ಭಾರಿ ಬಿಗಿ ಭದ್ರತೆ ಇರುವ ಅಯೋಧ್ಯೆಯ ರಾಮಪಥದಲ್ಲೇ ಕಂಬ ಸಹಿತ 3,800 ಬೀದಿ ದೀಪಗಳನ್ನು ಎಗರಿಸಿದ ಕಳ್ಳರು
ತೀವ್ರ ಬಿಗಿ ಭದ್ರತೆ ಇರುವ ರಾಮನಗರಿ ಅಯೋಧ್ಯೆಯಲ್ಲಿ ಪೊಲೀಸರಿಗೆ ಈಗ ಹೊಸ ತಲೆನೋವು ಶುರುವಾಗಿದೆ. ಅಯೋಧ್ಯೆಯ ಭಕ್ತಿಪಥ ಹಾಗೂ ರಾಮಪಥದಲ್ಲಿ ಹಾಕಲಾಗಿದ್ದ ಲಕ್ಷಾಂತರ ಮೌಲ್ಯದ ಬಿದಿರು ಹಾಗೂ ಪ್ರಾಜೆಕ್ಟರ್ ಲೈಟ್‌ಗಳು ಇದ್ದಕ್ಕಿದ್ದಂತೆ ಮಾಯವಾಗಿವೆ.
ಅಯೋಧ್ಯೆ: ತೀವ್ರ ಬಿಗಿ ಭದ್ರತೆ ಇರುವ ರಾಮನಗರಿ ಅಯೋಧ್ಯೆಯಲ್ಲಿ ಪೊಲೀಸರಿಗೆ ಈಗ ಹೊಸ ತಲೆನೋವು ಶುರುವಾಗಿದೆ. ಅಯೋಧ್ಯೆಯ ಭಕ್ತಿಪಥ ಹಾಗೂ ರಾಮಪಥದಲ್ಲಿ ಹಾಕಲಾಗಿದ್ದ ಲಕ್ಷಾಂತರ ಮೌಲ್ಯದ ಬಿದಿರು ಹಾಗೂ ಪ್ರಾಜೆಕ್ಟರ್ ಲೈಟ್‌ಗಳು ಇದ್ದಕ್ಕಿದ್ದಂತೆ ಮಾಯವಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಎಫ್ಐಆರ್ ದಾಖಲಾಗಿದೆ. 3,800 ಬಿದಿರುಗಳು ಹಾಗೂ 36 ಪ್ರಾಜೆಕ್ಟರ್ ಲೈಟ್‌ಗಳನ್ನು ಕಳ್ಳರು ಎಗರಿಸಿದ್ದು, ಇವುಗಳ ಒಟ್ಟು ಮೌಲ್ಯ 50 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ. ಹಿಂದೂ ತೀರ್ಥಕ್ಷೇತ್ರವಾಗಿದ್ದು, ಭಾರಿ ಬಿಗಿ ಭದ್ರತೆಯನ್ನು ಹೊಂದಿರುವ ಅಯೋಧ್ಯೆಯಲ್ಲೇ ಇಂತಹ ಕಳವು ಪ್ರಕರಣ ನಡೆದಿದ್ದು, ಅಚ್ಚರಿಗೆ ಕಾರಣವಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಆಗಸ್ಟ್ 9 ರಂದು ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಯೋಧ್ಯೆ ಅಬಿವೃದ್ಧಿ ಪ್ರಾಧಿಕಾರದಿಂದ ರಾಮಪಥ್ ಹಾಗೂ ಭಕ್ತಿಪಥದಲ್ಲಿ ಲೈಟಿಂಗ್ಸ್ ಹಾಕುವುದಕ್ಕೆ ಗುತ್ತಿಗೆ ಪಡೆದಿದ್ದ, ಯಶ್ ಎಂಟರ್‌ಪ್ರೈಸಸ್ ಹಾಗೂ ಕೃಷ್ಣ ಅಟೋಮೊಬೈಲ್ಸ್ ಸಂಸ್ಥೆ ಅಯೋಧ್ಯೆ ಪೊಲೀಸರಿಗೆ ದೂರು ನೀಡಿದೆ. ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವಂತೆ ಈ ಸಂಸ್ಥೆಗೆ ಮೇ ತಿಂಗಳಲ್ಲೇ ಈ ಕಳ್ಳತನ ಪ್ರಕರಣ ಗಮನಕ್ಕೆ ಬಂದಿದ್ದು, ಈಗ ಆಗಸ್ಟ್ 9 ರಂದು ದೂರು ದಾಖಲಿಸಿದೆ.
