Asianet Suvarna News Asianet Suvarna News

Omicron Threat: 3ನೇ ಅಲೆ ಅಧಿಕೃತ: 75% ಕೇಸ್‌ ಒಮಿಕ್ರೋನ್‌!

ವಿಶ್ವದಾದ್ಯಂತ ಭಾರೀ ಆತಂಕ ಹುಟ್ಟುಹಾಕಿರುವ ರೂಪಾಂತರಿ ಕೊರೋನಾ

3ನೇ ಅಲೆ ಅಧಿಕೃತ: 75% ಕೇಸ್‌ ಒಮಿಕ್ರೋನ್‌!

ಮಕ್ಕಳ ಲಸಿಕೆಗೆ ಆತಂಕ ಬೇಡ

Third Wave On 75pc Cases In Metros Are Omicron Covid Task Force Boss pod
Author
Bangalore, First Published Jan 4, 2022, 5:07 AM IST

ನವದೆಹಲಿ(ಜ.04): ವಿಶ್ವದಾದ್ಯಂತ ಭಾರೀ ಆತಂಕ ಹುಟ್ಟುಹಾಕಿರುವ ರೂಪಾಂತರಿ ಕೊರೋನಾ ವೈರಸ್‌ (Coronavirus) ಒಮಿಕ್ರೋನ್‌ (Omicron), ಇದೀಗ ಭಾರತದಲ್ಲೂ 3ನೇ ಅಲೆಗೆ (Third Wave) ಕಾರಣವಾಗಿದೆ. ದೇಶದಲ್ಲಿ ಈಗಾಗಲೇ 3ನೇ ಅಲೆ ಆರಂಭವಾಗಿದೆ ಎಂದು ರಾಷ್ಟ್ರೀಯ ಲಸಿಕಾ ಕಾರ್ಯಪಡೆ (National Vaccination Taskforce) ಅಧ್ಯಕ್ಷ ಎನ್‌.ಕೆ.ಅರೋರಾ ಹೇಳಿದ್ದಾರೆ. ಈ ಮೂಲಕ ದೇಶದಲ್ಲಿ ಕೋವಿಡ್‌ 3ನೇ ಅಲೆಯ ಅಧಿಕೃತ ಸುದ್ದಿ ಹೊರಬಿದ್ದಂತಾಗಿದೆ.

ಒಮಿಕ್ರೋನ್‌ ಮತ್ತೊಂದು ಅಲೆಗೆ ಕಾರಣವಾಗಬಲ್ಲದು ಎಂದು ಹಲವು ವಿಜ್ಞಾನಿಗಳು, ತಜ್ಞರು ಹೇಳಿದ್ದರಾದರೂ ಈಗಾಗಲೇ 3ನೇ ಆರಂಭವಾಗಿದೆ ಎಂದು ಹಿರಿಯ ತಜ್ಞ ವೈದ್ಯರೊಬ್ಬರು ಇದೇ ಮೊದಲ ಬಾರಿಗೆ ಹೇಳಿರುವ ಕಾರಣ ಅದು ಮಹತ್ವ ಪಡೆದುಕೊಂಡಿದೆ. ಡಾ.ಅರೋರಾ ಅವರ ಈ ಹೇಳಿಕೆ, ಶೀಘ್ರವೇ ಹಲವು ರಾಜ್ಯಗಳಲ್ಲಿ ಸೋಂಕು ನಿಯಂತ್ರಣಕ್ಕೆ ಇನ್ನಷ್ಟುಕಠಿಣ ಕ್ರಮಗಳ ಜಾರಿಗೆ ಮುನ್ನುಡಿ ಬರೆಯಬಹುದು ಎಂದು ವಿಶ್ಲೇಷಿಸಲಾಗಿದೆ.

Omicron Less Severe: ಒಮಿಕ್ರೋನ್‌ ಗಂಟಲಿಗಷ್ಟೇ ಇಳಿಯುತ್ತೆ, ಶ್ವಾಸಕೋಶಕ್ಕಲ್ಲ!

