Asianet Suvarna News Asianet Suvarna News

ಹೊಸ ವರ್ಷ: ಕೆಲವು ಮೊಬೈಲ್‌ಗಳಲ್ಲಿ ವಾಟ್ಸಪ್‌ ಸ್ಥಗಿತ, ಇಂದಿನಿಂದ ಏನೇನು ಬದಲಾಗುತ್ತೆ...? ಇಲ್ಲಿ ನೋಡಿ

ಇಂದು ಜನವರಿ 1. ಇಂದಿನಿಂದ 2021ನೇ ವರ್ಷ ಆರಂಭ. ಈ ದಿನ ಕ್ಯಾಲೆಂಡರ್‌ ಅಷ್ಟೇ ಅಲ್ಲ ನಿಮ್ಮ ದೈನಂದಿನ ಜೀವನದಲ್ಲಿ ಕೆಲವು ಬದಲಾವಣೆಗಳು ಆಗಲಿವೆ. ಆ ಬದಲಾವಣೆಗಳು ಯಾವುವು? ಇಲ್ಲಿದೆ ಮಾಹಿತಿ..

these are the Things changing in 2021 check out here dpl
Author
Bangalore, First Published Jan 1, 2021, 6:56 AM IST

1. ಲ್ಯಾಂಡ್‌ಲೈನ್‌ನಿಂದ ಕರೆ ಮಾಡಲು ‘0’ ಒತ್ತಿ

ಸ್ಥಿರ ದೂರವಾಣಿಯಿಂದ ಮೊಬೈಲ್‌ ಸಂಖ್ಯೆಗೆ ಕರೆ ಮಾಡುವ ಮುನ್ನ ‘0’ ಒತ್ತುವ ಕ್ರಮ ಇಂದಿನಿಂದ ಜಾರಿ ಆಗಲಿದೆ. ಮೊಬೈಲ್‌ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್‌ಗೆ ಹೆಚ್ಚಿನ ನಂಬರ್‌ಗಳು ಲಭ್ಯವಾಗುವಂತೆ ಮÞಡಲು ಈ ಕ್ರಮವನ್ನು ಜಾರಿ ಮಾಡಲಾಗುತ್ತಿದೆ.

2. ಚೆಕ್‌ನ ಮಾಹಿತಿ ಬ್ಯಾಂಕಿಗೆ ನೀಡಬೇಕು

ಚೆಕ್‌ ಮೂಲಕ ಹಣ ಪಾವತಿಗೆ ಆರ್‌ಬಿಐ ಜ.1ರಿಂದ ಹೊಸ ನಿಯಮವನ್ನು ಜಾರಿಗೊಳಿಸಿದೆ. ಪಾಸಿಟಿವ್‌ ಪೇ ಸಿಸ್ಟಂ ಎಂಬ ವ್ಯವಸ್ಥೆಯ ಅಡಿಯಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಚೆಕ್‌ ನೀಡುವವರು ತಮ್ಮ ಬ್ಯಾಂಕಿಗೆ ಆ ಬಗ್ಗೆ ಮಾಹಿತಿಯನ್ನು ನೀಡುವುದು ಕಡ್ಡಾಯ. ಈ ಮಾಹಿತಿಯನ್ನು ಗ್ರಾಹಕರು ಎಸ್‌ಎಂಎಸ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌ ಹಾಗೂ ಎಟಿಎಂ ಮೂಲಕವೂ ಒದಗಿಸಬಹುದಾಗಿದೆ.

ಅಹಮದಾಬಾದ್‌ನಲ್ಲಿ ಏಕಶಿಲಾ ಪ್ರತಿಮೆಗಳು ಕಂಡು ಮಾಯ..ಅನ್ಯಗ್ರಹ ಜೀವಿಗಳ ಆಟವೇ?

3.ಬೈಕ್‌, ಕಾರುಗಳ ಬೆಲೆ ದುಬಾರಿ

ಹೊಸ ವರ್ಷಕ್ಕೆ ಬೈಕ್‌ ಹಾಗೂ ಕಾರು ಖರೀದಿಸುವ ಯೋಚನೆ ಇದ್ದರೆ ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ. ಏಕೆಂದರೆ ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಝುಕಿ, ಎಂಜಿ ಮೋಟ​ರ್‍ಸ್, ರೆನಾಲ್ಟ್‌, ಮಹಿಂದ್ರಾ ಕಂಪನಿಗಳು ದರವನ್ನು ಏರಿಕೆ ಮಾಡಲಿವೆ. ಜೊತೆಗೆ ದ್ವಿಚಕ್ರವಾಹನಗಳ ದರವೂ ಹೆಚ್ಚಳಗೊಳ್ಳಲಿದೆ.

4. 5000 ರು. ವರೆಗಿನ ವ್ಯವಹಾರಕ್ಕೆ ಪಿನ್‌ ಬೇಕಿಲ್ಲ

ಕಾಂಟಾಕ್ಟ್ಲೆಸ್‌ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಪಿನ್‌ರಹಿತವಾಗಿ ಹಣ ಪಾವತಿಗೆ ಇದ್ದ ಮಿತಿಯನ್ನು ಭಾರತೀಯ ರಿಸವ್‌ರ್‍ ಬ್ಯಾಂಕ್‌ 2000 ರು.ನಿಂದ 5000 ರು.ಗೆ ಏರಿಕೆ ಮಾಡಿದೆ. ಈ ವ್ಯವಸ್ಥೆ ಜ.1ರಿಂದ ಜಾರಿಗೆ ಬರಲಿದ್ದು, ಕೊರೋನಾ ಸಂದರ್ಭದಲ್ಲಿ ಸುರಕ್ಷಿತವಾಗಿ ಹಣ ಪಾವತಿಗೆ ಈ ವ್ಯವಸ್ಥೆ ನೆರವಾಗಲಿದೆ. ಜೊತೆಗೆ ಆರ್‌ಟಿಜಿಎಸ್‌ ವ್ಯವಸ್ಥೆ ದಿನದ 24 ಗಂಟೆ ಲಭ್ಯವಾಗಲಿದೆ.

