ರಾಮಮಂದಿರ ನಿರ್ಮಾಣ ಮಾಡಿದ ಸ್ಥಳ ಅಯೋಧ್ಯೆಯ ಲೋಕಸಭಾ ಕ್ಷೇತ್ರ ಫೈಜಾಬಾದ್ ಸೇರಿದಂತೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಹೀನಾಯವಾಗಿ ಸೋತಿರುವುದಕ್ಕೆ ಕಾರಣ ಪತ್ತೆ ಮಾಡಲಾಗಿದ್ದು, ಹೈಕಮಾಂಡ್‌ಗೆ ರಹಸ್ಯ ವರದಿಯನ್ನು ಸಲ್ಲಿಕೆ ಮಾಡಿದೆ.

ನವದೆಹಲಿ (ಜು.19): ರಾಮಮಂದಿರ ನಿರ್ಮಾಣ ಮಾಡಿದ ಸ್ಥಳ ಅಯೋಧ್ಯೆಯ ಲೋಕಸಭಾ ಕ್ಷೇತ್ರ ಫೈಜಾಬಾದ್ ಸೇರಿದಂತೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಹೀನಾಯವಾಗಿ ಸೋತಿರುವುದಕ್ಕೆ ಕಾರಣ ಪತ್ತೆ ಮಾಡಲಾಗಿದ್ದು, ಹೈಕಮಾಂಡ್‌ಗೆ ರಹಸ್ಯ ವರದಿಯನ್ನು ಸಲ್ಲಿಕೆ ಮಾಡಿದೆ.

ಉತ್ತರ ಪ್ರದೇಶ ಬಿಜೆಪಿ ಪಾಳಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಈಗಾಗಲೇ ದೆಹಲಿ ನಾಯಕರನ್ನ ಭೇಟಿ ಮಾಡುವ ಮಟ್ಟಿಗೆ ತಲುಪಿದೆ. ಮೊನ್ನೆಯಷ್ಟೇ ಜೆ.ಪಿ ನಡ್ಡಾ ಅವರನ್ನ ಪ್ರತ್ಯೇಕವಾಗಿ ಭೇಟಿ ಮಾಡಿದ್ದ ಡಿಸಿಎಂ ಕೇಶವ ಪ್ರಸಾದ್ ಮೌರ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ, ತಮ್ಮದೇ ಆದ ವಾದವನ್ನ ಹೈಕಮಾಂಡ್ ಮುಂದೆ ಇಟ್ಟಿದ್ದರು. ಇಬ್ಬರು ಕೂಡ ಇತ್ತೀಚೆಗೆ ಆದ ಲೋಕಸಭಾ ಚುನಾವಣಾ ಸೋಲಿನ ಬಗ್ಗೆ ನಡ್ಡಾ ಜೊತೆ ಚರ್ಚೆ ಮಾಡಿದ್ದಾರೆ.ಆದ್ರೆ ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ, ಉತ್ತರ ಪ್ರದೇಶ ಸೋಲಿನ ಬಗ್ಗೆ ಸೀಕ್ರೆಟ್ ವರದಿಯೊಂದನ್ನ ಹೈಕಮಾಂಡ್‌ಗೆ ನೀಡಿದ್ದಾರೆ. 15 ಪುಟಗಳ ವರದಿಯಲ್ಲಿ ಉತ್ತರ ಪ್ರದೇಶದ ಹಿನ್ನಡೆಗೆ ಕಾರಣವನ್ನ ಪಟ್ಟಿ ಮಾಡಿದ್ದಾರೆ.

ಅಯ್ಯೋ...! ಈ ಬಾರಿಯೂ ಶಾಸಕ ಪ್ರದೀಪ್ ಈಶ್ವರ್‌ಗೆ ಮಾತನಾಡಲು ಅವಕಾಶ ಕೊಡದ ಸ್ಪೀಕರ್!

ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 7 ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 80 ಕ್ಷೇತ್ರಗಳ ಪೈಕಿ ಕೇವಲ 33 ಸ್ಥಾನಗಳನ್ನ ತನ್ನದಾಗಿಸಿಕೊಂಡಿತ್ತು. I.N.D.I.A ಕೂಟ 43 ಸ್ಥಾನಗಳನ್ನ ಗೆಲ್ಲುವ ಮೂಲಕ ಬಿಜೆಪಿಗೆ ಈ ಬಾರಿ ಬಹುಮತ ಸಿಗದಂತೆ ಬ್ರೇಕ್ ಹಾಕಿತ್ತು. ಈ ಬಾರಿ ವಿಪಕ್ಷಗಳ ಯಾವ ಮಟ್ಟಿಗೆ ಫೈಟ್ ಕೊಟ್ಟಿದ್ದವು ಎಂದರೆ, ರಾಮ ಮಂದಿರ ನಿರ್ಮಿಸಲಾಗಿದ್ದ ಫೈಜಾಬಾದ್ ಲೋಕಸಭಾ ಕ್ಷೇತ್ರವನ್ನೇ ಬಿಜೆಪಿ ನಾಯಕರು ಗೆಲ್ಲೋಕೆ ಸಾಧ್ಯವಾಗಿರಲಿಲ್ಲ. ಇದು ಯುಪಿ ಬಿಜೆಪಿ ನಾಯಕರನ್ನ ಮಾತ್ರವಲ್ಲ. ಹೈಕಮಾಂಡ್ ನಾಯಕರು ಚಿಂತೆಗೀಡು ಮಾಡುವಂತೆ ಮಾಡಿದ್ದವು. ಇದಕ್ಕೆಲ್ಲಾ ಕಾರಣ ಹುಡುಕಿರುವ ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ, ಸೀಕ್ರೆಟ್ ವರದಿಯೊಂದನ್ನ ಸಿದ್ಧಪಡಿಸಿ ಹೈಕಮಾಂಡ್‌ಗೆ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲಿಗೆ ಕೊಟ್ಟ ಕಾರಣಗಳು ಇಲ್ಲಿವೆ ನೋಡಿ..