ಅಯೋಧ್ಯೆ ಮಸೀದಿ ಜಮೀನು ನನ್ನದು ಎಂದು ಮಹಿಳೆ ದೂರು, ಸುಪ್ರೀಂ ಕೋರ್ಟಿಗೆ ಹೋಗಲು ನಿರ್ಧಾರ
ಈ ರಾಮಪಥದಲ್ಲಿ ಒಟ್ಟು 6,400 ಬಿದಿರು ಕಂಬದ ಲೈಟ್‌ಗಳನ್ನು ಅಳವಡಿಸಲಾಗಿತ್ತು. ಹಾಗೂ 96 ಪ್ರಾಜೆಕ್ಟರ್ ಲೈಟ್‌ಗಳನ್ನು ಭಕ್ತಿಪಥದಲ್ಲಿ ಅಳವಡಿಸಲಾಗಿತ್ತು. ಮಾರ್ಚ್ 19ರವರೆಗೆ ಅಲ್ಲಿ ಎಲ್ಲಾ ಲೈಟ್‌ಗಳಿದ್ದವು. ಆದರೆ ಮೇ 9 ರಂದು ಪರಿಶೀಲನೆ ಮಾಡಿದಾಗ ಅವುಗಳಲ್ಲಿ ಕೆಲ ಲೈಟ್‌ಗಳು ಮಿಸ್ ಆಗಿರುವುದು ಗಮನಕ್ಕೆ ಬಂದಿತ್ತು. ಇದುವರೆಗೆ ಇಲ್ಲಿಂದ ಒಟ್ಟು 3,800 ಬಿದಿರು ಲೈಟ್‌ಗಳನ್ನು ಹಾಗೂ ಒಟ್ಟು 36 ಪ್ರಾಜೆಕ್ಟರ್‌ಗಳನ್ನು ಅಪರಿಚಿತ ಕಳ್ಳರು ಕದ್ದು ಹೊತ್ತೊಯ್ದಿದ್ದಾರೆ ಎಂದು ಈ ದೀಪಗಳನ್ನು ಅಳವಡಿಸಿದ ಸಂಸ್ಥೆಯ ಪ್ರತಿನಿಧಿ ಶೇಖರ್ ಶರ್ಮಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಯೋಧ್ಯೆ ಬಾಲ ರಾಮನ ವಿಶ್ವದ ಮೊಟ್ಟ ಮೊದಲ ಅಂಚೆ ಚೀಟಿ ಲಾವೋಸ್‌ನಲ್ಲಿ ಬಿಡುಗಡೆ!
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೂ ಮೊದಲು ರಾಮನಗರಿ ಅಯೋಧ್ಯೆಯಲ್ಲಿ ಭಾರಿ ಬದಲಾವಣೆಯಾಗಿದೆ. ರೈಲು ನಿಲ್ದಾಣದಿಂದ ಹಿಡಿದು ವಿಮಾನ ನಿಲ್ದಾಣದವರೆಗೆ ಅಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇದಾದ ನಂತರ ಜನವರಿ 22 ರಂದು ರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದರು. ಈಗ ಅಲ್ಲಿ ನಿತ್ಯವೂ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ರಾಮಲಲ್ಲಾನ ದರ್ಶನ ಪಡೆಯುತ್ತಾರೆ.
ಅಯೋಧ್ಯೆ ಸೇರಿ ಉತ್ತರ ಪ್ರದೇಶದಲ್ಲಿ ಹೀನಾಯ ಸೋಲಿಗೆ ಕಾರಣ ಹುಡುಕಿದ ಬಿಜೆಪಿ., ಸೀಕ್ರೆಟ್ ರಿಪೋರ್ಟ್ ಸಲ್ಲಿಕೆ!