5. ಸಣ್ಣ ಉದ್ಯಮಿಗಳಿಗೆ ಜಿಎಸ್‌ಟಿ ನಿರಾಳತೆ

ವಾರ್ಷಿಕ 5 ಕೋಟಿ ರು. ವರೆಗಿನ ವ್ಯವಹಾರ ನಡೆಸುವ ಸಣ್ಣ ಉದ್ಯಮಿಗಳು ಹೊಸ ವರ್ಷದಿಂದ ಪ್ರತಿ ತಿಂಗಳು ಜಿಎಸ್‌ಟಿ ವಿವರವನ್ನು ಸರ್ಕಾರಕ್ಕೆ ಸಲ್ಲಿಸಬೇಕಿಲ್ಲ. ಬದಲಾಗಿ ತ್ರೈಮಾಸಿಕಕ್ಕೆ ಒಮ್ಮೆಯಂತೆ ವರ್ಷಕ್ಕೆ ನಾಲ್ಕುಬಾರಿ ಜಿಎಸ್‌ಟಿ ಪಾವತಿ ವಿವರವನ್ನು ಸಲ್ಲಿಸಿದರೆ ಸಾಕು. ಇದರಿಂದ 94 ಲಕ್ಷ ತೆರಿಗೆದಾರರಿಗೆ ಅನುಕೂಲವಾಗಲಿದೆ.

10 ತಿಂಗಳ ಬಳಿಕ ಶಾಲೆ ಶುರು: ವಿದ್ಯಾರ್ಥಿ, ಶಿಕ್ಷಕರು, ಪೋಷಕರು ಗಮನಿಸಬೇಕಾದ ವಿಚಾರಗಳಿವು

6. ಕೆಲವು ಮೊಬೈಲ್‌ಗಳಲ್ಲಿ ವಾಟ್ಸಪ್‌ ಸ್ಥಗಿತ

ಜ.1ರಿಂದ ಕೆಲವೊಂದು ಮೊಬೈಲ್‌ ಫೋನ್‌ಗಳಲ್ಲಿ ವಾಟ್ಸ್‌ಆ್ಯಪ್‌ ಸೇವೆ ಸ್ಥಗಿತಗೊಳ್ಳಲಿದೆ. ಆ್ಯಂಡ್ರಾಯ್ಡ್‌ ಒಎಸ್‌ 4.03, ಐಫೋನ್‌ ಇಒಎಸ್‌ 9 ಹಾಗೂ ಜಿಯೋ ಫೋನ್‌, ಜಿಯೋಫೋನ್‌ 2 ಈ ಫೋನ್‌ಗಳಲ್ಲಿ ಜ.1ರಿಂದ ವಾಟ್ಸ್‌ಆ್ಯಪ್‌ ಕಾರ್ಯನಿರ್ವಹಿಸುವುದಿಲ್ಲ. ಇದಕ್ಕಿಂತ ಹೆಚ್ಚಿನ ಆವೃತ್ತಿಯ ಫೋನ್‌ಗಳಲ್ಲಿ ಮಾತ್ರ ವಾಟ್ಸ್‌ಆ್ಯಪ್‌ ಕಾರ್ಯನಿರ್ವಹಿಸಲಿದೆ.

7. ಟಿವಿ, ಫ್ರಿಜ್‌ಗಳ ಬೆಲೆ ಹೆಚ್ಚಳ

ಮನೆಗಳಲ್ಲಿ ದಿನನಿತ್ಯ ಬಳಸುವ ಟಿವಿ. ಫ್ರಿಜ್‌, ವಾಷಿಂಗ್‌ ಮೆಷಿನ್‌ಗಳ ಬೆಲೆ ಹೊಸವರ್ಷ 2021ರ ಜನವರಿಯಿಂದ ಏರಿಕೆಯಾಗಲಿದೆ. ಈ ಗೃಹೋಪಯೋಗಿ ವಸ್ತುಗಳಲ್ಲಿ ಬಳಸುವ ಅಲ್ಯುಮೀನಿಯಂ, ಸ್ಟೀಲ್‌, ತಾಮ್ರದ ಬೆಲೆ ಬೆಲೆ ಹೆಚ್ಚಳವಾಗಿರುವುದರಿಂದ ಟಿವಿ, ಫ್ರಿಜ್‌ಗಳ ಬೆಲೆ ಶೇ.10ರವರೆಗೆ ಏರಿಕೆಯಾಗಲಿದೆ. ಹೀಗಾಗಿ ಹೊಸದಾಗಿ ಖರೀದಿ ಮಾಡುವವರು ಹೆಚ್ಚಿನ ಹಣ ಪಾವತಿಸಬೇಕು.

Follow Us:
Download App:
  • android
  • ios