟಿ ರು.ಮೊತ್ತ ಕಂಪನಿಯ ಒಂದಿಡೀ ವರ್ಷದ ಲಾಭಕ್ಕೆ ಸಮ.

ತೆರಿಗೆ ಸಂಸ್ಥೆ ವಾದ ಏನು?:

ಐಜಿಎಸ್ಟಿ ನಿಯಮಗಳ ಅನ್ವಯ, ಇನ್ಫೋಸಿಸ್‌ ತನ್ನ ವಿದೇಶಿ ಶಾಖೆಗಳ ಮೂಲಕ ನಿರ್ವಹಿಸಿದ ಸೇವೆಯನ್ನು ಮೂಲ ಕಂಪನಿಯ ಮೂಲಕ ನೀಡಿದ ಸೇವೆ ಎಂದೇ ಪರಿಗಣಿಸಲಾಗುತ್ತದೆ. ಆರ್‌ಸಿಎಂ (ರಿವರ್ಸ್‌ ಚಾರ್ಜ್‌ ಮೆಕಾನಿಸಂ) ಅನ್ವಯ, ಸೇವೆ ನೀಡಿದವರ ಬದಲಾಗಿ, ಸೇವೆ ಸ್ವೀಕರಿಸಿದವರು ತೆರಿಗೆ ಪಾವತಿಸಬೇಕಿದೆ. ಜೊತೆಗೆ ಇನ್ಫೋಸಿಸ್‌ ತನ್ನ ವಿದೇಶಿ ಶಾಖೆಗಳ ವೆಚ್ಚವನ್ನು ರಫ್ತು ಇನ್ವಾಯ್ಸ್‌ ಮೂಲಕ ರೀಫಂಡ್‌ಗೆ ಬಳಸಿಕೊಂಡಿದೆ. ಹೀಗಾಗಿ ನಿಯಮಗಳ ಉಲ್ಲಂಘನೆ ಕಾರಣಕ್ಕೆ ಕಂಪನಿಗೆ 32403 ಕೋಟಿ ರು. ತೆರಿಗೆ ಪಾವತಿಸುವಂತೆ ನೋಟಿಸ್‌ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಕಡಿಮೆ ದರಕ್ಕೆ ಗರ್ಭಕಂಠದ ಕ್ಯಾನ್ಸರ್ ತಡೆ ಲಸಿಕೆ ನೀಡಿ: ರಾಜ್ಯಸಭೆಯ ತಮ್ಮ ಚೊಚ್ಚಲ ಭಾಷಣದಲ್ಲಿ ಸುಧಾಮೂರ್ತಿ ಮನವಿ

ಆದರೆ ಜುಲೈ 31ರ ರಾತ್ರಿ ಈ ಇನ್ಫೋಸಿಸ್ ಸಂಸ್ಥೆ ಎಕ್ಸ್‌ಚೇಂಜ್ ಫೈಲಿಂಗ್ ಮಾಡಿದೆ ಎಂದು ತಿಳಿದು ಬಂದಿದೆ. ಕಂಪನಿಯು ಹೇಳಿಕೆಯಲ್ಲಿ, ಇನ್ಫೋಸಿಸ್ ಲಿಮಿಟೆಡ್‌ನ ಸಾಗರೋತ್ತರ ಶಾಖೆಯ ಕಚೇರಿ ಮಾಡಿದ ವೆಚ್ಚಗಳಿಗೆ ಜುಲೈ 2017 ರಿಂದ ಮಾರ್ಚ್ 2022 ರ ಅವಧಿಗೆ 32,403 ಕೋಟಿ ರೂ.ಗಳ ಜಿಎಸ್‌ಟಿ ಪಾವತಿಗಾಗಿ ಕರ್ನಾಟಕ ರಾಜ್ಯ ಜಿಎಸ್‌ಟಿ ಅಧಿಕಾರಿಗಳು ಶೋಕಾಸ್ ನೋಟಿಸ್ ನೀಡಿದ್ದಾರೆ. ಕಂಪೆನಿಯು ಪ್ರೀ ಶೋಕಾಸ್ ನೋಟಿಸ್‌ಗೆ ಪ್ರತಿಕ್ರಿಯಿಸಿದೆ ಎಂದು ಪ್ರಕಟಣೆಯಲ್ಲಿ ಇನ್ಫೋಸಿಸ್ ಹೇಳಿದೆ. 

Scroll to load tweet…

Scroll to load tweet…