"

ಭಾರೀ ಕೇಸು ಹೆಚ್ಚಳ:

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಡಾ.ಎನ್‌.ಕೆ.ಅರೋರಾ, ‘ಭಾರತದಲ್ಲಿ ಒಮಿಕ್ರೋನ್‌ ಮೊದಲ ಬಾರಿಗೆ ಪತ್ತೆಯಾಗಿದ್ದು ಡಿಸೆಂಬರ್‌ ಮೊದಲ ವಾರದಲ್ಲಿ. ಕಳೆದ ವಾರ ದೇಶಾದ್ಯಂತ ನಡೆಸಲಾದ ಜಿನೋಮ್‌ ಸೀಕ್ವೆನ್ಸಿಂಗ್‌ನಲ್ಲಿ ಒಮಿಕ್ರೋನ್‌ ಪಾಲು ಶೇ.12ಕ್ಕೆ ಏರಿತ್ತು. ನಂತರದ ವಾರದಲ್ಲಿ ಅದರ ಪ್ರಮಾಣ ಶೇ.28ನ್ನು ತಲುಪಿದೆ. ಅಂದರೆ ಕೋವಿಡ್‌ ಸೋಂಕಿತರ ಪ್ರಮಾಣ ಹೆಚ್ಚಿದಂತೆ ಅವರಲ್ಲಿ ಒಮಿಕ್ರೋನ್‌ನಿಂದಾಗಿ ಸೋಂಕಿಗೆ ತುತ್ತಾದವರ ಪ್ರಮಾಣವೂ ಹೆಚ್ಚಾಗಿದೆ. ಇನ್ನು ದೇಶದಲ್ಲಿ ಒಟ್ಟಾರೆ ಪತ್ತೆಯಾದ ಒಮಿಕ್ರೋನ್‌ ಪ್ರಕರಣಗಳಲ್ಲಿ ಶೇ.75ರಷ್ಟುಪಾಲು ಮೆಟ್ರೋ ನಗರಗಳಾದ ದೆಹಲಿ, ಮುಂಬೈ ಮತ್ತು ಕೋಲ್ಕತಾಕ್ಕೆ ಸೇರಿವೆ’ ಎಂದಿದ್ದಾರೆ.

‘ಈ ಎಲ್ಲಾ ಅಂಶಗಳು ಸ್ಪಷ್ಟವಾಗಿ ದೇಶ 3ನೇ ಅಲೆಗೆ ತುತ್ತಾಗಿದೆ ಎಂಬುದನ್ನು ಹೇಳುತ್ತಿವೆ. ಜೊತೆಗೆ ಈ ಅಲೆಗೆ ಹೊಸ ಮಾದರಿಯಾದ ಒಮಿಕ್ರೋನ್‌ ಕಾರಣ ಎಂಬುದೂ ಸಾಬೀತಾಗಿದೆ. ಕಳೆದ 4-5 ದಿನಗಳ ಹೊಸ ಕೇಸಿನ ಅಂಕಿ ಅಂಶಗಳು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ’ ಎಂದು ಅರೋರಾ ಹೇಳಿದ್ದಾರೆ.

Covid Threat: '1 ತಿಂಗಳಲ್ಲಿ ರಾಜ್ಯದಲ್ಲಿ ಸೋಂಕಿನ ಅಬ್ಬರ: ಲಾಕ್ಡೌನ್‌ ಮಾಡದಿದ್ದರೆ ನಿತ್ಯ 50,000 ಕೇಸ್‌'

ಮಕ್ಕಳ ಲಸಿಕೆಗೆ ಆತಂಕ ಬೇಡ:

