ಪ್ರಯಾಣಿಕರೇ ಹುಷಾರ್: ರೈಲಲ್ಲಾಗುವ ಕಳ್ಳತನಕ್ಕೆ ರೈಲ್ವೆ ಇಲಾಖೆ ಜವಾಬ್ದಾರಿಯಲ್ಲ ಎಂದ ಸುಪ್ರೀಂಕೋರ್ಟ್
ಕಳುವಾದ ಅವರ ಹಣವನ್ನು ರೈಲ್ವೆಯೇ ನೀಡಬೇಕೆಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ವ್ಯಾಜ್ಯ ಪರಿಹಾರ ಆಯೋಗವು ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ರೈಲ್ವೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಪೀಠವು ಈ ಆದೇಶ ನೀಡಿದೆ.
ನವದೆಹಲಿ (ಜೂನ್ 17, 2023): ರೈಲು ಪ್ರಯಾಣದ ಅವಧಿಯಲ್ಲಿ ಕಳ್ಳತನವಾದರೆ ಅದು ರೈಲ್ವೆ ಇಲಾಖೆಯ ಸೇವೆಯ ಕೊರತೆಯಾಗುವುದಿಲ್ಲ. ಪ್ರಯಾಣಿಕರು ತಮ್ಮ ವಸ್ತುಗಳನ್ನು ತಾವು ಕಾಪಾಡಿಕೊಳ್ಳಲು ಸಾಧ್ಯವಾಗದಿದ್ದರೆ ಸಾರ್ವಜನಿಕ ಸಾರಿಗೆ (ರೈಲ್ವೆ) ಯನ್ನು ಹೊಣೆಯಾಗಿ ಮಾಡಲಾಗುವುದಿಲ್ಲ ಅಥವಾ ಅದು ಕಳ್ಳತನಕ್ಕೆ ಜವಾಬ್ದಾರಿಯಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
2005ರಲ್ಲಿ ಸುಂದರ್ ಭೋಲಾ ಎಂಬ ವ್ಯಕ್ತಿಯೊಬ್ಬರು ರೈಲಿನಲ್ಲಿ ಪ್ರಯಾಣಿಸುವಾಗ ತನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದ ಬಟ್ಟೆಯ ಬೆಲ್ಟ್‌ನಲ್ಲಿ ಇಟ್ಟುಕೊಂಡಿದ್ದ 1 ಲಕ್ಷ ರೂ. ಕಳೆದುಕೊಂಡಿದ್ದರು. ಕಳುವಾದ ಅವರ ಹಣವನ್ನು ರೈಲ್ವೆಯೇ ನೀಡಬೇಕೆಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ವ್ಯಾಜ್ಯ ಪರಿಹಾರ ಆಯೋಗವು ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ರೈಲ್ವೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಆಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ಈ ಆದೇಶ ನೀಡಿದೆ.
ಇದನ್ನು ಓದಿ: ನಾಳೆ ಅಪ್ಪಳಿಸಲಿದೆ ಬಿಪೊರ್‌ಜೊಯ್ ಚಂಡಮಾರುತ: ಗುಜರಾತ್‌ಗೆ ಗಂಡಾಂತರ; 90 ರೈಲು ಸಂಚಾರ ರದ್ದು
ರೈಲಿನಲ್ಲಿ ಪ್ರಯಾಣಿಸುವಾಗ ತನ್ನ ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡು ಸಾಗಿಸುತ್ತಿದ್ದ ₹ 1 ಲಕ್ಷ ನಗದನ್ನು ಕಳೆದುಕೊಂಡಿದ್ದೇನೆ ಎಂದು ಉದ್ಯಮಿಯೊಬ್ಬರು ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ಹಕ್ಕು ಮಂಡಿಸಿದ್ದು, ನಷ್ಟಕ್ಕೆ ರೈಲ್ವೆ ಇಲಾಖೆಯಿಂದ ಮರುಪಾವತಿ ಕೇಳಿದ್ದರು. ಆದರೆ ಈ ಸಂಬಂಧ ತೀರ್ಪು ನೀಡಿದ ಸುಪ್ರೀಂಕೋರ್ಟ್ ಪೀಠ "ಕಳ್ಳತನವು ರೈಲ್ವೆಯ ಸೇವೆಯಲ್ಲಿನ ಕೊರತೆ ಎಂದು ಹೇಗೆ ಹೇಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ವಿಫಲರಾಗಿದ್ದೇವೆ. ಪ್ರಯಾಣಿಕರು ತನ್ನ ಸ್ವಂತ ವಸ್ತುಗಳನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ರೈಲ್ವೆಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ" ಎಂದು ಅಭಿಪ್ರಾಯ ನೀಡಿದೆ.