  • ರಾಜಕೀಯ ಕಾರಣಗಳು...,
  • ಕಾರಣ 1: ಈ ಬಾರಿ ಕುರ್ಮಿ, ಮೌರ್ಯ ಸಮುದಾಯ ಬಿಜೆಪಿಗೆ ಬೆಂಬಲಿಸಿಲ್ಲ.
  • ಕಾರಣ 2: ಕಳೆದ ಚುನಾವಣೆಗೆ ಹೋಲಿಸಿದ್ರೆ ಶೇ.8ರಷ್ಟು ಮತ ಕುಸಿತವಾಗಿದೆ. 
  • ಕಾರಣ 3: ಬಿಎಸ್​ಪಿ ಮತ ಪ್ರಮಾಣದಲ್ಲಿಯೂ ಶೇ.10ರಷ್ಟು ಕುಸಿತವಾಗಿದೆ.
  • ಕಾರಣ 4 : ದಲಿತರ 3ನೇ ಒಂದರಷ್ಟು ಮತಗಳನ್ನ ಮಾತ್ರ ಬಿಜೆಪಿ ಪಡೆದುಕೊಂಡಿದೆ.
  • ಕಾರಣ 5 : ಅಧಿಕಾರಿಗಳ ವರ್ತನೆ ಸರ್ಕಾರ, ಪಕ್ಷದ ಮೇಲೆ ಪರಿಣಾಮ ಬೀರಿದೆ.
  • ಕಾರಣ 6: ಎಲ್ಲರಿಗಿಂತ ಮೊದಲೇ ಟಿಕೆಟ್ ಘೋಷಣೆ ಮಾಡಿದ್ದು ತಪ್ಪಾಗಿದೆ..!
  • ಕಾರಣ 7: ಟಿಕೆಟ್ ಸಿಗದವರು ಪ್ರಚಾರದಿಂದ ಸಂಪೂರ್ಣವಾಗಿ ದೂರವಾದ್ದರು.
  • ಕಾರಣ 8: ಅಗತ್ಯಕ್ಕಿಂತ ಮೊದಲೇ ಬಿಜೆಪಿ ಪ್ರಚಾರಗಳು ಮುಗಿದು ಹೋಗಿದ್ದವು.

ಡಿಕೆಶಿ 2 ಬಾರಿ ನನ್ನ ಜೊತೆಗಿದ್ದೇ ಸೋಲಿಸಿದ್ರು, ಈಗ ಒಂದು ಸೋಲಿಗೆ ಹತಾಶರಾದರೆ ಹೇಗೆ: ನಿಖಿಲ್ ಕುಮಾರಸ್ವಾಮಿ

ಉತ್ತರ ಪ್ರದೇಶದಲ್ಲಿ ಬಿಜೆಪಿ ಮೇಲೆ ಜನ ಕೋಪಗೊಳ್ಳಲು ಕಾರಣಗಳೇನು?
ಕಾರಣ 1: ಸರ್ಕಾರಿ ಹುದ್ದೆಗಳ ಪರೀಕ್ಷೆ ಪೇಪರ್​ ಪದೇ ಪದೇ ಲೀಕ್ ಆಗಿರುವುದು.
ಕಾರಣ 2: ಅಗ್ನಿಪಥ್ ಯೋಜನೆ ವಿರುದ್ಧ ಯುಪಿಯಲ್ಲಿ ಅಸಮಾಧಾನ..!
ಕಾರಣ 3 : ಬಿಜೆಪಿ ನಾಯಕರ ಸಂವಿಧಾನ ಬದಲಾವಣೆ ಹೇಳಿಕೆಗಳಿಂದ ಜನರಿಗೆ ಬೇಸರ. 
ಕಾರಣ 4 : ಹಳೇ ಪಿಂಚಣಿ ಯೋಜನೆಗೆ ರಾಜ್ಯ ಸರ್ಕಾರ ಬೆಂಬಲ ನೀಡಲಿಲ್ಲ. 
ಕಾರಣ 5 : ಸರ್ಕಾರದ ಕಾರ್ಯವೈಖರಿ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೆ ಬೇಸರವಾಗಿದೆ. 

ಸದ್ಯ ಲೋಕಸಭೆ ಸೋಲಿನ ಬಗ್ಗೆ ವರದಿ ತರಿಸಿಕೊಂಡಿರುವ ಬಿಜೆಪಿ ಹೈಕಮಾಂಡ್, ಶೀಘ್ರದಲ್ಲೇ ನಡೆಯಲಿರುವ ಉತ್ತರ ಪ್ರದೇಶ ಬೈ ಎಲೆಕ್ಷನ್ ಫಲಿತಾಂಶ ನೋಡಿಕೊಂಡು ಒಂದಷ್ಟು ಬದಲಾವಣೆ ಮಾಡೋ ಲೆಕ್ಕಾಚಾರದಲ್ಲಿದೆ.. ಸಿಎಂ ಯೋಗಿ ವಿರುದ್ಧ ಸಿಡಿದೆದ್ದಿರೋ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಅವರನ್ನೇ ಡಿಸಿಎಂ ಬದಲು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬಹುದು ಎಂಬ ಚರ್ಚೆ ಪಕ್ಷದ ವಲಯದಲ್ಲಿ ಶುರುವಾಗಿದೆ.
ವರದಿ - ಶಿವರಾಜ್ ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್