ಅಹಮದಾಬಾದ್‌ನಲ್ಲಿ ಏಕಶಿಲಾ ಪ್ರತಿಮೆಗಳು ಕಂಡು ಮಾಯ..ಅನ್ಯಗ್ರಹ ಜೀವಿಗಳ ಆಟವೇ?

ಅಹಮದಾಬಾದ್ ನಲ್ಲಿ ಏಕಶಿಲಾ ಪ್ರತಿಮೆಗಳು/ ಕಾಣಿಸಿಕೊಂಡು ಮಾಐವಾದ ಪ್ರತಿಮೆಗಳು/ ಸೋಶಿಯಲ್ ಮೀಡಿಯಾದಲ್ಲಿಯೂ ಸುದ್ದಿ ವೈರಲ್/ ಅನ್ಯಗ್ರಹದ ಜೀವಿಗಳ ಕೈವಾಡವೇ?

After appearances across the world a monolith turns up in Ahmedabad park mah

ಅಹಮದಾಬಾದ್ (ಡಿ.​ 31) ಈ ಏಕ ಶಿಲಾ ಪ್ರತಿಮೆಗಳು ಅಮೆರಿಕದ ವಿವಿಧೆಡೆ, ನೆದರ್ಲ್ಯಾಂಡ್ ಗಳಲ್ಲಿ ಕಾಣಿಸಿಕೊಂಡು. ಹಾಗೇ ಮಾಯವೂ ಆಗಿದ್ದು ಸುದ್ದಿಯಾಗಿದ್ದವು. ಇದೀಗ ನಮ್ಮ ದೇಶದ ಅಹಮದಾಬಾದ್ ನಿಂದ ಅಂಥದ್ದೇ ಒಂದು ವರದಿ ಬಂದಿದೆ.

ಅನ್ಯ ಗ್ರಹ ಜೀವಿಗಳು ನಮ್ಮ ದೇಶದ ಜನರ ಬುದ್ಧಿವಂತಿಕೆ ತಿಳಿಯಲು ಯತ್ನಿಸುತ್ತಿವೆ ಎನ್ನುವುದು ಈ ಸುದ್ದಿಯ ಇನ್ನೊಂದು ಕೋನ. 

ಹಾರುವ ತಟ್ಟೆಗಳು ಕಾಣಿಸಿಕೊಂಡಿದ್ದವು ಎಂಬುದಕ್ಕೆ ಪುರಾವೆಗಳನ್ನು ಅಮೆರಿಕ ನೀಡುವ ಕೆಲಸ ಮಾಡಿತ್ತು.  ಅಹಮದಾಬಾದ್ ಪಾರ್ಕಿನಲ್ಲಿ ಏಕಶಿಲಾ ಪ್ರತಿಮೆಗಳು ಕಾಣಿಸಿಕೊಂಡು ಮಾಯವಾಗಿವೆ ಎಂದು ಹೇಳಲಾಗಿದ್ದು ಇದ್ದಕ್ಕೆ ಸಂಬಂಧಿಸಿ ಸೋಶಿಯಲ್ ಮೀಡಿಯಾದಲ್ಲಿ ಕೆಲ ಪೋಟೋಗಳು ಹರಿದಾಡಿವೆ.

ಬೆಟ್ಟ ಕುಸಿತಕ್ಕೆ ವೈಜ್ಞಾನಿಕ ಕಾರಣ ಬಹಿರಂಗ?

ಎಷ್ಟು ಪ್ರತಿಮೆಳು ಕಾಣಿಸಿಕೊಂಡು ಮಾಯವಾಗಿವೆ ಎಂಬುದಕ್ಕೆ ಸ್ಪಷ್ಟತೆ ಇಲ್ಲ.  ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಹಮದಾಬಾದ್ ಮುನಸ್ಸಿಪಲ್ ಕಾರ್ಪೋರೇಶನ್ ಅಸಿಸ್ಟಂಟ್ ಡೈರೆಕ್ಟರ್ ದಿಲೀಪ್ ಬಾಯ್ ಪಟೇಲ್,  ಖಾಸಗಿ ಸಂಸ್ಥೆಯೊಂದಕ್ಕೆ ಇಂಥ ಪ್ರತಿಮೆ ನಿರ್ಮಾಣ ಮಾಡುವ  ಜವಾಬ್ದಾರಿ ನೀಡಲಾಗಿದ್ದು ಅದು ಪರೀಕ್ಷಾರ್ಥವಾಗಿ  ಈ ಕೆಲಸ ಮಾಡಿರಬಹುದು ಎಂದು ಹೇಳಿದ್ದಾರೆ.

ಕೆಲ ತಿಂಗಳ ಹಿಂದೆ ಗುಜರಾತ್ ಸಿಎಂ ಇದೇ ಪಾರ್ಕ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದರು.  ಪ್ರಪಂಚದ ಹಲವು ಕಡೆ ಇಂಥಹ ವಿಚಿತ್ರಗಳು ನಡೆಯುತ್ತಿರುವುದಕ್ಕೆ ಅದಕ್ಕೆ ಅಹಮದಾಬಾದ್ ಪ್ರಕರಣವನ್ನು ಲಿಂಕ್ ಮಾಡಲಾಗಿದೆ.

Latest Videos
Follow Us:
Download App:
  • android
  • ios