ಸುರೇಂದರ್ ಭೋಲಾ ಅವರಿಗೆ ₹ 1 ಲಕ್ಷ ಪಾವತಿಸಲು ನಿರ್ದೇಶಿಸಿದ ಎನ್‌ಸಿಡಿಆರ್‌ಸಿ ಆದೇಶದ ವಿರುದ್ಧ ರೈಲ್ವೆ ಇಲಾಖೆ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಸುರೇಂದರ್ ಭೋಲಾ ಅವರು ಏಪ್ರಿಲ್ 27, 2005 ರಂದು ಕಾಶಿ ವಿಶ್ವನಾಥ್ ಎಕ್ಸ್‌ಪ್ರೆಸ್ ಮೂಲಕ ನವದೆಹಲಿಗೆ ಪ್ರಯಾಣಿಸುತ್ತಿದ್ದರು ಮತ್ತು ಕಾಯ್ದಿರಿಸಿದ ಬರ್ತ್ ಅನ್ನು ಆಕ್ರಮಿಸಿಕೊಂಡಿದ್ದರು. ಸೊಂಟಕ್ಕೆ ಕಟ್ಟಿದ್ದ ಬಟ್ಟೆಯಿಂದ ಮಾಡಿದ ಬೆಲ್ಟ್‌ನಲ್ಲಿ ಇಟ್ಟುಕೊಂಡಿದ್ದ ಹಣವನ್ನು ವ್ಯಾಪಾರ ವಹಿವಾಟು ಹೊಂದಿರುವ ಅಂಗಡಿಯವರಿಗೆ ನೀಡಬೇಕಿತ್ತು ಎಂದೂ ಹೇಳಿದರು.
ಇದನ್ನೂ ಓದಿ: ಬೆಂಗಳೂರು, ಮೈಸೂರಿನಿಂದ ಹೊರಡುವ ಟ್ರೈನ್ ಸೇರಿದಂತೆ ಈ 15 ರೈಲುಗಳ ಸೇವೆ ತಾತ್ಕಾಲಿಕ ಸ್ಥಗಿತ
ಅವರು 3:30 AM ಸುಮಾರಿಗೆ ಎಚ್ಚರಗೊಂಡರು ಮತ್ತು ಬೆಲ್ಟ್ ಕಾಣೆಯಾಗಿದೆ ಹಾಗೂ ಅವರ ಪ್ಯಾಂಟ್‌ನ ಬಲಭಾಗದ ಭಾಗವು ಕತ್ತರಿಸಲ್ಪಟ್ಟಿದೆ ಎಂಬುದನ್ನು ಕಂಡುಕೊಂಡರು. ಬಳಿಕ ರೈಲಿನಿಂದ ಇಳಿದ ನಂತರ, ಅವರು ದೆಹಲಿಯ ಸರ್ಕಾರಿ ರೈಲ್ವೆ ಪೊಲೀಸರಿಗೆ (ಜಿಆರ್‌ಪಿ) ಎಫ್‌ಐಆರ್ ದಾಖಲಿಸಿದ್ದರು.
ಇದನ್ನೂ ಓದಿ: ಒಡಿಶಾ ರೈಲು ದುರಂತ: ಗುರುತೇ ಸಿಗದೆ ಅನಾಥವಾದ 83 ಶವ; ಕೃತಕ ಬುದ್ಧಿಮತ್ತೆ ಬಳಸಿ ಮೃತರ ಗುರುತು ಪತ್ತೆಗೆ ಯತ್ನ