ಈ ನಡುವೆ ಅವಧಿ ಮುಕ್ತಾಯವಾಗಿರುವ ಲಸಿಕೆಯನ್ನು ಮಕ್ಕಳಿಗೆ ನೀಡುತ್ತಿರುವುದರಿಂದ ಅದರಿಂದ ತೊಂದರೆಯಾಗಬಹುದು ಎಂಬ ಆತಂಕದ ಬಗ್ಗೆಯೂ ಸ್ಪಷ್ಟನೆ ನೀಡಿರುವ ಡಾ.ಅರೋರಾ, ಇಂಥ ಯಾವುದೇ ಆತಂಕ ಬೇಡ. ಲಸಿಕೆ ತಯಾರಿಸಿದ ಆರಂಭದಲ್ಲಿ ಆ ಸಮಯಕ್ಕಷ್ಟೇ ಅದರ ಅವಧಿಯನ್ನು ಸೀಮಿತಗೊಳಿಸಲಾಗಿತ್ತು. ನಂತರ ಅದನ್ನು ವಿವಿಧ ಹಂತದಲ್ಲಿ ಪ್ರಯೋಗಕ್ಕೆ ಒಳಪಡಿಸಿದಂತೆ ಅದರ ಅವಧಿ (ಎಕ್ಸ್‌ಪೈರಿ)ಯನ್ನೂ ವಿಸ್ತರಣೆ ಮಾಡಿಕೊಂಡು ಬರಲಾಗುತ್ತಿದೆ. ಈಗಿನ ಸಂಶೋಧನೆಗಳ ಪ್ರಕಾರ ಲಸಿಕೆಗಳು 12 ತಿಂಗಳ ಅವಧಿಯನ್ನು ಹೊಂದಿವೆ. ಹೀಗಾಗಿ ಮಕ್ಕಳಿಗೆ ನೀಡುತ್ತಿರುವ ಲಸಿಕೆ ಬಗ್ಗೆ ಯಾವುದೇ ಕಳವಳ ಬೇಡ. ಅವು ಪೂರ್ಣ ಸುರಕ್ಷಿತ ಎಂದು ಭರವಸೆ ನೀಡಿದ್ದಾರೆ.

 ಒಮಿಕ್ರೋನ್‌ ಗಂಟಲಿಗಷ್ಟೇ ಇಳಿಯುತ್ತೆ, ಶ್ವಾಸಕೋಶಕ್ಕಲ್ಲ!

ಕೊರೋನಾ ಡೆಲ್ಟಾರೂಪಾಂತರಿಗೆ ಹೋಲಿಸಿದರೆ ಒಮಿಕ್ರೋನ್‌ ರೂಪಾಂತರಿಯು ಶ್ವಾಸಕೋಶಕ್ಕೆ ಹೆಚ್ಚು ಹಾನಿ ಮಾಡುವುದಿಲ್ಲ. ಹೀಗಾಗಿ ಆಸ್ಪತ್ರೆ ದಾಖಲಾತಿಗಳು ಕಡಿಮೆ ಇರಲಿವೆ ಎಂದು ವಂಶವಾಹಿ ಪರೀಕ್ಷೆಗಳ ಸರ್ವೇಕ್ಷಣಾ ಸಮಿತಿ ಸದಸ್ಯ ಡಾ.ವಿಶಾಲ್‌ ರಾವ್‌ ತಿಳಿಸಿದ್ದಾರೆ.

ಸೋಮವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಹಾಂಕಾಂಗ್‌ ವಿಶ್ವವಿದ್ಯಾಲಯವು ಒಮಿಕ್ರೋನ್‌ ಹರಡುವ ಮತ್ತು ದೇಹದ ಮೇಲೆ ಪ್ರಭಾವ ಬೀರುವ ಕುರಿತು ಅಧ್ಯಯನ ನಡೆಸಿದೆ. ಡೆಲ್ಟಾಗೆ ಹೋಲಿಸಿದರೆ ಒಮಿಕ್ರೋನ್‌ ಹರಡುವಿಕೆ ಪ್ರಮಾಣ 70 ಪಟ್ಟು ಹೆಚ್ಚಿದೆ. ಆದರೆ, ಶಾಸಕೋಶ ಹಾನಿ ಪ್ರಮಾಣ ಸಾಕಷ್ಟುಕಡಿಮೆ ಇದೆ. ಡೆಲ್ಟಾದಲ್ಲಿ ಶೇ. 17 ರಷ್ಟುಮಂದಿಗೆ ಶ್ವಾಸಕೋಶಕ್ಕೆ ಹಾನಿಯಾಗಿ, ಆಕ್ಸಿಜನ್‌ ಹಾಸಿಗೆ ಅಗತ್ಯವಿದ್ದರೆ, ಒಮಿಕ್ರೋನ್‌ನಲ್ಲಿ ಶೇ.5ರಷ್ಟುಮಂದಿಗೆ ಮಾತ್ರ ಆಕ್ಸಿಜನ್‌ ಹಾಸಿಗೆ ಅಗತ್ಯವಿರುತ್ತದೆ. ಹೀಗಾಗಿ, ಸಾವು- ನೋವಿನ ಪ್ರಮಾಣ ಕಡಿಮೆ ಇರಲಿದೆ ಎಂದು ತಿಳಿಸಿದರು.

Follow Us:
Download App:
  • android
  • ios